Kanpur Double Murder 
ದೇಶ

ಪತ್ನಿ ಮೇಲೆ ಅನೈತಿಕ ಸಂಬಂಧದ ಶಂಕೆ; ಅವಳಿ ಹೆಣ್ಣು ಮಕ್ಕಳ ಕತ್ತು ಸೀಳಿ ಕೊಂದ ಸೈಕೋ ಫಾದರ್​..Kanpura

ಪ್ರಮುಖ ಮುಖ್ಯಾಂಶಗಳು

  • ಗಂಟಲು ಸೀಳಿ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕೊಂದ ಸೈಕೋ ತಂದೆ
  • ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ನಡೆದ ಘಟನೆ, ಪೊಲೀಸರಿಂದ ಆರೋಪಿ ಬಂಧನ
  • ದೌರ್ಜನ್ಯ , ಸಿಸಿಟಿವಿ ಕ್ಯಾಮೆರಾವಿಟ್ಟು ಪತ್ನಿಯ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ ಪತಿ
ಕಾನ್ಪುರ: ಪತ್ನಿ ಮೇಲಿನ ಅನೈತಿಕ ಸಂಬಂಧದ ಶಂಕೆಯಿಂದಾಗಿ ಇಬ್ಬರು ಮುದ್ದಾದ 11 ವರ್ಷದ ಮುದ್ದಾದ ಹೆಣ್ಣು ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ. ಮಕ್ಕಳನ್ನು ಕೊಂದ ಸೈಕೋ ಪಾತ್​ ತಾನೇ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ ಬಗ್ಗೆ ಉತ್ತರ ಪ್ರದೇಶದ ಕಾನ್ಪುರ (Kanpur Crime) ಪೊಲೀಸರು ತಮ್ಮ ಎಕ್ಸ್​​ ಖಾತೆಯಲ್ಲಿ ಮುಂಜಾನೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾನುವಾರ ಮುಂಜಾನೆ ಈ ಭೀಕರ ಘಟನೆಯು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು 48 ವರ್ಷದ ಆರೋಪಿ ಶಶಿ ರಂಜನ್ ಮಿಶ್ರಾರನ್ನು ಬಂಧಿಸಿ, ಘಟನಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಮಕ್ಕಳನ್ನು ರಿದ್ಧಿ ಮತ್ತು ಸಿದ್ಧಿ ಎಂದು ಗುರತಿಸಲಾಗಿದೆ.

ಏನಿದು ಘಟನೆ?

2014ರಲ್ಲಿ ರೇಷ್ಮಾ ಛೆಟ್ರಿ ಎಂಬುವವರು ಆರೋಪಿಯನ್ನು ಮದುವೆ ಮಾಡಿಕೊಂಡರು. ಅದು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಮಧ್ಯೆ ಅನೋನ್ಯತೆ ಹೆಚ್ಚಾಗಿಯೇ ಇತ್ತು. ಇದು ಕೆಲವು ದಿನಗಳ ವರೆಗೆ ಮಾತ್ರ. ಮದ್ಯ ವ್ಯಸನಿಯಾಗಿದ್ದ ಆರೋಪಿ ಎಷ್ಟು ಸೈಕೋಪಾತ್​ ಎಂದರೆ, ಮನೆಯ ತುಂಬೆಲ್ಲ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದನಂತೆ, ಆಕೆಯ ಹೋಗುವಿಕೆ, ಬರುವಿಕೆಯನ್ನು ಗಮನಿಸುತ್ತಿದ್ದನಂತೆ. ಸಾಕಿನ್ನು ಇವರ ಸಹವಾಸ ಎಂದು ತವರಿಗೆ ಹೊರಡಲು ನಿಂತರೆ, ಚೆನ್ನಾಗಿ ಹೊಡೆದು ನಿಂದಿಸುತ್ತಿದ್ದ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಹೇಳಿಕೊಂಡಿದ್ದಾರೆ.
ಮುಂಜಾನೆ ಆಗಿದ್ದೇನು?
ಒಂಬತ್ತು ವರ್ಷಗಳಿಂದ ಪತಿಯ ಟಾರ್ಚರ್​ ತಾಳಲಾರದೆ ರೇಷ್ಮ ಮನೆ ತೊರೆದಿದ್ದರು. ತನ್ನೊಂದಿಗೆ ಮಗನನ್ನು ಕರೆದುಕೊಂಡು ಹೋಗಿದ್ದರು. ಆದರೆ ಇಬ್ಬರು ಹೆಣ್ಣು ಮಕ್ಕಳನ್ನು ಆರೋಪಿ ಕರೆದುಕೊಂಡು ಹೋಗಲು ಬಿಡದ ಕಾರಣ ಅವರು, ಇಬ್ಬರೇ ಹೋಗಿದ್ದರು. ಮಕ್ಕಳನ್ನು ಕಾಣಬೇಕು ಎಂದು ಪತ್ನಿ ಇತ್ತೀಚೆಗೆ ಮನೆಗೆ ಆಗಮಿಸಿದ್ದರು. ಶನಿವಾರ ರಾತ್ರಿ ಮನೆ ನಂದನವನದಂತೆ ಚೆನ್ನಾಗಿಯೇ ಇತ್ತು. ಒಟ್ಟಾಗಿ ಊಟ ಮಾಡಿ ಸಂಭ್ರಮಿಸಿದ್ದರು. ಆನಂತರ ತಂದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನು ತನ್ನ ರೂಮಿಗೆ ಮಲಗಿಸಲು ಕರೆದುಕೊಂಡು ಹೋಗಿದ್ದನು.

ಆರೋಪಿಯಿಂದಲೇ ದೂರು

ಸಿಸಿಟಿವಿ ಕ್ಯಾಮೆರಾ ಗಮನಿಸುತ್ತಿದ್ದ ರೇಷ್ಮಾ, ರಾತ್ರಿ ಆತ ಯಾರೊಂದಿಗೋ ದೀರ್ಘ ಕಾಲ ಮಾತನಾಡಿದ್ದನ್ನು ಗಮನಿಸಿದ್ದಾರೆ. ಆನಂತರ ಒಬ್ಬಳು ಮಗಳನ್ನು ಕರೆದುಕೊಂಡು ಶೌಚಾಲಯಕ್ಕೆ ತೆರಳಿ, ವಾಪಾಸ್ ಬಂದ ಆದರೆ, ಯಾವುದೇ ಶಬ್ಧ ಕೇಳಿ ಬರಲಿಲ್ಲ. ಹೀಗಾಗಿ ಯಾವುದೇ ಅವಘಡ ಇಲ್ಲ ಎಂದು ತಿಳಿದು ಸುಮ್ಮನಾದರು. ಆದರೆ, ಅದೇ ಸಮಯದಲ್ಲಿ ಇಬ್ಬರು ಮಕ್ಕಳ ಗಂಟಲು ಸೀಳಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಇಬ್ಬರು ಅವಳಿ ಹೆಣ್ಣು ಮಕ್ಕಳನ್ನು ಕೊಂದ ಆತ, ನಂತರ ಪೊಲೀಸರಿಗೆ ಕರೆ ಮಾಡಿ ನಾನು ಮಕ್ಕಳನ್ನು ಕೊಂದಿದ್ದೇನೆ ಎಂದು ದೂರು ನೀಡಿದ್ದಾನೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ, ಸ್ಥಳವನ್ನು ಪರಿಶೀಲಿಸಿದ್ದಾರೆ. ಕೊಲೆಗೆ ಬಳಸಲಾದ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ, (ಏಜೆನ್ಸೀಸ್​)