Tamil Nadu CM Vijay 
ದೇಶ

ಸಿಎಂ ಜೋಸೆಫ್ ವಿಜಯ್ ಕಚೇರಿಯಲ್ಲೇ ಸಿನಿಮಾ ಸ್ಟೈಲ್ ರೀಲ್ಸ್?; ವಿವಾದದ ಹಿಂದಿರುವ ಸತ್ಯಾಂಶ ಇಲ್ಲಿದೆ..Tamil Nadu

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಸಿಎಂ ಮತ್ತು ವಿಕಲಾಂಗ ಚೇತನರ ಸಂಘಟನೆಗಳ ಪ್ರತಿನಿಧಿಗಳ ನಡುವಿನ ಸಭೆಯ ವಿಡಿಯೋ ವೈರಲ್.
  • ಸರ್ಕಾರಿ ಕಚೇರಿಯನ್ನು ಪ್ರಚಾರದ 'ರೀಲ್ಸ್'ಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ಷೇಪ
  • ವಿಡಿಯೋ ರೆಕಾರ್ಡ್ ಮಾಡಿದ್ದು ಸರ್ಕಾರಿ ಅಧಿಕಾರಿಯಲ್ಲ ಎಂದು ಸ್ಪಷ್ಟನೆ ಕೊಟ್ಟ ಸಾಮಾಜಿಕ ಕಾರ್ಯಕರ್ತ
Tamil Nadu CM Vijay:
ತಮಿಳುನಾಡು ಸಿಎಂ ವಿಜಯ್​​ ಅವರೊಂದಿಗೆ ಸಚಿವಾಲಯದಲ್ಲಿ ನಡೆದ ಸಭೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಚೆನ್ನೈನ ತಮಿಳುನಾಡು ಸಚಿವಾಲಯದಲ್ಲಿ ಸಿಎಂ ಮತ್ತು ವಿಕಲಾಂಗ ಚೇತನರ ಹಕ್ಕುಗಳಿಗಾಗಿ ಹೋರಾಡುವ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ಏರ್ಪಾಡಾಗಿತ್ತು. ಈ ಸಂವಹನದ ದೃಶ್ಯಗಳನ್ನು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ 'ರೀಲ್ಸ್ ರೂಪದಲ್ಲಿ ಹಂಚಿಕೊಂಡಿದ್ದರು. ಸರ್ಕಾರಿ ಜಾಗವನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ನೆಟ್ಟಿಗರು ವಿರೋಧ ವ್ಯಕ್ತೊಡಿಸಿದ್ದರು. ಈ ಕ್ಲಿಪ್ ಸಿನಿಮಾ ದೃಶ್ಯದಂತಿದೆ ಎಂದು ಕೆಲವರು ವ್ಯಂಗ್ಯವಾಡಿದ್ದರೆ, ಇನ್ನು ಕೆಲವರು ಸಭೆಯ ಗೌಪ್ಯತೆ ಮತ್ತು ನಿಯಮಾವಳಿಗಳ ಬಗ್ಗೆ ಪ್ರಶ್ನೆ ಎತ್ತಿದ್ದರು.
ಸಿಎಂ ಪರ್ಮಿಶನ್ ಪಡೆದು ವಿಡಿಯೋ ಮಾಡಿದ್ದು
ವಿವಾದ ತಾರಕಕ್ಕೇರುತ್ತಿದ್ದಂತೆ, ಈ ಕುರಿತು ಸತ್ಯಾಂಶ ಹೊರಬಂದಿದೆ. ಈ ವಿಡಿಯೋವನ್ನು ಯಾವುದೇ ಸರ್ಕಾರಿ ಅಧಿಕಾರಿ ರೆಕಾರ್ಡ್ ಮಾಡಿಲ್ಲ. ಬದಲಿಗೆ ತಮಿಳುನಾಡಿನ ಪ್ರಮುಖ ಸಾಮಾಜಿಕ ಕಾರ್ಯಕರ್ತ ಮತ್ತು ವಿಕಲಾಂಗ ಚೇತನರ ಹಕ್ಕುಗಳ ಪರ ಹೋರಾಟಗಾರರಾದ ಡಾ. ಪಿ. ಸಿಮ್ಮಚಂದ್ರನ್ ಅವರು ಇದನ್ನು ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇವರು 'ತಮಿಳುನಾಡು ಡಿಫರೆಂಟ್ಲಿ ಏಬಲ್ಡ್ ಫೆಡರೇಷನ್ ಚಾರಿಟಬಲ್ ಟ್ರಸ್ಟ್'ನ ಅಧ್ಯಕ್ಷರಾಗಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಾ. ಸಿಮ್ಮಚಂದ್ರನ್, "ಮುಖ್ಯಮಂತ್ರಿ ವಿಜಯ್ ಅವರ ಅನುಮತಿ ಪಡೆದ ನಂತರವೇ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ವಿಕಲಾಂಗ ಚೇತನರ ಸಂಘಟನೆಗಳೊಂದಿಗಿನ ಸಭೆಯ ನೆನಪಿಗಾಗಿ ಇದನ್ನು ತೆಗೆದುಕೊಳ್ಳಲಾಗಿದ್ದು, ನಂತರ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ," ಎಂದು ತಿಳಿಸಿದ್ದಾರೆ.

ನೆಟ್ಟಿಗರು ಏನಂದ್ರು?

ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಪ್ರತಿಯೊಂದು ನಡೆ ಸಾರ್ವಜನಿಕ ಗಮನ ಸೆಳೆಯುತ್ತಿದೆ. ಈ ವೈರಲ್ ವಿಡಿಯೋಗೆ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ಅವರ ಬೆಂಬಲಿಗರು ಇದನ್ನು ಮುಖ್ಯಮಂತ್ರಿಯವರ ಪಾರದರ್ಶಕತೆ, ಸರಳತೆ ಮತ್ತು ಸಾರ್ವಜನಿಕರಿಗೆ ಅವರು ಸುಲಭವಾಗಿ ಸಿಗುತ್ತಾರೆ ಎಂಬುದಕ್ಕೆ ಸಾಕ್ಷಿ" ಎಂದು ಶ್ಲಾಘಿಸಿದ್ದಾರೆ.

"ಇಂತಹ ಅಧಿಕೃತ ಸರ್ಕಾರಿ ಸಭೆಗಳನ್ನು ಪ್ರಚಾರದ ವೇದಿಕೆಯನ್ನಾಗಿ ಅಥವಾ ಪಬ್ಲಿಸಿಟಿ ಕಂಟೆಂಟ್ ಆಗಿ ಪರಿವರ್ತಿಸುವುದು ಸರಿಯಲ್ಲ" ಎಂದು ವಾದಿಸಿದ್ದಾರೆ. ಡಿಜಿಟಲ್ ಯುಗದಲ್ಲಿ ರಾಜಕೀಯ ಸಂವಹನ ಮತ್ತು ಆಡಳಿತಾತ್ಮಕ ಕಾರ್ಯವೈಖರಿಯ ನಡುವಿನ ಗೆರೆ ಅಸ್ಪಷ್ಟವಾಗುತ್ತಿರುವುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.(ಏಜೆನ್ಸೀಸ್).