UP man jumps into dam for reel 
ದೇಶ

ರೀಲ್ಸ್ ಹುಚ್ಚಾಟ ತಂದಿಟ್ಟ ಆಪತ್ತು; 30 ಅಡಿ ಎತ್ತರದಿಂದ ಡ್ಯಾಂ ನೀರಿಗೆ ಹಾರಿದ ಯುವಕ, ಎರಡು ಕಾಲುಗಳ ಮೂಳೆ ಮುರಿತ!..UP

ಪ್ರಮುಖ ಮುಖ್ಯಾಂಶಗಳು

  • ಝಾನ್ಸಿಯ ಪಾಹುಜ್ ಡ್ಯಾಮ್‌ನಲ್ಲಿ 30 ಅಡಿ ಎತ್ತರದಿಂದ ಜಿಗಿದ 32 ವರ್ಷದ ಪುಷ್ಪೇಂದ್ರ ಕುಮಾರ್
  • ರೀಲ್ಸ್​ಗಾಗಿ ಮೂವತ್ತು ಅಡಿ ಆಳಕ್ಕೆ ಬಿದ್ದು ಕಾಲು ಮೂಳೆ ಮುರಿದುಕೊಂಡ 32 ವರ್ಷದ ಯುವಕ
  • ಎರಡೂ ಕಾಲುಗಳ ಮೂಳೆ ಮುರಿತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
UP man jumps into dam for reel: ಯುವಜನತೆಯಲ್ಲಿ ದಿನದಿಂದ ದಿನಕ್ಕೆ ರೀಲ್ಸ್​​ ಹುಚ್ಚು ಹೆಚ್ಚಾಗುತ್ತಿದೆ. ರಸ್ತೆ ಮಧ್ಯೆ, ರೈಲು ನಿಲ್ದಾಣ ಯಾವುದೇ ಸ್ಥಳ ಸಿಕ್ಕರೂ ಶಾರ್ಟ್​ ವಿಡಿಯೋ ಅಥವಾ ಬ್ಲಾಗ್​ ಮಾಡೋದನ್ನು ಮಾತ್ರ ನಿಲ್ಲಿಸೋದಿಲ್ಲ. ಇದರಿಂದಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದು ಇದೆ. ಸಾವರ್ಜನಿಕರಿಗೆ ಸಮಸ್ಯೆಯಾದ ಉದಾಹರಣೆಯೂ ಇದೆ. ಅದರಂತೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ ಯುವಕನೊಬ್ಬ ರೀಲ್ಸ್​ ಮತ್ತು ಲೈಕ್ಸ್​ಗಾಗಿ  30 ಅಡಿ ಎತ್ತರದ ಡ್ಯಾಮ್‌ಗೆ ಹಾರಿ ಕಾಲಿನ ಮೂಳೆ ಮುರಿದುಕೊಂಡ ಘಟನೆ ಬೆಳಕಿಗೆ ಬಂದಿದೆ. 

ಕಾಲು ಮೂಳೆ ಮುರಿತ

32  ವರ್ಷದ  ಪುಷ್ಪೇಂದ್ರ ಕುಮಾರ್ ಮನೋರಿಯಾ  ಎಂಬಾತ ಭಾನುವಾರ ರಜೆ ದಿನದಂದು ತನ್ನ ಸ್ನೇಹಿತರೊಟ್ಟಿಗೆ ಝಾನ್ಸಿಯಲ್ಲಿನಪಹುಜಾ ಅಣೆಕಟ್ಟು ನೋಡಲು ತೆರಳಿದ್ದರು. ಡ್ಯಾಂನ ನಿಂತು ನೋಡಲು ಜನರಿಗೆ ಹಾಕಿದ್ದ  ಸುರಕ್ಷತಾ ರೇಲಿಂಗ್ ಅನ್ನು ಬಿಟ್ಟು ನೀರಿಗೆ ಹಾರಿದ್ದಾನೆ. ಪುಷ್ಪೇಂದ್ರ ಕುಮಾರ್ ಮನೋರಿಯಾ ಹಾರುವಾಗ ಆತನ ಸ್ನೇಹಿತನೊಬ್ಬ  ತಮಾಷೆಯಾಗಿ ನಿಮ್ಮ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಹೇಳಿರುವುದು ವಿಡಿಯೋದಲ್ಲಿ ಇದೆ. 

ಕಲ್ಲುಗಳಿದ್ದ ಕಡೆ ಹಾರಿದ ಯುವಕ

ದುರಾದೃಷ್ಟವಶಾತ್​​ ಮನೋರಿಯಾ ಜಿಗಿದ ಸ್ಥಳದಲ್ಲಿ ಅಷ್ಟಾಗಿ ನೀರು ಇರಲಿಲ್ಲ. ಕಲ್ಲುಗಳಿದ್ದ ಪರಿಣಾಮ ಎರಡೂ ಕಾಲುಗಳ ಮೂಳೆಗಳು ಮುರಿದುಕೊಂಡವು.  ನಂತರ ನೀರಿನಲ್ಲಿ ಬಿದ್ದು ಈಜಲು ಕಾಲಿನ ಸಹಾಯ ಪಡೆದುಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ.
ನಂತರ ಕಬ್ಬಿಣದ ರಾಡ್ ಅನ್ನು ಹಿಡಿದು ಸುರಕ್ಷಿತ ಸ್ಥಳದ ಕಡೆಗೆ ಬಂದನು. ಬಳಿಕ ಸ್ಥಳದಲ್ಲಿದ್ದ ಜನರ ಸಹಾಯದಿಂದ ಆಚೆ ಬಂದಿದ್ದಾನೆ.  ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುಷ್ಪೇಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಈಗಾಗಲೇ ಆತನ ಒಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ, ಎರಡು ರಾಡ್‌ಗಳನ್ನು ಅಳವಡಿಸಿದ್ದು, ಮತ್ತೊಂದು ಕಾಲಿಗೂ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ.

 ಪುಷ್ಪೇಂದ್ರ ಕುಮಾರ್ ಮನೋರಿಯಾ ಹೇಳಿದ್ದಿಷ್ಟು

'ಹಿಂದೆ ಹಲವು ಕಡೆಗಳಲ್ಲಿ ಸ್ಟಂಟ್‌ಗಳನ್ನು ಮಾಡಿದ್ದರಿಂದ ಇದನ್ನು ಕೂಡ ನಿರ್ವಹಿಸಬಲ್ಲೆ ಎಂದು ನಂಬಿದ್ದೆ ಆದರೆ ಜಿಗಿದ ಸ್ಥಳದಲ್ಲಿ ನೀರು ತೀರಾ ಕಡಿಮೆಯಿದೆ ಎಂಬುದು ತನಗೆ ತಿಳಿದಿರಲಿಲ್ಲ ನಾನಿನ್ನು ಮುಂದೆ ಎಂದಿಗೂ ಇಂತಹ ಸಾಹಸಗಳನ್ನು ಮಾಡುವುದಿಲ್ಲ' ಎಂದು ಪುಷ್ಪೇಂದ್ರ ತಿಳಿಸಿದ್ದಾರೆ, (ಏಜೆನ್ಸೀಸ್).