ಘಟನೆಯ ಸ್ಥಳ 
ದೇಶ

ಪುಣೆಯಲ್ಲಿ ಮೊದಲ ಬಾರಿ ಹಳಿ ತಪ್ಪಿದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು; ಪ್ರಯಾಣಿಕರು ಸುರಕ್ಷಿತ | Vande Bharat Express

ಪುಣೆ: ಮುಂಬೈನಿಂದ ಸೋಲಾಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್​ಪ್ರೆಸ್ ಇಂದು(ಏ. 27) ಮೊದಲು ಬಾರಿಗೆ ಪುಣೆ ನಿಲ್ದಾಣಕ್ಕೆ ಪ್ರವೇಶಿಸುವಾಗ ಹಳಿ ತಪ್ಪಿದ್ದು, ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಸಿಪಿಆರ್‌ಒ, ಡೈಮಂಡ್ ಕ್ರಾಸಿಂಗ್‌ನಲ್ಲಿ ಕೋಚ್ ಟ್ರಾಲಿಯೊಂದು ಹಳಿತಪ್ಪಿದೆ ಎನ್ನಲಾಗಿದೆ. ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಅವರನ್ನು ಬೇರೆ ಕೋಚ್‌ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ರೈಲು ಹಳ್ಳಿದ ಹಿನ್ನೆಲೆ ಪುಣೆ ಮಾರ್ಗದಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ. 2019ರಲ್ಲಿ ಆರಂಭವಾದ ವಂದೇ ಭಾರತ ರೈಲು, ಅಲ್ಲಿಂದ ಇಲ್ಲಿಯವರೆಗೆ ರೈಲು ಹಳಿ ತಪ್ಪಿದ್ದು ಇದೇ ಮೊದಲ ಘಟನೆ ಎಂದು ಹೇಳಲಾಗುತ್ತಿದೆ. ವಂದೇ ಭಾರತ್ ರೈಲುಗಳನ್ನು ಅತ್ಯಂತ ಸುರಕ್ಷಿತ ರೈಲುಗಳೆಂದು ಕರೆಯಲಾಗುತ್ತದೆ. ಈ ರೈಲುಗಳಲ್ಲಿ ಕವಚ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ (ಏಜೆನ್ಸೀಸ್).