ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಪಣಜಿ: ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಮಹಾತ್ಮ ಗಾಂಧಿ, ನೆಹರೂ, ವಾಜಪೇಯಿ ವಿರುದ್ಧವೂ ದೂರು ದಾಖಲಿಸಿ ಎಂದು ಕಿಡಿಕಾರಿದ್ದಾರೆ.
ಗೋವಾದಲ್ಲಿ ಮಂಗಳವಾರ(ಆ. 18) ಸುದ್ದಿಗಾರರೊಂದಿಗೆ ಮಾತನಾಡಿರುವ ಖರ್ಗೆ, ರಾಷ್ಟ್ರಗೀತೆ ವಂದೇ ಮಾತರಂ ಅನ್ನು ಅದರ ಹಿಂದಿನ ಆವೃತ್ತಿಯಲ್ಲಿ ಹಾಡುವುದು ಅಪರಾಧವಾಗಿದ್ದರೆ, ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ವಿರುದ್ಧವೂ ದೂರು ದಾಖಲಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರು ಯಾವ ದೂರು ದಾಖಲಿಸುತ್ತಾರೆ? ಮಹಾತ್ಮ ಗಾಂಧಿಯವರು ಹಾಡಿದ 'ವಂದೇ ಮಾತರಂ' ಅನ್ನೇ ನಾವೂ ಹಾಡಿದೆವು. ಜವಾಹರಲಾಲ್ ನೆಹರೂ ಹಾಡಿದ್ದನ್ನೇ ನಾವೂ ಹಾಡಿದೆವು. ಕಳೆದ 18 ವರ್ಷಗಳಿಂದ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹಾಡಿದ್ದೂ ಸೇರಿದಂತೆ, 12 ಸಿಎಂ ಆಗಿದ್ದ ಅವಧಿ ಮತ್ತು ಇಷ್ಟು ವರ್ಷ ಮೋದಿ ಸರ್ಕಾರ ಹಾಡಿಕೊಂಡು ಬಂದ ಹಾಡನ್ನೇ ನಾವು ಹಾಡಿದ್ದೇವೆ.
ಇಂದು ಕಾಂಗ್ರೆಸ್ ಅನ್ನು ವಿಮರ್ಶಿಸುವ ವಿಮರ್ಶಕರು ಹುಟ್ಟುವ ಮೊದಲೇ ರಾಷ್ಟ್ರಗೀತೆಗಳ ಕುರಿತು ಕಾಂಗ್ರೆಸ್ ನಿರ್ಣಯವನ್ನು ಅಂಗೀಕರಿಸಿತ್ತು. ಇದು ಅಪರಾಧವಾಗಿದ್ದರೆ, ಕಳೆದ 18 ವರ್ಷಗಳಿಂದ ಅವರು ಇದೇ ಅಪರಾಧ ಮಾಡಿದ್ದಾರೆ. ಇದೇ ಅಪರಾಧವಾಗಿದ್ದರೆ, ಮಹಾತ್ಮ ಗಾಂಧಿಯವರ ವಿರುದ್ಧ ಪ್ರಕರಣ ದಾಖಲಿಸಿ. ಇದೇ ಅಪರಾಧವಾಗಿದ್ದರೆ, ನೆಹರೂ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಎಂದು ಟೀಕಿಸಿದ್ದಾರೆ.
ಶನಿವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯ ಪೂರ್ಣ ಪ್ರಮಾಣದ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚಿಸಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ (ಏಜೆನ್ಸೀಸ್).