ಜೇನುನೊಣ ದಾಳಿಗೆ ಮೃತ ಪಟ್ಟ ಅಂಫೈರ್ ಮಾಣಿಕ್ ಗುಪ್ತಾ
- ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣ ದಾಳಿ
- ಜೇನುನೊಣ ದಾಳಿಗೆ ಮೃತ ಪಟ್ಟ ಅಂಫೈರ್ ಮಾಣಿಕ್ ಗುಪ್ತಾ
- ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ಮಾಡಿದ ಪರಿಣಾಮ ಅಂಪೈರಿಂಗ್ (Umpire) ಮಾಡುತ್ತಿದ್ದ ಮಾಣಿಕ್ ಗುಪ್ತಾ (65) ಸವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪಂದ್ಯದ ಮಧ್ಯದಲ್ಲಿ ಡ್ರಿಂಕ್ಸ್ ಬ್ರೇಕ್ ನೀಡಿದ ಸಂದರ್ಭದಲ್ಲಿ ಜೇನಿನ ದಾಳಿ ನಡೆದ್ದಿದ್ದು, ಒಂದೇ ಸಮನೆ ಜೇನು ನಮ್ಮ ಮೇಲೆ ದಾಳಿ ಮಾಡಿದವು, ಅವುಗಳಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ ಮಾಣಿಕ್ ಗುಪ್ತಾ ನೆಲಕ್ಕೆ ಬಿದ್ದರು ಮತ್ತು ಅವರು ನೂರಾರು ಜೇನುಗಳು ಸುತ್ತುವರೆದು ಕಚ್ಚಿದವು ಎಂದು ಮಾನಿಕ್ ಅವರ ಸಹೋದರ ಅಮಿತ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ನಂತರ ನಾವು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪಿದರು ಎಂದು ಅವರು ಹೇಳಿದ್ದಾರೆ. ಮಾಣಿಕ್ ಗುಪ್ತಾ ಸುಮಾರು 30 ವರ್ಷಗಳಿಂದ ಅಂಪೈರಿಂಗ್ ಮಾಡುತ್ತಿದ್ದು, ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಅವರೊಬ್ಬ ಪ್ರತಿಷ್ಠಿತ ಅಂಪೈರ್ ಆಗಿದ್ದರು.
ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ನಮ್ಮ ಮೇಲೆ ಜೇನುನೊಣಗಳ ಹಿಂಡು ದಾಳಿ ಮಾಡಿತು. ನಾವು ಓಡಿಹೋದೆವು, ಆದರೆ ಮಾಣಿಕ್ ಅವರಿಗೆ ವಯಸ್ಸಾಗಿದ್ದರಿಂದ ಅವರಿಗೆ ಓಡಲಾಗದೆ ಜೇನುನೊಣಗಳ ದಾಳಿಗೆ ತುತ್ತಾದರು ಎಂದು ಅವರ ಸಹ ಅಂಪೈರ್ ಭರತೇಂದು ಪುರಿ ಹೇಳಿದ್ದಾರೆ.
ಮಾಣಿಕ್ ಗುಪ್ತಾ ಅವರು ತಮ್ಮ ಇಡೀ ಜೀವನವನ್ನು ಅಂಪೈರಿಂಗ್ಗಾಗಿ ಮೀಸಲಿಟ್ಟಿವರಾಗಿದ್ದರು. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಕಾನ್ಪುರ್ ಕ್ರಿಕೆಟ್ ಅಸೋಸಿಯೇಷನ್ ಒಬ್ಬ ಪ್ರತಿಷ್ಠಿತ ಅಂಪೈರ್ನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದರು,(ಏಜನ್ಸೀಸ್).