ಮದರಸಾಗಳ ಶುಕ್ರವಾರದ ರಜೆ ರದ್ದುಗೊಳಿಸಿದ ಸಿಎಂ ಧಾಮಿ 
ದೇಶ

ಎಲ್ಲರಿಗೂ ಒಂದೇ ನಿಯಮ!...ಮದರಸಾಗಳ ಶುಕ್ರವಾರದ ರಜೆ ರದ್ದುಗೊಳಿಸಿ ಸಿಎಂ ಧಾಮಿ ಐತಿಹಾಸಿಕ ನಿರ್ಧಾರ: ಕಾಂಗ್ರೆಸ್​ ವಿರೋಧ! | Madrasa Friday Holiday

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರವು ಮದರಸಾಗಳ ರಜೆ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು (Madrasa Friday Holiday) ಅಧಿಕೃತವಾಗಿ ರದ್ದುಪಡಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಇನ್ನುಮುಂದೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಭಾನುವಾರವೇ ವಾರದ ರಜೆಯಾಗಿರಲಿದೆ ಎಂದು ಘೋಷಿಸಿದ್ದಾರೆ.

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರವು ಮದರಸಾಗಳ ರಜೆ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು (Madrasa Friday Holiday) ಅಧಿಕೃತವಾಗಿ ರದ್ದುಪಡಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಇನ್ನುಮುಂದೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಭಾನುವಾರವೇ ವಾರದ ರಜೆಯಾಗಿರಲಿದೆ ಎಂದು ಘೋಷಿಸಿದ್ದಾರೆ. ಈ ನಿರ್ಧಾರವು ಹೊಸ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಜುಲೈ 1 ರಂದು ಉತ್ತರಾಖಂಡದಲ್ಲಿ ಮದರಸೊ ಶಿಕ್ಷಣ ವ್ಯವಸ್ಥೆಯನ್ನು ರದ್ದುಪಡಿಸಲಾಗಿದ್ದು, ಈ ದಿಟ್ಟ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಗೆ ಉತ್ತರಾಖಂಡ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಈಗ ಧಾಮಿ ನೇತೃತ್ವದ ರಾಜ್ಯ ಸರ್ಕಾರವು ಮದರಸಾಗಳಲ್ಲಿ ಶುಕ್ರವಾರದ ರಜೆ ರದ್ದುಪಡಿಸಿ, ಭಾನುವಾರ ಏಕರೂಪ ರಜೆ ಜಾರಿಗೆ ತರುವ ಮೂಲಕ ಮತ್ತೊಂದು ಸಂಚಲನ ಮೂಡಿಸಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ: ಸಿಎಂ ಧಾಮಿ

ಪೊಲೀಸ್ ಲೈನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆ (UCC) ಜಾರಿಯಲ್ಲಿದ್ದು, ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಮತ್ತು ಕಾನೂನುಗಳು ಇರಬೇಕು, ಈ ತತ್ವವು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುವುದರಿಂದ ರಾಜ್ಯದ ಎಲ್ಲಾ ಮದರಸಾಗಳಲ್ಲಿ ಇನ್ನು ಮುಂದೆ ಶುಕ್ರವಾರದ ಬದಲಿಗೆ ಭಾನುವಾರವೇ ರಜೆ ಇರಲಿದೆ ಎಂದು ಸಿಎಂ ಧಾಮಿ ಅಧಿಕೃತವಾಗಿ ಪ್ರಕಟಿಸಿದರು.

ಸಿಎಂ ಧಾಮಿ ಅವರ ಈ ನಿರ್ಧಾರವನ್ನು ವಿರೋಧಿಸಿರುವ ಕಾಂಗ್ರೆಸ್, ಇದು ಕೇವಲ ರಾಜಕೀಯ ಸ್ಟಂಟ್ ಎಂದಿದೆ. ಪಕ್ಷದ ರಾಜ್ಯ ವಕ್ತಾರರಾದ ಡಾ. ಪ್ರತಿಮಾ ಸಿಂಗ್ ಮಾತನಾಡಿ, ಮಸೀದಿಗಳು ಮತ್ತು ಮದರಸಾಗಳನ್ನು ಹೊರತುಪಡಿಸಿ ಸರ್ಕಾರಕ್ಕೆ ಬೇರೆ ಯಾವುದೇ ವಿಷಯದ ಬಗ್ಗೆ ಗಮನವಿಲ್ಲ ಎಂದು ಟೀಕಿಸಿದರು. ವಿಶೇಷ ಪ್ರಾರ್ಥನೆಗಳನ್ನು (ನಮಾಜ್) ಸಲ್ಲಿಸಲು ಅನುಕೂಲವಾಗುವಂತೆ ಹಿಂದೆ ಶುಕ್ರವಾರ ರಜೆ ನೀಡಲಾಗಿತ್ತು ಎಂದು ಅವರು ಇದೇ ವೇಳೆ ಉಲ್ಲೇಖಿಸಿದರು.

ಇದನ್ನೂ ಓದಿ:ನೀವು ಜೆನ್-ಜೀ ಅಲ್ಲ, ನಿಮ್ಮ ಉದ್ದೇಶವೇನು..? ಹೈಕೋರ್ಟ್ ಚಾಟಿ ಬೆನ್ನಲ್ಲೇ ಅರ್ಜಿ ವಾಪಸ್ ಪಡೆದ ರಾಂಕಾ-ದಾಸ್​! | Delhi High Court

ಮದರಸಾಗಳ ವ್ಯವಸ್ಥೆಯನ್ನು ಮೊಟಕುಗೊಳಿಸಲಾಗಿದ್ದರೂ, ಅಸ್ತಿತ್ವದಲ್ಲಿರುವ ಉಳಿದ ಮದರಸಾಗಳ ದುಸ್ಥಿತಿಯ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದು ಕೈ ನಾಯಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ಕೆಲವು ವ್ಯಕ್ತಿಗಳು ಕೂಡ ಸರ್ಕಾರದ ಈ ನಿರ್ಧಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಶಿಕ್ಷಕರಿಂದ ಈ ಘೋಷಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಮ್ದಾದ್-ಉಲ್-ಉಲೂಮ್‌ನ ಸಂಯೋಜಕರಾದ ಶಮಾ ಖಾನ್ ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಇನ್ನು ಕೆಲವು ಶಿಕ್ಷಕರು ಸರ್ಕಾರದ ಆದೇಶವನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ನಮಾಜ್ ಮಾಡಲು ಅನುಕೂಲವಾಗುವಂತೆ ಶುಕ್ರವಾರ ಅರ್ಧ ದಿನದ ರಜೆ ನೀಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯವನ್ನೂ ಕೆಲವು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.

ದಸರಾ ಉತ್ಸವದಲ್ಲಿ ಸಿಎಂ ಧಾಮಿ ಭಾಗಿ!

ಇನ್ನೊಂದೆಡೆ, ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ಬನ್ನು ಬಿರಾದರಿ ಆಯೋಜಿಸಿದ್ದ ವಿಜಯದಶಮಿ ಹಾಗೂ ದಸರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಜನತೆಗೆ ಹಬ್ಬದ ಶುಭ ಕೋರಿದ ಅವರು, ಎಲ್ಲರ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಹಬ್ಬವನ್ನು ಯಶಸ್ವಾಗಿ ಆಯೋಜಿಸಿದ ಬನ್ನು ಬಿರಾದರಿಯ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರನ್ನು ಸಿಎಂ ಅಭಿನಂದಿಸಿದರು(ಏಜೆನ್ಸೀಸ್​).