ಭೋಪಾಲ್: ಕೌಟುಂಬಿಕ ಕಲಹದ ಪ್ರಕರವೊಂದರ ವಿಚಾರಣೆ ನಡೆಸುವಾದ ಮಹತ್ವದ ಆದೇಶ ನೀಡಿರುವ ಮಧ್ಯಪ್ರದೇಶ ಹೈಕೋರ್ಟ್(High Court), ಪತ್ನಿ ಜೊತೆಗಿನ ಅಸ್ವಭಾವಿಕ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಸೆಕ್ಷನ್ 377ರ ಅಡಿ ದಾಖಲಾಗಿದ್ದ ಪ್ರಕರಣವನ್ನು ಅಮಾನ್ಯಗೊಳಿಸಿದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ವರದಕ್ಷಿಣೆಗಾಗಿ ಕಿರುಕುಳ, ಹಲ್ಲೆ ಹಾಗೂ ಬೆದರಿಕೆ ಆರೋಪ ಹೊರಿಸಿ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತಿ ವಿರುದ್ಧ ಕ್ಷನ್ 377 (ಅಸ್ವಾಭಾವಿಕ ಅಪರಾಧಗಳು), 498A (ವರದಕ್ಷಿಣೆ ಕಿರುಕುಳ), 323 (ಹಲ್ಲೆ), ಮತ್ತು 506 (ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆಗೆ ನಡೆಸಿದ ಹೈಕೋರ್ಟ್ನ ನ್ಯಾ. ಮಿಲಿಂದ್ ರಮೇಶ್ ಫಡ್ಕೆ ನೇತೃತ್ಗದ ಗ್ವಾಲಿಯರ್ ಪೀಠವು, ಸೆಕ್ಷನ್ 377ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದ್ದಾರೆ.
ವಿವಾಹಿತ ದಂಪತಿ ನಡುವಿನ ಲೈಂಗಿಕ ಕ್ರಿಯೆಗಳನ್ನು ಈ ಸೆಕ್ಷನ್ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟ ಪೀಠ, ವೈವಾಹಿಕ ಸಂಬಂಧದೊಳಗೆ ಪತಿ ಮತ್ತು ಪತ್ನಿಯ ನಡುವಿನ ಲೈಂಗಿಕ ಕ್ರಿಯೆಗಳು ಅತ್ಯಾಚಾರವಲ್ಲ ಎಂಬ ಸೆಕ್ಷನ್ 375ರ ವಿನಾಯಿತಿಯನ್ನು ಉಲ್ಲೇಖಿಸಿ ಪತಿ ಮತ್ತು ಪತ್ನಿಯ ನಡುವಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ಸೆಕ್ಷನ್ 377ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಆದಾಗ್ಯೂ, ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಬೆದರಿಕೆಗೆ ಸಂಬಂಧಿಸಿದ ಇತರ ಸೆಕ್ಷನ್‌ಗಳ ಅಡಿಯಲ್ಲಿರುವ ಪ್ರಕರಣಗಳನ್ನು ವಜಾಗೊಳಿಸಲು ನ್ಯಾಯಾಲಯ ನಿರಾಕರಿಸಿ ಆರೋಪಗಳ ತನಿಖೆಯನ್ನು ಮುಂದುವರಿಸಲು ಆದೇಶಿಸಿದೆ (ಏಜೆನ್ಸೀಸ್).