- ಜಬಲ್ಪುರದ ಬರ್ಗಿ ಅಣೆಕಟ್ಟು ಜಲಾಶಯದಲ್ಲಿ ಪ್ರವಾಸಿ ಬೋಟ್ ಮಗುಚಿದ ದುರಂತ.
- ಒಂದೇ ಲೈಫ್ ಜಾಕೆಟ್‌ನಲ್ಲಿ ಮಗುವನ್ನು ತಬ್ಬಿಕೊಂಡೇ ಪ್ರಾಣಬಿಟ್ಟ ತಾಯಿ.
- ತಾಯಿ-ಮಗು ಕುಳಿತಿದ್ದ ಕೊನೇ ಕ್ಷಣದ ವಿಡಿಯೋ ವೈರಲ್
ಜಬಲ್ಪುರ: ಮೇ1 ಶುಕ್ರವಾರ ಮಧ್ಯಪ್ರದೇಶದ ಜಬುಲ್ಪುರದ ಬಾರ್ಗಿ ಅಣೆಕಟ್ಟಿನ ಜಲಾಶಯದಲ್ಲಿ ನಡೆದ ಕ್ರೂಸ್ ಬೋಟ್ (Jabalpur Boat Tragedy) ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಹಡಗು ಮಗುಚುವ ಮುನ್ನ ಕ್ರೂಸ್ನೊಳಗೆ ನೀರು ನುಗ್ಗತಿದ್ದಂತೆ ಅಲ್ಲಿರುವವರು ಲೈಫ್ ಜಾಕೆಟ್ ಧರಿಸುತ್ತಿರುವ ದೃಶ್ಯ ಮತ್ತು ಮಗುವನ್ನು ಬಿಗಿದಪ್ಪಿ ತಾಯಿ ಕುಳಿತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನರ್ಮದಾ ನದಿಗೆ ನಿರ್ಮಿಸಲಾಗಿರುವ ಬಾರ್ಗಿ ಡ್ಯಾಂನಲ್ಲಿ ಪ್ರವಾಸಿಗರಿದ್ದ 30 ಜನ ಪ್ರವಾಸಿಗರಿದ್ದ ಬೋಟ್ ಬಿರುಗಾಳಿಗೆ ಮಗುಚಿ 9 ಜನರು ಮೃತಪಟ್ಟ ಘಟನೆ ನಡೆದಿತ್ತು. ಅದರಲ್ಲಿ 17 ಜನರು ಬದುಕುಳಿದಿದ್ದು, ನಾಲ್ವರಿಗಾಗಿ ತೀವ್ರ ಕಾರ್ಯಾಚರಣೆ ಮುಂದುವರೆದಿದೆ.
ವಿಡಿಯೋದಲ್ಲಿ ಏನಿದೆ?
ದೋಣಿಯೊಳಗೆ ನೀರು ಹರಿಯುತ್ತಿದೆ. ಈ ವೇಳೆ ಹಲವರಿಗೆ ಕ್ರೂಸ್ ಸಿಬ್ಬಂದಿ, ಅತೀ ಅವಸರದಲ್ಲಿ ಲೈಫ್ ಜಾಕೆಟ್ ವಿತರಿಸುತ್ತಿರುವುದು ಕಂಡುಬಂದಿದೆ. ಅದೇ ವೇಳೆ ಕೊನೇ ಸಾಲಿನಲ್ಲಿ ತಾಯಿ ಮತ್ತು ಆಕೆಯ ಮಗು ಬದುಕುವ ಭರವಸೆ ಹೊತ್ತು ಕುಳಿತಿರುವುದು. ಕಾಣಸಿಗತ್ತದೆ. ಕೆಲವರು ಲೈಫ್ ಜಾಕೆಟ್ಗಾಗಿ ಅತ್ತಿಂದಿತ್ತ ಪರದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದುರಂತ ನಡೆದು ಕೆಲವು ಗಂಟೆಗಳ ನಂತರ ತಯಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಸಾವಿನ ಕೊನೇ ಕ್ಷಣದಲ್ಲಿಯೂ ಆಕೆ ಮಗನನ್ನು ಅಪ್ಪಿಕೊಂಡೇ ಇದ್ದಳು. ಈ ದೃಶ್ಯಗಳು ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿ ಮತ್ತು ಘಟನಾ ಸ್ಥಳಕ್ಕೆ ಬಂದಿದ್ದ ಸಚಿವ ರಾಕೇಶ್ ಸಿಂಗ್ ಅವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.
ದುರಂತದಲ್ಲಿ ಮೃತ ಪಟ್ಟಿರುವುದು ಮರೀನಾ ಮಾಸ್ಸಿ ಮತ್ತು ಅವರ ಮಗ. ಈ ಸಮಯದಲ್ಲಿ ಅವರ ಪತಿ ಪ್ರದೀಪ್ ಮಾಸ್ಸಿ ಸಹ ಅಲ್ಲೇ ಇದ್ದರಂತೆ. ಅವರಿಗೆ ಸಿಕ್ಕಂತಹ ಟ್ಯೂಬ್ ಮೂಲಕ ಅವರು ಅವರನ್ನು ರಕ್ಷಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕ್ರೂಸ್ ಸಿಬ್ಬಂದಿ ಪ್ರಯಾಣಿಕರನ್ನು ಹೀನಾಯವಾಗಿ ನಡೆಸಿಕೊಂಡ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕಾನೂನು ಏನು ಹೇಳುತ್ತದೆ?
ಒಳನಾಡು ಹಡಗುಗಳ ಕಾಯ್ದೆ 2021ರ ಪ್ರಕಾರ, ಪ್ರಯಾಣಿಕರು ಹಡಗು ಏರುವ ಮುನ್ನ ಕ್ರೂಸ್ ಸಿಬ್ಬಂದಿ ಅವರಿಗೆ ಲೈಫ್ ಜಾಕೆಟ್ ಅನ್ನು ಮೊದಲೇ ವಿತರಿಸಬೇಕಿತ್ತು,. ಆದರೆ, ದುರಂತ ಸಂಭವಿಸಿದ ನಂತರ ಈ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಯಾಣಿಕರ ಮಾತೇ ಕೇಳಿರಲಿಲ್ವಂತೆ
ಸಂಜೆ 6 ಗಂಟೆ ಸುಮಾರಿಗೆ ಬಿರುಗಾಳಿ ಬೀಸುತ್ತಿದ್ದರಿಂದ ಪ್ರಯಾಣಿಕರು ಹೆಗನ್ನು ವಾಪಸ್ ತಿರುಗಿಸಲು ಮನವಿ ಮಾಡಿಕೊಂಡಿದ್ದರಂತೆ ಆದರೆ, ಜ್ಯಾರೆ ಅನ್ನದೇ ಕ್ರೂಸ್ ಸಿಬ್ಬಂದಿ ತೆರಳಿದ್ದೇ ಈ ಅವಘಡಕ್ಕೆ ಕಾರಣ ಎಂದು ಬದುಕುಳಿದ ಸಿಬ್ಬಂದಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).