Vladimir Putin India Visit | ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಸ್ವಾಗತಿಸಲು ವಾರಣಾಸಿಯ ಮಹಿಳೆಯರು ಆರತಿ ಮಾಡುತ್ತಿರುವ ದೃಶ್ಯಗಳು (ಕೃಪೆ-ANI)
ಲಕ್ನೋ: ಎರಡು ದಿನಗಳ ಭೇಟಿಗಾಗಿ ಇಂದು ಸಂಜೆ (ಗುರುವಾರ ಡಿ.3) ಭಾರತಕ್ಕೆ ಆಗಮಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಸ್ವಾಗತಿಸಲು ವಾರಣಾಸಿಯ ಮಹಿಳೆಯರು ಆರತಿ ಮಾಡುತ್ತಿರುವ ದೃಶ್ಯಗಳು ಅಂತರ್ಜಾಲದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿವೆ.
ಎಎನ್‌ಐ ಸುದ್ದಿ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ವಾರಣಾಸಿಯ ಸ್ಥಳೀಯರು ಪುಟಿನ್ ಫೋಟೋ ಮುಂದೆ ಆರತಿ ಬೆಳಗುವುದನ್ನು ಕಾಣಬಹುದು. ಈ ಕ್ಲಿಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ಕೈಕುಲುಕುತ್ತಿರುವ ಚಿತ್ರಗಳನ್ನು ಒಳಗೊಂಡ ಭಾರತ್-ರಷ್ಯಾ ದೋಸ್ತಿ ಜಿಂದಾಬಾದ್ ಎಂಬ ಬ್ಯಾನರ್ ಪಕ್ಕದಲ್ಲಿ ಭಾರತೀಯ ಧ್ವಜಗಳನ್ನು ಬೀಸುತ್ತಿರುವ ಪುರುಷರು ಇದ್ದಾರೆ. ನಂತರ ಈ ತಂಡ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಇಬ್ಬರೂ ನಾಯಕರಿಗೆ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಗೂ ಮುನ್ನ ವಾರಣಾಸಿಯಲ್ಲಿ ಜನರು ಆರತಿ ಬೆಳಗುತ್ತಿದ್ದಾರೆ ಮತ್ತು ಸ್ವಾಗತ ಮೆರವಣಿಗೆ ನಡೆಸುತ್ತಾರೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬ, ವಾಟ್ಸಾಪ್ ವಿಶ್ವವಿದ್ಯಾಲಯದ ಪಠ್ಯಕ್ರಮವು ಫಾರ್ವರ್ಡ್ ಮೌಸಿ ಕಲಿಸಿದ ಅಂತರರಾಷ್ಟ್ರೀಯ ಸಂಬಂಧಗಳನ್ನು ಸೇರಿಸಿದಾಗ ಹೀಗಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ
ಉಕ್ರೇನ್ ಯುದ್ಧ ಪ್ರಾರಂಭವಾದ ಬಳಿಕ ಪುಟಿನ್ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದು. ಉಭಯ ದೇಶಗಳ ನಡುವಿನ ಪ್ರಮುಖ ರಾಜತಾಂತ್ರಿಕ ನಿರ್ಧಾರಗಳ ಬಳಿಕ 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಗುರುವಾರ ಸಂಜೆ ನವದೆಹಲಿಗೆ ಆಗಮಿಸಲಿದ್ದಾರೆ. ಇದಾದ ಕೆಲ ಸಮಯದ ಬಳಿಕ ರಷ್ಯಾದ ಅಧ್ಯಕ್ಷರು, ಪ್ರಧಾನಿ ಮೋದಿ ಆಯೋಜಿಸಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಭಾರತ-ರಷ್ಯಾ ಶೃಂಗಸಭೆಯ ಸಂದರ್ಭದಲ್ಲಿ, ವ್ಯಾಪಾರ, ಆರ್ಥಿಕತೆ, ಆರೋಗ್ಯ ರಕ್ಷಣೆ, ಸಂಸ್ಕೃತಿ, ಶೈಕ್ಷಣಿಕದಂತಹ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಈ ವಿಶಾಲ ಕಾರ್ಯಸೂಚಿ ಹೊಂದಿದೆ(ಏಜೆನ್ಸೀಸ್).