ಯಶೋಧ ಅವರ ಇನ್​ಸ್ಟಾಗ್ರಾಮ್​ನಿಂದ ಸಂಗ್ರಹಿಸಿದ ಚಿತ್ರ 
ದೇಶ

ಪತಿಯಿಂದ ಬೈಗುಳ, ಆದ್ರೆ Priyanka Chopraರಿಂದ ಬೆಂಬಲ: ಇಂಗ್ಲಿಷ್ ಮಾತನಾಡಿ ರಾತ್ರೋರಾತ್ರಿ ಸ್ಟಾರ್ ಆದ ಯುಪಿ ಲೇಡಿ

  • ಉತ್ತರ ಪ್ರದೇಶದ ಕೌಶಾಂಬಿಯ ಇಂಗ್ಲಿಷ್ ಶಿಕ್ಷಕಿ ಯಶೋದಾ ಲೋಧಿಗೆ ನಟಿ ಪ್ರಿಯಾಂಕಾ ಚೋಪ್ರಾರಿಂದ ಮೆಚ್ಚುಗೆ

  • ಪತಿಯಿಂದ ಬೈಗುಳ, ನಟಿ-ನಟರಿಂದ ಮೆಚ್ಚುಗೆ ಭಾವುಕರಾದ ಯುಪಿ ಮಹಿಳೆ ಯಶೋಧ

  • ಪ್ರಿಯಾಂಕಾ ಚೋಪ್ರಾ ತಮ್ಮ ಸ್ಟೋರಿಯಲ್ಲಿ ಯಶೋಧರ ವಿಡಿಯೋ ಹಂಚಿಕೊಳ್ಳುತ್ತಲೇ ಫೇಮಸ್ ಆದ ಮಹಿಳೆ

ಉತ್ತರ ಪ್ರದೇಶದ ಯಶೋಧಾ ಲೋಧಿ ಎಂಬ ಮಹಿಳೆ ಈಗ ಸೆಲಬ್ರೆಟಿಗಳಿಗೂ ಇವರ್ಯಾರು ಎಂದು ಗೊತ್ತಾಗುವ ಮಟ್ಟಕ್ಕೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಗ್ರಾಮೀಣ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಅವರಿಗೆ ಇಂಗ್ಲಿಷ್ ಕಲಿಸುವ ಯಶೋಧಾ, ತಾವೇ ಅತ್ಯಂತ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್​​ ಆಗಿದ್ದಾರೆ. ಅವರ ಈ ಪ್ರತಿಭೆ ನೋಡಿ ನಟಿ ಪ್ರಿಯಾಂಕಾ ಚೋಪ್ರಾ, ಮೃಣಾಲ್ ಠಾಕೂರ್ ಮತ್ತು ನಟ ಆರ್. ಮಾಧವನ್ ಕೂಡ ಅಚ್ಚರಿಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಕೌಶಂಬಿಯ ಇಂಗ್ಲಿಷ್ ಶಿಕ್ಷಕಿ ಈ ಯಶೋಧ ಲೋಧಿ. ಇವರು ನಿರ್ಗಗಳವಾಗಿ ಇಂಗ್ಲಿಷ್​ ಮಾತನಾಡುವುದನ್ನು ಕಂಡ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ರಿ ಶೇರ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಿಡಿಸದ್ದರು. ಇದರಿಂದ ಸದ್ಯ ಯಶೋಧಾಗೆ 4 ಲಕ್ಷ ಅನುಯಾಯಿಗಳಿದ್ದಾರೆ.

'ಇಂಗ್ಲಿಷ್ ವಿತ್ ದೇಹತಿ ಮೇಡಂ' ಎನ್ನುವ ಖಾತೆ ಮೂಲಕ ತಮ್ಮನ್ನು ಗುರುತಿಸಿ, ಬೆಂಬಲಿಸಿದ್ದಕ್ಕೆ ನಟಿ ಮೃಣಾಲ್​ ಠಾಕೂರ್​, ಆರ್​ ಮಾಧವನ್, ಅಭಯ್‌ ಡಿಯೋಲ್ ಅವರಿಗೆ ಧ್ಯನವಾದ ತಿಳಿಸಿದ್ದಾರೆ. ಜೊತೆಗೆ ಮೊದಲ ಬಾರಿಗೆ ವಿಡಿಯೋ ಮಾಡಲು ಮುಂದಾದಾಗ ತಮ್ಮ ಗಂಡನಿಂದ ನಿಂದನೆಗೆ ಒಳಗಾಗಿದ್ದು, ನಂತರ ನಟಿಯರಿಂದ ಮೆಚ್ಚುಗೆ ಸಿಕ್ಕ ಬಗ್ಗೆ ಮಾತನಾಡಿದ್ದಾರೆ.

ಯಶೋಧಾ ಹೇಳಿದ್ದಿಷ್ಟು

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಡಿಯೋ ಮಾಡಲು ಮುಂದಾದೆ. ಆಗ ನನ್ನ ಪತಿ ಬೈದು, ಆಕ್ಷೇಪಣೆ ವ್ಯಕ್ತಪಡಿಸಿದರು. ಆದರೂ ನಾನು ಸುಮ್ಮನಾಗಿಲ್ಲ. ಹೇಗೋ ಕಷ್ಟಪಟ್ಟು ವಿಡಿಯೋ ಮುಗಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಅದೇ ವಿಡಿಯೋವನ್ನು ಪ್ರಿಯಾಂಕಾ ಚೋಪ್ರಾ ಮೇಡಂ ಅವರು ಪೋಸ್ಟ್ ಮಾಡಿಕೊಂಡರು. ಇದೊಂದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ. ಇದ್ರಿಂದಾಗಿ ನನಗೆ ನಾಲ್ಕು ಲಕ್ಷ ಫಾಲೋವರ್ಸ್​ ಸಿಕ್ಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಗಂಡ ಬೈದಿದ್ದ, ನಟಿ ಮೆಚ್ಚಿಕೊಂಡ್ರು

ನನಗೆ ಮೊದಲು ಪ್ರಿಯಾಂಕಾ ಚೋಪ್ರಾ ಮೇಡಂ ಶೇರ್ ಮಾಡಿದ್ದ ಬಗ್ಗೆ ಗೊತ್ತಿರಲಿಲ್ಲ. ನನ್ನ ಸ್ಟೂಡೆಂಟ್ಸ್ ಬಂದು ಈ ವಿಚಾರ ತಿಳಿಸಿದಾಗ ಎಷ್ಟೊಂದು ಖುಷಿಯಾಯ್ತು. ಭಾಷೆಯ ತೊಡಕಿನಿಂದ ಹಿಂದೆಳಿಯುವ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಮಹಿಳೆಗೆ ಇಂಗ್ಲಿಷ್ ಅನ್ನು ಸುಲಭವಾಗಿ ತಲುಪಿಸುವುದೇ ತಮ್ಮ ಸರಳ ಕನಸು ಎಂದು ಯಶೋದಾ ತಿಳಿಸಿದ್ದಾರೆ.

ನಮ್ಮ ಸಣ್ಣ ಪ್ರಯತ್ನಗಳು ಕೂಡ ಯಾರದ್ದೋ ಜೀವನದಲ್ಲಿ ಆತ್ಮವಿಶ್ವಾಸ ಮೂಡಿಸಿದರೆ ಅದೇ ನಮಗೆ ದೊಡ್ಡ ಸಾಧನೆ, ಯಾವಾಗಲೂ ನಿಮ್ಮ ಸಣ್ಣ ಪ್ರಯತ್ನಗಳನ್ನು ಕಡಿಮೆ ಎಂದು ಕೊಳ್ಳಬೇಡಿ, ಯಾರು ಗಮನಿಸುತ್ತಿದ್ದಾರೆಂದು ನಿಮಗೆ ತಿಳಿಯುವುದಿಲ್ಲ ಮುಂದೊಂದು ದಿನ ಅದು ಹೆಮ್ಮರವಾಗಿ ಫಲ ಕೊಡುತ್ತದೆ ಎಂದಿದ್ದಾರೆ.

ನಟಿ ಮೃಣಾಲ್​ರಿಂದ ಮೆಚ್ಚುಗೆ

ನಿಮಗೆ ಗೊತ್ತಾ? ನಿಮ್ಮಷ್ಟು ಇಂಗ್ಲಿಷ್​ ನಿರ್ಗಳವಾಗಿ ಮಾತನಾಡಬೇಕು ಎನ್ನುವುದು ಅದೆಷ್ಟೋ ಜನರ ಕನಸು. ನೀವು ತುಂಬಾ ಸ್ಫೂರ್ತಿದಾಯಕವಾಗಿದ್ದೀರಿ ಎಂದು ಬಹುಭಾಷಾ ನಟಿ ಮೃಣಾಲ್​ ಠಾಕೂರ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಯಶೋಧ ಅವರ ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).