ಜಿ-ಝೆನ್ ಯುವಕರನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿದ ಉದ್ಧವ್ ಠಾಕ್ರೆ
- ಜಿ-ಝೆನ್ ಯುವಕರನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿದ ಉದ್ಧವ್ ಠಾಕ್ರೆ
- ಜಿರಳೆಗಳೆಂದು ನಿರ್ಲಕ್ಷಿಸಬೇಡಿ, ಅವರು ಸಾಮ್ರಾಜ್ಯವನ್ನೇ ಕೆಡವುತ್ತಾರೆ ಎಂದು ಎಚ್ಚರಿಕೆ
- ಈ ವಯಸ್ಸಿನಲ್ಲಿಯೇ ನಮ್ಮ ಮಹಾರಾಜರು ಕೋಟೆಯನ್ನೇ ಗೆದ್ದಿದ್ದರು ಎಂದ ಠಾಕ್ರೆ
ಮುಂಬೈ: ದೇಶದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸುತ್ತಿರುವ ಭಾರತೀರ ಝೆನ್-ಜಿಗಳನ್ನು ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray on GenZ) ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿದ್ದಾರೆ.
ನಮ್ಮ ದೇಶದ ಝೆನ್-ಜಿಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅವರನ್ನು ಜಿರಳೆಗಳಿಗೆ ಹೋಲಿಸಲಾಗುತ್ತಿದೆ. ಆದರೆ ಅವರು ನಮ್ಮ ಶಿವಾಜಿ ಮಹಾರಾಜದ ಪ್ರತಿರೂಪದಂತೆ ಕಾಣಿಸುತ್ತಿದ್ದು, ಇವರು ಭಾರತದ ಬೆಳವಣಿಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆಂದು ಹೇಳಿದ್ದಾರೆ.
ಅವರನ್ನು ಕಡೆಗಣಿಸಬೇಡಿ!
ನಮ್ಮ ದೇಶದಲ್ಲಿ ಈಗ ಝೆನ್-ಜಿಗಳ ಯುಗ ಆರಂಭವಾಗಿದೆ. ಆದರೆ ಅಧಿಕಾದಲ್ಲಿರುವವರು ಅವರನ್ನು ಜಿರಳೆಗಳೆಂದು ತುಚ್ಚವಾಗಿ ಕಾಣುತ್ತಿದ್ದಾರೆ. ಅವರನ್ನು ಅವರ ವಯಸ್ಸಿನ ಆಧಾರದಲ್ಲಿ ಕಡೆಗಣಿಸಬೇಡಿ. ಇದೇ 17ನೇ ವರ್ಷಕ್ಕೆ ನಮ್ಮ ಶಿವಾಜಿ ಮಹಾರಾಜರು ತೋರಣಗಢ ಕೋಟೆಯನ್ನು ವಶಪಡಿಸಿಕೊಂಡಿದ್ದರು. ಸಂತ ಜ್ಞಾನೇಶ್ವರರು ಇದೇ ವಯಸ್ಸಿನಲ್ಲಿ ಜ್ಞಾನೇಶ್ವರಿ ಗ್ರಂಥವನ್ನೇ ಬರಿದಿದ್ದರು. ಹೀಗಾಗಿ ಅವರನ್ನು ಕೇವಲವಾಗಿ ಕಾಣುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.
ಕೇಂದ್ರ ಸಂಪೂರ್ಣ ವಿಫಲವಾಗಿದೆ!
ಇನ್ನು ನೀಟ್ ಪರೀಕ್ಷಾ ಅಕ್ರಮ ಹಾಗೂ ಜಂತರ್-ಮಂತರ್ ಪ್ರತಿಭಟನೆ ಬಗ್ಗೆ ಮಾತನಾಡಿದ ಠಾಕ್ರೆ, ಕೇಂದ್ರ ಸರ್ಕಾರ ಪರೀಕ್ಷೆಯನ್ನು ನಿರ್ವಹಿಸುವುದರಲ್ಲಿ ಸಂಪೂರ್ಣ ವಿಫಲತೆಯನ್ನು ಕಂಡಿದೆ. ಅಷ್ಟೇ ಅಲ್ಲದೆ ನ್ಯಾಯ ಕೇಳಲು ಬಂದ ವಿದ್ಯಾರ್ಥಿಗಳೊಂದಿದೆ ತಪ್ಪಾಗಿ ನಡೆದುಕೊಂಡಿದೆ ಎಂದರರು.
ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಪೇಪರ್ ಸೋರಿಕೆಯಾಗಿದ್ದು, ಒಳ್ಳೆಯದೇ ಆಯಿತು ಎನ್ನುತ್ತಾರೆ? ಈ ವಿಷಯದ ಬಗ್ಗೆ ಅವರು ಏಕೆ ಮಾತನಾಡಬೇಕು? ಪೇಪರ್ ಲೀಕ್ನಿಂದ ಏನು ದೇಶದ ಆರ್ಥಿಕತೆ ಬಲವಾಯಿತೆ? ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಇದರ ಬಗ್ಗೆ ಅವರು ಯಾವಾಗ ಮಾತನಾಡುತ್ತಾರೆ? ನಿತ್ಯ ಬಳಕೆಯ ವಸ್ತುಗಳ ಬೆಲೆ ಆಕಶವನ್ನು ಮುಟ್ಟಿದೆ, ಇದರ ಬಗ್ಗೆ ಅವರು ಒಮ್ಮೆಯೂ ಮಾತನಾಡಲ್ಲ ಎಂದು ಕಿಡಿಕಾರಿದ್ದಾರೆ, (ಏಜನ್ಸೀಸ್).