Priyanka Chaturvedi 
ದೇಶ

ಮಹಿಳೆಯರ ಅಶ್ಲೀಲ ಚಿತ್ರ ಸೃಷ್ಟಿಸಲು 'Grok AI' ಬಳಕೆ: ಕೇಂದ್ರ ಸಚಿವರಿಗೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಪತ್ರ! Priyanka Chaturvedi

ಪ್ರಮುಖ ಮುಖ್ಯಾಂಶಗಳು

  • AI ಚಾಟ್‌ಬಾಟ್ ಗ್ರೋಕ್​ನ್ನು ಪುರುಷರು ಮಹಿಳೆಯರ ಛಾಯಾಚಿತ್ರಗಳನ್ನು ಲೈಂಗಿಕವಾಗಿ ರಚಿಸಲು ಬಳಸುತ್ತಿದ್ದಾರೆ
  • ಮೈಮೇಲಿನ ಬಟ್ಟೆಗಳನ್ನು ಕಡಿಮೆ ಮಾಡಲು ಮತ್ತು ಅವರನ್ನು ಲೈಂಗಿಕವಾಗಿ ಬಿಂಬಿಸಲು AI ಬಾಟ್‌ಗೆ ಸೂಚನೆಗಳನ್ನು ನೀಡಲು ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ
  • ಸೃಜನಶೀಲತೆ ಮತ್ತು ನಾವೀನ್ಯತೆಯ ಸೋಗಿನಲ್ಲಿ ಮಹಿಳೆಯರ ಘನತೆ ಹಾಳಾಗ
ನವದೆಹಲಿ: ಜನರ ಗೌಪ್ಯತೆಯನ್ನು ಆನ್‌ಲೈನ್‌ನಲ್ಲಿ ಉಲ್ಲಂಘಿಸಲು X (ಟ್ಟಿಟರ್) ನ AI ಚಾಟ್‌ಬಾಟ್ ಗ್ರೋಕ್​ನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಕಳವಳ ಹೆಚ್ಚುತ್ತಿರುವ ನಡುವೆ, ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಶುಕ್ರವಾರ (ಜ.2) ಚತುರ್ವೇದಿ ಬರೆದ ಪತ್ರದಲ್ಲಿ, AI ಚಾಟ್‌ಬಾಟ್ ಗ್ರೋಕ್​ನ್ನು ಪುರುಷರು ಮಹಿಳೆಯರ ಛಾಯಾಚಿತ್ರಗಳನ್ನು ಲೈಂಗಿಕವಾಗಿ ರಚಿಸಲು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಮಹಿಳೆಯರ ಅರೆನಗ್ನ ಫೋಟೋಗಳನ್ನು ಅಪ್‌ಲೋಡ್ ಮಾಡಲು ಮತ್ತು ಅವರ ಮೈಮೇಲಿನ ಬಟ್ಟೆಗಳನ್ನು ಕಡಿಮೆ ಮಾಡಲು ಮತ್ತು ಅವರನ್ನು ಲೈಂಗಿಕವಾಗಿ ಬಿಂಬಿಸಲು AI ಬಾಟ್‌ಗೆ ಸೂಚನೆಗಳನ್ನು ನೀಡಲು ನಕಲಿ ಖಾತೆಗಳನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದು ಮಹಿಳೆಯರ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಜತೆಗೆ ಅವರ ಚಿತ್ರಗಳ ಅನಧಿಕೃತ ಬಳಕೆಯು ಅನೈತಿಕ ಮಾತ್ರವಲ್ಲ, ಅಪರಾಧವೂ ಆಗಿದೆ ಎಂದು ಸಂಸದರು ಬರೆದಿದ್ದಾರೆ. ಸೃಜನಶೀಲತೆ ಮತ್ತು ನಾವೀನ್ಯತೆಯ ಸೋಗಿನಲ್ಲಿ ಮಹಿಳೆಯರ ಘನತೆಯನ್ನು ಸಾರ್ವಜನಿಕವಾಗಿ ಮತ್ತು ಡಿಜಿಟಲ್ ಆಗಿ ಉಲ್ಲಂಘಿಸಲಾಗುತ್ತಿರುವಾಗ ಮೂಕ ಪ್ರೇಕ್ಷಕರಾಗಿ ಕೂತಿರಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪತ್ರದ ಪ್ರತಿಗಳನ್ನು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್ ಕೃಷ್ಣನ್ ಅವರಿಗೂ ರವಾನಿಸಲಾಗಿದೆ,(ಏಜನ್ಸೀಸ್).