mother dies after son death 
ದೇಶ

2 ವರ್ಷದ ಹಿಂದೆ ಮಗಳು, ಈಗ ಮಗನ ಅಕಾಲಿಕ ಸಾವು; ದುಃಖ ತಡೆಯಲಾರದೆ ಸರಯೂ ನದಿಗೆ ಹಾರಿದ ತಾಯಿ!..Uttarakhand

ಮಮತಾ

ಪ್ರಮುಖ ಮುಖ್ಯಾಂಶಗಳು

  • ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟ 14 ವರ್ಷದ ಬಾಲಕ
  • 2 ವರ್ಷದ ಹಿಂದೆ ಮಗಳು, ಈಗ ಮಗನ ಕಳೆದುಕೊಂಡ ನೋವಲ್ಲಿ ತಾಯಿ ಆತ್ಮಹತ್ಯೆ
  • ಸರಯು ನದಿಗೆ ಹಾರಿ ಪ್ರಾಣ ಕಳೆದುಕೊಮಡ ತಾಯಿ, ಮೃತದೇಹ ಪತ್ತೆ
Mother dies after son death: ಉತ್ತರಾಖಂಡದ ಪಿಥೋರಗಢ್​​ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಮಗನ ಅಕಾಲಿಕ ಸಾವನ್ನು ಸಹಿಸದ ತಾಯಿಯೊಬ್ಬರು ಸರಯೂ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆಯು ಸದ್ಯ ಗ್ರಾಮದ ಜನರನ್ನು ಶೋಕಸಾಗರದಲ್ಲಿ ಮುಳುಗಿಸುವಂತೆ ಮಾಡಿದೆ.
ಹೌದು, 14 ವರ್ಷದ ಜತಿನ್ ಜೋಶಿ ಎಂಬುವವರು ಎಂದಿನಂತೆ ಮಾರ್ನಿಂಗ್ ರನ್​ಗಾಗಿ ಝೌಲ್‌ಖೇತ್ ಕ್ರೀಡಾ ಮೈದಾನಕ್ಕೆ ಶನಿವಾರ 6:30ಜ್ಜೆ ತೆರಳಿದ್ದರು. ಆದರೆ, ದುರಾದೃಷ್ಟವಶಾತ್​ ಅವರು ಮೈದಾನದಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ. ತಕ್ಷಣ ಆತನ ತಾಯಿ ಪೂನಮ್ ಜೋಶಿ ಮಗನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ಮಾರ್ಗ ಮಧ್ಯೆಯಲ್ಲಿಯೇ ಜತಿನ್ ಜೋಶಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಸರಯೂ ನದಿಗೆ ಹಾರಿದ ತಾಯಿ

ಮಗನ ಸಾವಿನ ನಂತರ ಮನೆಗೆ ತೆರಳುವ ಬದಲಾಗಿ ಪೂನಮ್​ ಗಂಗೋಲಿ ಘಾಟ್​ಗೆ ತೆರಳುತ್ತಿದ್ದ ಟ್ಯಾಕ್ಸಿ ಹತ್ತಿಕೊಂಡಿದ್ದಾರೆ. ಮೂವತ್ತು ಕಿ,ಮೀ ಪ್ರಯಾಣಿಸಿ, ಸೇತುವೆ ಬಳಿ ಬರುತ್ತಿದ್ದಂತೆ ಕಾರು ನಿಲ್ಲಿಸಲು ಕೇಳಿಕೊಂಡಿದ್ದಾರೆ. ಆನಂತರ ನೋಡನೋಡುತ್ತಿದ್ದಂತೆ ಸರಯೂ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಟ್ಯಾಕ್ಸಿ ಮೂಲಕ ಬಂದ ಆಕೆ ನದಿ ಬಳಿ ಇಳಿಯುತ್ತಿದ್ದಂತೆ ಆಕೆ ಏಕಾಏಕಿ ನೀರಿಗೆ ಧುಮಿಕಿದರು. ಆದರೆ, ನೀರಿನ ವೇಗಕ್ಕೆ ಅವರು ಕಾಣೆಯಾದರು. ಆ ಕೂಡಲೇ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ರಾಜ್ಯ ವಿಪತ್ತಯ ಸ್ಪಂದನಾ ಪಡೆ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿ ಆಕೆಯ ಮೃತದೇಹವನ್ನು ಹೊರ ತೆಗೆದರು.

2 ವರ್ಷದ ಹಿಂದೆ ಮಗಳು ನಿಧನ

ಎರಡು ವರ್ಷಗಳ ಹಿಂದಷ್ಟೇ ಪೂನಮ್ ಜೋಶಿ ತಮ್ಮ ಮಗಳನ್ನು ಕಳೆದುಕೊಂಡಿದ್ದರು. ಮಕ್ಕಳನ್ನು ಕಳೆದುಕೊಂಡ ನೋವಿನಲ್ಲಿ ನೊಂದಿದ್ದ ತಾಯಿ ಪೂನಮ್ ಜೋಶಿ, ಮಗನ ಚಿತೆ ಏರುವ ಮುನ್ನವೇ ನದಿಗೆ ಹಾರಿ ಜೀವ ಬಿಟ್ಟಿರುವುದು ಮಾಡೆ ಗ್ರಾಮಸ್ಥರನ್ನು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರನ್ನು ತೀವ್ರ ಆಘಾತಕ್ಕೊಳಪಡಿಸಿದೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಕಾರಲ್ಲಿ ವೈದ್ಯ ಸಜೀವದಹನ
ಹೈದರಾಬಾದ್: ರಸ್ತೆ ವಿಭಜಕಕ್ಕೆ ಕಾರು ಬಡಿದು ವೈದ್ಯರೊಬ್ಬರು ಜೀವಂತ
ದಹನವಾದ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಖಮ್ಮಮ್‌ನ ಮಮತಾ ಆಸ್ಪತ್ರೆ ನರರೋಗಶಾಸ್ತ್ರಜ್ಞ ಕಸಕುರ್ತಿ ಜಗದೀಶ್ ಎಂದು ಗುರುತಿಸಲಾಗಿದೆ. ಅವರು ಕುಟುಂಬ ಸದಸ್ಯರನ್ನು ಭೇಟಿಯಾಗಲು ಖಮ್ಮ ಮ್‌ನಿಂದ ಹೈದರಾಬಾದ್ ಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ರಸ್ತೆ ವಿಭಜಕಕ್ಕೆ ಬಡಿದ ವೋಲ್ಲೊ ಕಾರು ಬೆಂಕಿಯುಂಡೆಯಾಗಿ ಉರುಳಿ ಅದರಲ್ಲಿದ್ದ ಜಗದೀಶ್ ಜೀವಂತ ಸುಟ್ಟುಹೋದರು. ನಿದ್ದೆ ಮಂಪರಿನಲ್ಲಿದ್ದ ಕಾರಣ ದುರ್ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾರಿಹೋಕರು ತಕ್ಷಣ ಪೊಲೀಸರಿಗೆ ತಿಳಿಸಿದರೂ ಬೆಂಕಿ ಆವರಿಸಿದ್ದರಿಂದ ಏನೂ ಮಾಡಲಾಗಲಿಲ್ಲ. ಅಗ್ನಿಶಾಮಕ ಪಡೆಯವರು ಬಂದು ರಕ್ಷಿಸಲು ಪ್ರಯತ್ನಿಸುವುದರೊಳಗೆ ಅವರು ಸುಟ್ಟು ಕರಕಲಾಗಿದ್ದರು.
(ಏಜೆನ್ಸೀಸ್).