Nagpur IAF Officer Wife 
ದೇಶ

IAF ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾರ, ಮತಾಂತರಕ್ಕೆ ಒತ್ತಾಯ ಆರೋಪ; ಇಬ್ಬರ ಬಂಧನ..Nagpur

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ವಾಯು ಪಡೆಯ ಅಧಿಕಾರಿಯ ಪತ್ನಿಯೊಬ್ಬರಿಂದ ಆಘಾತಕಾರಿ ದೂರು ದಾಖಲು
  • IAF ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾರ, ಮಾಂಸ ತಿನ್ನಲು, ಮತಾಂತರಕ್ಕೆ ಒತ್ತಾಯ ಆರೋಪ
  • ಸಂತ್ರಸ್ತೆ ದೂರಿನ ಮೇರೆಗೆ ಇಬ್ಬರು ಸೆರೆ, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ
Nagpur IAF Officer: ನಾಗ್ಪುರದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತೀಯ ವಾಯು ಪಡೆಯ ಅಧಿಕಾರಿಯ ಪತ್ನಿಯೊಬ್ಬರು ತಮ್ಮ ಹಳೆಯ ಸ್ನೇಹಿತನ ವಿರುದ್ಧ ಸಾಲು ಸಾಲು ಆರೋಪ ಹೊರಿಸಿದ್ದಾರೆ. ಅತ್ಯಾಚಾರ, ಬ್ಲ್ಯಾಕ್​ ಮೇಲ್​​, ಮಾಟಮಂತ್ರ ಹಾಗೂ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮೌಲ್ವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಆರೋಪಿಗಳನ್ನು ಅಯಾಜ್ ಮದಾರೆ ಮತ್ತು ಆತನ ಸಹಚರ ಅಮೀನ್ ಶೇಖ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಮೌಲ್ವಿ ಹುಡುಕಾಟಕ್ಕಾಗಿ ಮಧ್ಯಪ್ರದೇಶಕ್ಕೆ ಪೊಲೀಸ್​ ತಂಡವನ್ನು ಕಳುಹಿಸಲಾಗಿದೆ ಎನ್ನಲಾಗಿದೆ.

ಎಫ್​​ಐಆರ್​ನಲ್ಲಿ ಏನಿದೆ?

2025 ಫೆಬ್ರವರಿ 8ರಂದು ಖಾಸಗಿ ಹೋಟೆಲ್​​ನಲ್ಲಿ ಸಭೆ ಇತ್ತು. ಈ ವೇಳೆ ಅಯಾಜ್​ 24 ವರ್ಚದ ಸಂತ್ರಸ್ತೆಗೆ ಮತ್ತು ಬರುವ ಪಾನೀಯ ಕೊಟ್ಟಿದ್ದಾನೆ. ಆಕೆಗೆ ಪ್ರಜ್ಞೆ ಬಂದಾಗ ಗೊತ್ತಾಗಿದ್ದು, ಆತ ಈಕೆಯ ಖಾಸಗಿ ಫೋಟೋ, ವಿಡಿಯೋಗಳನ್ನು ರೆಕಾರ್ಡ್​ ಮಾಡಿದ್ದ ಎಂದು. ನಂತರ ಆಕೆಯ ಪತಿಗೆ ಕಳುಹಿಸುವುದಾಗಿ, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾಲ್ಕು ಲಕ್ಷರೂ ವಸೂಲಿ ಮಾಡಿದ್ದಲ್ಲದೇ, ಪದೇ ಪದೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಗೋಗೆರೆದರೂ ಬಿಡದ ಪಾಪಿ
ಸದ್ಯ ಆಕೆಯೇ ಎಂದು ಗುರುತಿಸಲಾದ ವಿಡಿಯೋವೊಂದು ತನಿಖಾ ಅಧಿಕಾರಿಗಳಿಗೆ ಸಿಕ್ಕಿದೆ. ಇದ್ರಲ್ಲಿ ಸಂತ್ರಸ್ತೆ ಅಳುತ್ತಾ ಆರೋಪಿ ಅಯಾಜ್ ಮದಾರೆ (26) ಮುಂದೆ ಕುಳಿತಿದ್ದಾರೆ. ತನ್ನನ್ನು ಬಿಟ್ಟುಬಿಡುವಂತೆ ಗೋಗೆರೆದಿದ್ದಾರೆ. ನನ್ನನ್ನು ಹೋಗಲು ಬಿಡಿ ಎಂದು ಮಹಿಳೆ ಗೋಳಾಡುತ್ತಿರುವುದು ವಿಡಿಯೋದಲ್ಲಿ ಇದೆ. ಜೊತೆಗೆ ಆತ
ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ ಮತ್ತು ಪದೇ ಪದೇ ತನ್ನ ಮೇಲೆ ಊದುತ್ತಾ ಆಯಾಜ್ ತನ್ನ ಕೈಗಳನ್ನು ಬಲವಂತವಾಗಿ ಹಿಡಿದುಕೊಳ್ಳುತ್ತಿರುವುದು ವೀಡಿಯೊದಲ್ಲಿದೆ. ಆ ಮಹಿಳೆ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವುದು ಕಂಡುಬರುತ್ತದೆ. ಮತಾಂತರದ ಬಗ್ಗೆಯೂ ವಿಡಿಯೋದಲ್ಲಿದೆ.
ಮೇ31ರಂದು ನಡೆದ ಘಟನೆಯಲ್ಲಿ ಆರೋಪಿಯ ಸಹಚರರು ಸಂತ್ರಸ್ತೆಯನ್ನು ಬಲವಂತವಾಗಿ ಕಲ್ಮೇಶ್ವರಕ್ಕೆ ಕರೆದೊಯ್ದರು. ಅಲ್ಲಿ, ಮೂರನೇ ಆರೋಪಿ - ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ತಮಿಯಾ ಗ್ರಾಮದ ಹಜರತ್ ಮೌಲಾನಾ ಮತಾಂತರಕ್ಕೆ ಒತ್ತಾಯಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮಾಂಸ ತಿನ್ನಲು ಹಾಗೂ ಕಲ್ಮಾ ಪಠಿಸಲು ಒತ್ತಾಯ ಮಾಡಲಾಯ್ತು ಎಂದಿದ್ದಾರೆ. ಅಲ್ಲಿಂದ ಹೋಟೆಲ್​​ಗೆ ಒತ್ತಾಯವಾಗಿ ಕರೆದುಕೊಂಡು ಹೋಗಿ ಅಯಾಜ್​​ ಎಂಬುವವನು ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಆಕೆಯ ಮನೆಗೆ ಭೇಟಿ ನೀಡಿ ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).