UP man marries mother-in-law, video of court ceremony goes viral
- ಅತ್ತೆಯ ಜೊತೆಗೆ ಮದುವೆ ಮಾಡಿಕೊಂಡ ಅಳಿಯ
- ಕಾನ್ಪುರ ಕೋರ್ಟ್ ಆವರಣದಲ್ಲೇ ಮದುವೆ, ವಿಡಿಯೋ ವೈರಲ್
- ಮಗಳಿಗೆ ಮಾಡಿದ ಅನ್ಯಾಯ ಎಂದು ನೆಟ್ಟಿಗರು ಕಿಡಿ
UP Man Marries Mother-in-Law: ವರಸೆಯಲ್ಲಿ ಅಣ್ಣ ಅಥವಾ ಅಕ್ಕನಾಗುವವರನ್ನು ಮದುವೆಯಾದರೆ ಟೀಕೆಗಳು ಕೇಳಿಬರೋದು ಅಥವಾ ಮನೆಯಿಂದ ಹೊರ ಹಾಕುವುದು, ಇಲ್ಲದಿದ್ದರೆ ಕೊಲ್ಲುವ ಘಟನೆಗಳನ್ನು ನಾವು ಕಂಡೇ ಇದ್ದೇವೆ. ಆದರೆ, ಕಾನ್ಪುರದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಅಮ್ಮನನ್ನೇ ಮದುವೆಯಾಗಿ ಅಚ್ಚರಿ ಮೂಡಿಸದ್ದಾನೆ
ಉತ್ತರ ಪ್ರದೇಶದ ಕಾನ್ಪುರದ ನ್ಯಾಯಾಲಯವೊಂದರಲ್ಲಿ ಅಳಿಯ ಮತ್ತು ಅತ್ತೆ ಪರಸ್ಪರ ಮದುವೆಯಾಗಿದ್ದಾರೆ. ಇಬ್ಬರು ಒಟ್ಟಾಗಿ ಇರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಚೆಂಡು ಹೂವಿನ ಮಾಲೆ ಹಾಕಿಕೊಂಡಿರುವ ಯುವಕ, ಮದುಮಗಳಂತೆ ಅಲ್ಲದಿದ್ದರೂ, ನವ ವಧು ಕಳೆ ಹೊತ್ತು ಹಾರ ಹಾಕಿಸಿಕೊಂಡ ಅತ್ತೆ ಮದುವೆ ಸರ್ಟಿಫಿಕೇಟ್ ಹಿಡಿದು ಪೋಸ್ ಕೊಡುತ್ತಾ ನಿಂತಿರುವ ವಿಡಿಯೋಗಳು ಕಂಡು ಬಂದವು.
ಮಗಳಿಗೆ ಮೋಸ?
ಆನ್ಲೈನ್ನಲ್ಲಿ ಸದ್ಯ ವೈರಲ್ ಆಗುತ್ತಿರುವ ಈ ನವ ಜೋಡಿಯ ಹೆಸರು, ಏನೂ ಕೆಲಸ ಮಾಡುತ್ತಾರೆ ಎನ್ನುವ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ. ಆದರೆ, ಇದ್ರಿಂದ ಮಗಳಿಗೆ ಎಷ್ಟು ಸಮಸ್ಯೆಯಾಗುತ್ತದೆ ಎನ್ನುವುದನ್ನು ಯಾಕೆ ಯೋಚಿಸುತ್ತಿಲ್ಲ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಉತ್ತರ ಪ್ರದೇಶದ ಜನರು ಬೆಚ್ಚಿಬೀಳಿಸುವ ಘಟನೆ ಇದಾಗಿದೆ. ಈ ಅತ್ತೆ-ಅಳಿಯ ಕೋರ್ಟ್ ಆವರಣದಲ್ಲಿ ಮದುವೆಯಾಗಿದ್ದಾರೆ. ಇವರಿಬ್ಬರಿಗೂ ಈ ಹಿಂದೆಯೇ ಸಂಬಂಧವಿತ್ತು ಎನ್ನಲಾಗಿದೆ. ಆರ್ ಕೆ ಯಾದವ್ ಅವರು ಪೋಸ್ಟ್ನಲ್ಲಿ ಹಂಚಿಕೊಂಡಿದ್ದು ಹೀಗೆ, ಈಕೆ ಸಂಬಂಧಗಳು ಎನ್ನುವ ವ್ಯಾಖ್ಯಾನವನ್ನೇ ನಾಶ ಮಾಡಿದ್ದಾರೆ. ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಈಗ ಇದನ್ನು ಪ್ರೀತಿ ಎನ್ನಬೇಕೋ ಅಥವಾ ಆರೋಗ್ಯಕರ ಸಂಬಂಧ ಎನ್ನಬೇಕೋ ಎನ್ನುವುದೇ ನನ್ನ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.
ಆದರೆ, ಈ ಘಟನೆ ಕುರಿತು ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಾರ ಈ ಮದುವೆಗೆ ಸಂಬಂಧಿಸಿದಂತೆ ಯಾವುದೇ ಕಾನೂನುಬದ್ಧ ದೂರು ದಾಖಲಾಗಿಲ್ಲ.
ಪುರುಷರು ತಮ್ಮ ಬುದ್ಧಿಯನ್ನು ತೋರಿಸಿ ಬಿಡುತ್ತಾರೆ. ಆದರೆ, ಈ ಹೆಂಗಸಿಗೆ ಏನಾಗಿದೆ ತನ್ನ ಮಗಳ ಜೀವನ ಹಾಳಾಗುತ್ತಿದೆ ಎನ್ನುವ ಕಿಂಚಿತ್ತೂ ಕನಿಕರ ಇಲ್ಲವೇ ರಂದು ಅಭಯ್ ಮಣಿ ದಿವಾಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಒಮ್ಮೆ ಅಜ್ಜಿ ಅಲ್ಲ ಮಲತಾಯಿ ಶುಭಾಷಯ ಎಂದು ಹೇಳಿದರರೆ ತಿಳಿಯುತ್ತದೆ ಎಂದು ಲೋಕೇಸ್ ಹೇಳಿದ್ದಾರೆ.
ರಾಕಿ ಎನ್ನುವವರು ಟ್ವೀಟ್ ಮಾಡಿ,ಸಂಸ್ಕೃತವುಳ್ಳ ಮಹಿಳೆ ನೋಡಿ ಅವರು ಸೀರೆ ತೊಟ್ಟು ಭಾರತೀಯ ಸಂಸ್ಕೃತಿಯನ್ನು ಎಷ್ಟು ಚೆನ್ನಾಗಿ ಕಾಪಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ರಾಜ್ ಎನ್ನುವವರು ಟ್ವೀಟ್ ಮಾಡಿ ಈಗ ನಿಜವಾದ ಪ್ರಶ್ನೆ ಏನೆಂದರೆ, ಆಕೆಗೆ ಹೊಸದಾಗಿ ಮದುವೆಯಾದ ಯೋಜನಾ ಯೋಜನೆಯಡಿ 50 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಸಹಾಯಧನ ಸಿಗುತ್ತದೆಯೇ ಅಥವಾ ಇಲ್ಲವೇ?? ಎಂದು ಕೇಳಿದ್ದಾರೆ, (ಏಜೆನ್ಸೀಸ್)