- ಉತ್ತರ ಪ್ರದೇಶದಲ್ಲಿ ನಕಲಿ ಡೈರಿ ಉತ್ಪನ್ನಗಳ ಮಾರಾಟ ಬಂದ್
- ಪನೀರ್, ತುಪ್ಪ, ಖೋವಾ ಸೇರಿದಂತೆ ಹಲವು ಉತ್ಪನ್ನಗಳಿಗೆ ಬ್ರೇಕ್
- ಕಲಬೆರಕೆ ಮತ್ತು ಹಾನಿಕಾರಕ ವಸ್ತುಗಳ ಬಳಕೆ ತಡೆಯಲು ಕ್ರಮ
UP bans dairy products: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಕಲಿ ಡೈರಿ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ಪನೀರ್, ತುಪ್ಪ ಮತ್ತು ಖೋವಾ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಬ್ಯಾನ್ ಮಾಡಿದ್ದಾರೆ. ಹಾಲಿನಿಂದ ತಯಾರಿಸುವ ಪದಾರ್ಥಗಳ ಬಗ್ಗೆ ಆಹಾರ ಸುರಕ್ಷತೆ ಕಳವಳ ಹೆಚ್ಚಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು, ಸಾಮಾನ್ಯ ಹಾಲಿನ ಉತ್ಪನ್ನಗಳ ರುಚಿ, ಬಣ್ಣ ಮತ್ತು ರೂಪವನ್ನು ಹೋಲುವಂತೆ ತಯಾರಿಸುವ ವಸ್ತುಗಳನ್ನು ಅನಾಲಾಗ್ ಡೇರಿ ಉತ್ಪನ್ನಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಸಸ್ಯ ಕೊಬ್ಬು, ಪಿಷ್ಟ ಹಾಗೂ ಇತರ ಹಾಲೇತರ ಪದಾರ್ಥಗಳನ್ನು ಬಳಸುವ ಸಾಧ್ಯತೆ ಇರುತ್ತದೆ. ಇಂತಹ ಉತ್ಪನ್ನಗಳು ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುವುದರಿಂದ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುತ್ತವೆ.
ಯುಪಿ ಸರ್ಕಾರ ಈ ಕ್ರಮ ಕೈಗೊಂಡಿದ್ದು ಏಕೆ?
ಹಾಲಿನ ಉತ್ಪನ್ನಗಳ ಹೆಸರಿನಲ್ಲಿ ನಕಲಿ ಪದಾರ್ಥಗಳು, ಕಲಬೆರಕೆ ಅಥವಾ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ಕೇಳಿ ಬಂದಿದತ್ತು. ಈ ಹಿನ್ನೆಲೆಯಲ್ಲಿ ಯುಪಿ ಸರ್ಕಾರ ಕ್ರಮ ಕೈಗೊಂಡಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಡೈರಿ ಉತ್ಪನ್ನಗಳ ತಪಾಸಣೆ ಮತ್ತು ಸ್ಯಾಂಪಲ್ ಪರೀಕ್ಷೆ ನಡೆಸಿ, ಕಳಪೆ ಗುಣಮಟ್ಟದ ಪದಾರ್ಥಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಎಫ್‌ಐಆರ್?
ಹಾನಿಕಾರಕ ರಾಸಾಯನಿಕ, ಕಲಬೆರಕೆ ವಸ್ತುಗಳು ಪತ್ತೆಯಾದರೆ ಉತ್ಪನ್ನಗಳನ್ನು ವಶಕ್ಕೆ ಪಡೆದು ನಾಶಪಡಿಸಲಾಗುತ್ತೆ. ಅಗತ್ಯವಿದ್ದರೆ ತಯಾರಿಕಾ ಘಟವನ್ನು ತಾತ್ಕಾಲಿಕವಾಗಿ ಬಂದ್ ಮಾಡಬಹುದು. ಜೊತೆಗೆ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಆಹಾರ ಲೈಸೆನ್ಸ್ ರದ್ದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಬ್ರ್ಯಾಂಡ್‌ನ ಉತ್ಪನ್ನಗಳಲ್ಲಿ ಹಾನಿಕಾರಕ ಅಂಶ ಕಂಡುಬಂದರೆ, ಆ ಬ್ರ್ಯಾಂಡ್‌ನ್ನೇ ರಾಜ್ಯಾದ್ಯಂತ ಬ್ಯಾನ್ ಮಾಡುವ ಸಾಧ್ಯತೆ ಇದೆ,(ಏಜೆನ್ಸೀಸ್).