ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- 9ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ ವಿತ್ತ ಸಚಿವೆ
- ಆ್ಯಕ್ಸಿಡೆಂಟ್ ವಿಮೆ ಪಡೆಯೋರಿಗೆ ಇಲ್ಲ ಟ್ಯಾಕ್ಸ್
- ಏ.01ರಿಂದ ನೂತನ ಐಟಿ ಕಾಯ್ದೆ ಜಾರಿಗೆ
Union Budget 2026: ಸತತ 9ನೇ ಬಾರಿಗೆ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ, ಆದಾಯ, ರೈಲ್ವೆ ಇಲಾಖೆಗಳಿಗೆ ಬಂಪರ್ ಕೊಡುಗೆ ಘೋಷಣೆಯಾಗಿವೆ. ಈ ಮಧ್ಯೆ, ರಸ್ತೆ ಅಪಘಾತದಲ್ಲಿ ವಿಮೆ ಪಡೆಯುವವರಿಗೆ ತೆರಿಗೆ ಅನ್ವಯಿಸುವುದಿಲ್ಲ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.
ಏ.01ರಿಂದ ನೂತನ ಐಟಿ ಕಾಯ್ದೆ ಜಾರಿಗೆ
ಅಪಘಾತದಲ್ಲಿ ವಿಮೆ ಪಡೆಯೋರಿಗೆ ತೆರಿಗೆ ಮತ್ತು ಟಿಡಿಎಸ್ ಇರೋದಿಲ್ಲ. ವಿದೇಶಿ ಪ್ರವಾಸಿಗರಿಗೆ ಅದರಲ್ಲೂ ಶಿಕ್ಷಣ ಪ್ರವಾಸಕ್ಕೆ ತೆರಳುವವರಿಗೆ ಟಿಸಿಎಸ್ ಕಡಿತವಾಗಲಿದೆ. ಶೇ.2ರಷ್ಟು ಕಟ್ ಆಗಲಿದೆ ಎಂಬುದು ಗಮನಾರ್ಹ. ಇನ್ನು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ 6 ತಿಂಗಳಿಗೊಮ್ಮೆ ಆಸ್ತಿ ಘೋಷಣೆ ಅವಕಾಶ ನೀಡಲಾಗಿದೆ. ಇದರೊಟ್ಟಿಗೆ ಐಟಿಆರ್ ಸಲ್ಲಿಸಲು ಜುಲೈ 31 ರವರೆಗೆ ಕಾಲಾವಕಾಶ ಕೊಡಲಾಗಿದ್ದು, ಡೆಡ್ಲೈನ್ನೊಳಗೆ ಸಲ್ಲಿಕೆ ಮಾಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.