ನವದೆಹಲಿ: ಭಾರತದ ಉತ್ಪಾದನೆ ಆಧರಿತ ಪೋ›ತ್ಸಾಹ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್- ಪಿಎಲ್ಐ) ಯೋಜನೆ ಸೇರಿದಂತೆ ಹಲವು ಸರ್ಕಾರಿ ಕಾರ್ಯಕ್ರಮಗಳು ಕೈಗಾರಿಕೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ ಸೃಷ್ಟಿಗೆ ಕಾರಣವಾಗಿವೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (ಯುಎಸ್ಟಿಆರ್) ಆರೋಪಿಸಿದೆ. ಉತ್ಪಾದನೆ ಮತ್ತು ಮಾರಾಟ ಹೆಚ್ಚಳಕ್ಕೆ ಅನುಗುಣವಾಗಿ ಕಂಪನಿಗಳಿಗೆ ಭಾರತ ಸರ್ಕಾರ ಆರ್ಥಿಕ ಪೋ›ತ್ಸಾಹ ನೀಡುತ್ತಿರು ವುದರಿಂದ ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ಸಿಕ್ಕಿದೆ ಎಂದು ವರದಿ ಹೇಳಿದೆ.
2020ರಲ್ಲಿ ಆರಂಭವಾದ ಪಿಎಲ್ಐ ಯೋಜನೆ ಆರಂಭದಲ್ಲಿ 3 ವಲಯಗಳಿಗೆ ಸೀಮಿತವಾಗಿತ್ತು. ಈಗ 14 ವಲಯಗಳಿಗೆ ವಿಸ್ತರಿಸಲಾಗಿದೆ. ಈ ಯೋಜನೆಯಿಂದಾಗಿ ಮೊಬೈಲ್ ಕ್ಷೇತ್ರದಲ್ಲಿ ಆಮದುದಾರನಾಗಿದ್ದ ಭಾರತ ರಫ್ತುದಾರನಾಗಿ ಬದಲಾಗಿದೆ. ದೂರಸಂಪರ್ಕ ಉಪಕರಣಗಳ ಆಮದು ಶೇ. 60ರಷ್ಟು ಕಡಿಮೆಯಾಗಿದೆ. ಔಷಧ ಉತ್ಪಾದನೆಯಲ್ಲೂ ಭಾರತ ಜಾಗತಿಕವಾಗಿ ಪ್ರಮುಖ ಸ್ಥಾನ ಪಡೆದಿದೆ ಎಂದು ವರದಿ ವಿವರಿಸಿದೆ. 2025ರಲ್ಲಿ ಅಮೆರಿಕದೊಂದಿಗೆ ಭಾರತದ ವ್ಯಾಪಾರ 57.3 ಶತಕೋಟಿ ಡಾಲರ್ಗೆ ಏರಿದೆ. 2023ರಲ್ಲಿ ಇದು 42.5 ಶತಕೋಟಿ ಡಾಲರ್ ಇತ್ತು. ಚೀನಾದಿಂದ ಅಗ್ಗದ ಕಚ್ಚಾ ವಸ್ತು ಮತ್ತು ಬಿಡಿಭಾಗಗಳನ್ನು ಆಮದು ಮಾಡಿಕೊಂಡು ತಯಾರಿಸಿದ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ ಎಂಬುದು ಯುಎಸ್ಟಿಆರ್ನ ಮತ್ತೊಂದು ಆಕ್ಷೇಪ.
ಉಕ್ಕು, ಸೌರ ವಿದ್ಯುತ್ ಉಪಕರಣ, ವೈದ್ಯಕೀಯ ಸಾಧನ, ಸೆಮಿಕಂಡಕ್ಟರ್ ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ಸರ್ಕಾರದ ನೆರವು ಹೆಚ್ಚುವರಿ ಉತ್ಪಾದನೆಗೆ ಕಾರಣವಾಗಿದೆ. ಕಾರ್ವಿುಕರ ವೇತನ ಮತ್ತು ಹಕ್ಕುಗಳ ರಕ್ಷಣೆಯಲ್ಲಿನ ಕೊರತೆಯಿಂದ ಉತ್ಪಾದನಾ ವೆಚ್ಚ ಕೃತಕವಾಗಿ ಕಡಿಮೆಯಾಗುತ್ತಿದೆ. ಈ ನೀತಿಗಳು ಅಮೆರಿಕದ ಉತ್ಪಾದಕರು ಮತ್ತು ಕಾರ್ವಿುಕರಿಗೆ ಹಾನಿ ಉಂಟುಮಾಡುತ್ತಿವೆ ಎಂದು ಯುಎಸ್ಟಿಆರ್ ವರದಿ ಆಪಾದಿಸಿದೆ.