ಕೇಂದ್ರ ಬಜೆಟ್​ 2026  
ದೇಶ

ಕೇಂದ್ರ ಬಜೆಟ್​ 2026: 12 ವರ್ಷದಿಂದ ದೇಶದ ಆರ್ಥಿಕತೆ ಸುಧಾರಣೆ... ಇಲ್ಲಿದೆ ನೋಡಿ ವಿತ್ತ ಸಚಿವೆಯ ಪೂರ್ಣ ಭಾಷಣ

ಪ್ರಮುಖ ಮುಖ್ಯಾಂಶಗಳು

  • 9ನೇ ಬಾರಿಗೆ ದಾಖಲೆಯ ಬಜೆಟ್​ ಮಂಡಿಸಿದ ವಿತ್ತ ಸಚಿವೆ
  • ಮೇಘ ಪೂರ್ಣೀಮಾ ಶುಭಾಶಯ ಕೋರುವ ಮೂಲಕ ಬಜೆಟ್​ ಭಾಷಣ ಆರಂಭ
  • 12 ವರ್ಷದಿಂದ ದೇಶದ ಆರ್ಥಿಕತೆ ಸುಧಾರಣೆ ಎಂದ ನಿರ್ಮಲಾ ಸೀತಾರಾಮನ್​
Union Budget 2026: ಸತತ 9ನೇ ಬಾರಿಗೆ 2026-27ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​,  ಮಧ್ಯಮವರ್ಗದವರ ನಿರೀಕ್ಷೆ, ಆಶೋತ್ತರಗಳಿಗೆ ಮತ್ತು ದೇಶದ ರೈತರ ಮೇಲಿರುವ ಹೊರೆ ಇಳಿಸಲಿದ್ದಾರೆಯೇ ಎಂಬ ಹಲವು ನಿರೀಕ್ಷೆಗಳಿಗೆ ಇಂದಿನ ಬಜೆಟ್​ನಲ್ಲಿ ಉತ್ತರ ಲಭಿಸಿದೆ.

ಕಳೆದ 12 ವರ್ಷದಿಂದ...

ಮೇಘ ಪೂರ್ಣೀಮಾ, ರವಿದಾಸ್​ ಜನ್ಮ ದಿನಾಚರಣೆಯ ಶುಭಕೋರುವ ಮೂಲಕ ಬಜೆಟ್​ ಭಾಷಣ ಆರಂಭಿಸಿದ ವಿತ್ತ ಸಚಿವೆ, ವಿಕಸಿತ ಭಾರತದತ್ತ ನಾವು ದಾಪುಗಾಲಿಟ್ಟಿದ್ದೇವೆ. ಕಳೆದ 12 ವರ್ಷದಿಂದ ದೇಶದ ಆರ್ಥಿಕತೆ ಸುಧಾರಣೆ ಆಗುತ್ತಿದೆ. ಬಡತನ ನಿರ್ಮೂಲನೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ಕೊಟ್ಟಿದ್ದೇವೆ. ಯುವಶಕ್ತಿ ಬಜೆಟ್​ ಅನ್ನು ಮಂಡಿಸುತ್ತಿದ್ದೇವೆ ಎಂದರು. 

ಜಗತ್ತಿನ ಅತಿದೊಡ್ಡ ಆರ್ಥಿಕ ರಾಷ್ಟ್ರ

ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿರುವ ಬಜೆಟ್​ ಇದಾಗಿದೆ. ನಾವು ಶೇ.7ರಷ್ಟು ಅಭಿವೃದ್ಧಿ ಹೊಂದಿದ್ದೇವೆ ಮತ್ತು ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್​ ರೂಪಿಸಿದ್ದೇವೆ. ನಮ್ಮ ಸರ್ಕಾರ ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸುವತ್ತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ನಮ್ಮ ಎರಡನೇ ಕರ್ತವ್ಯ ಜನರ ನಿರೀಕ್ಷೆಗಳನ್ನು ಪೂರೈಸುವುದಾಗಿದೆ.ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಎಂದು ಸಂಸತ್ತಿನಲ್ಲಿ ಹೇಳಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಖನಿಜ-ಸಮೃದ್ಧ ರಾಜ್ಯಗಳಿಗೆ ಮೀಸಲಾದ ಭೂ ಕಾರಿಡಾರ್‌ಗಳನ್ನು ಸ್ಥಾಪಿಸುವಲ್ಲಿ ಬೆಂಬಲ ನೀಡಲು ಪ್ರಸ್ತಾಪಿಸಿದ್ದೇವೆ. ಆತ್ಮನಿರ್ಭರ ಭಾರತಕ್ಕಾಗಿ 2 ಕೋಟಿ ರೂ. ಮೀಸಲಿಟ್ಟಿದ್ದೇವೆ. ಇದರೊಟ್ಟಿಗೆ 10 ಸಾವಿರ ಕೋಟಿ ರೂ. SME ಗ್ರೌಥ್ ನಿಧಿ ಸ್ಥಾಪನೆ, ಬಯೋಫಾರ್ಮಾ ಶಕ್ತಿಗೆ 10 ಸಾವಿರ ಕೋಟಿ ರೂ. ಮೀಸಲು ಎಂದರು.