Gangajal Oath > ಲಂಚದ ಹಣ ಹಂಚಿಕೊಳ್ಳಲು ಗಂಗಾಜಲದ ಶಪಥ 
ದೇಶ

ಲಂಚದ ಹಣ ಹಂಚಿಕೊಳ್ಳಲು ಗಂಗಾಜಲ ಹಿಡಿದು ಶಪಥ ಮಾಡಿದ ಕಾರ್ಪೊರೇಟರ್‌ಗಳು! ವಿಡಿಯೋ ವೈರಲ್! | Gangajal Oath

ಉತ್ತರ ಪ್ರದೇಶದ ಶಹಜಹಾನ್‌ಪುರ ಮಹಾನಗರ ಪಾಲಿಕೆಯ ಹಲವು ಕಾರ್ಪೊರೇಟರ್‌ಗಳು ಗಂಗಾಜಲ ಹಿಡಿದು (Gangajal Oath), ಲಂಚದ ಹಣವನ್ನು ತಮ್ಮ ನಡುವೆ ಪ್ರಾಮಾಣಿಕವಾಗಿ ಹಂಚಿಕೊಳ್ಳುವುದಾಗಿ ಪ್ರಮಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಕಾರ್ಪೊರೇಟರ್ ಒಬ್ಬರು ಗಂಗಾಜಲವಿರುವ ಪಾತ್ರೆ ಹಿಡಿದು, ಪಾಲಿಕೆಗೆ ಬರುವ ಲಂಚದ ಹಣವನ್ನು ಎಲ್ಲಾ 60 ಕಾರ್ಪೊರೇಟರ್‌ಗಳು ಸಮಾನವಾಗಿ ಹಂಚಿಕೊಳ್ಳುವುದಾಗಿ ಮತ್ತು ಯಾರಾದರೂ ಸಂಕಷ್ಟಕ್ಕೆ ಸಿಲುಕಿದರೆ ಒಗ್ಗಟ್ಟಿನಿಂದ ಇರುವುದಾಗಿ ಪ್ರಮಾಣ ಮಾಡಿದ್ದಾರೆ. ಇದನ್ನು ಇತರ ಕಾರ್ಪೊರೇಟರ್‌ಗಳು ಪುನರುಚ್ಚರಿಸುತ್ತಿರುವುದು ಸೆರೆಯಾಗಿದೆ. ಪ್ರಮಾಣ ಮುರಿಯುವವರನ್ನು ದ್ರೋಹಿ ಎಂದು ಪರಿಗಣಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪಾಲಿಕೆಯಲ್ಲಿನ ಭ್ರಷ್ಟಾಚಾರದ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. "ಮೂರು ವರ್ಷಗಳ ಹಿಂದೆ ಕೇವಲ ಒಂದು ಮನೆ ಹೊಂದಿದ್ದ ಕಾರ್ಪೊರೇಟರ್ ಒಬ್ಬರು, ಈಗ ಹಲವು ಮನೆಗಳು ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತೆ ಸೌಮ್ಯಾ ಗುರುರಾಣಿ, ಈ ವಿಡಿಯೋ 2025ರ ನವೆಂಬರ್‌ಗೆ ಸಂಬಂಧಿಸಿದ್ದಾಗಿದೆ. ಆಗ ಬೇರೊಬ್ಬರು ಆಯುಕ್ತರಾಗಿದ್ದರು. ಆದಾಗ್ಯೂ, ನಾವು ಈಗ ತನಿಖೆಗೆ ಆದೇಶಿಸಿದ್ದು, ವರದಿಯ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.