ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ನಟಿ ತ್ವಿಶಾ ಶರ್ಮಾ ಸಾವಿನ ಪ್ರಕರಣ 
ದೇಶ

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟಿ ತ್ವಿಶಾ ಶರ್ಮಾ ಪ್ರಕರಣ: ಸತ್ತ ಮಗಳಿಗಿಂತ ವಿಚ್ಛೇದಿತ ಮಗಳೇ ವಾಸಿ; ಸಾಲಿಸಿಟರ್ ಜನರಲ್! Twisha Sharma Case in Supreme Court

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ನಟಿ ತ್ವಿಶಾ ಶರ್ಮಾ ಸಾವಿನ ಪ್ರಕರಣ
  • ಸತ್ತ ಮಗಳಿಗಿಂತ ವಿಚ್ಛೇದಿತ ಮಗಳೇ ವಾಸಿ ಎಂದ ಸಾಲಿಸಿಟರಿ ಜನರಲ್​
  • ಪ್ರಕರಣದ ವಿಚಾರಣೆ ಸಿಬಿಐಗೆ ವಸಿಸುವ ಸಾಧ್ಯತೆ
ನವದೆಹಲಿ: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಮಧ್ಯಪ್ರದೇಶ ಮೂಲಕ ನಟಿ, ಮಾಡೆಲ್​ ತ್ವಿಶಾ ಶರ್ಮಾ ಸಾವಿನ ಪ್ರಕರಣ ಈಗ ಸುಪ್ರೀಂ ಕೋರ್ಟ್​ (Twisha Sharma Case in Supreme Court) ಮೆಟ್ಟಿಲೇರಿದ್ದು, ಈ ಪ್ರಕರಣದಲ್ಲಿ ಸ್ವತಂತ್ರ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.

ಸತ್ತು ಹೋದ ಮಗಳಿಗಿಂತ ವಿಚ್ಛೇದಿತ ಮಗಳೇ ವಾಸಿ!

ಅನುಮಾನಾಸ್ಪದ ಸಾವಿಗೆ ತುತ್ತಾಗಿರುವ ನಟಿ ತ್ವಿಶಾ ಶರ್ಮಾ ಪ್ರಕರಣದ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ .ಎಂ. ಪಾಂಚೋಲಿ ಅವರ ನ್ಯಾಯಪೀಠ ನಡೆಸಿದೆ.
ನಟಿ ತ್ವಿಶಾ ಶರ್ಮಾ (ಮಧ್ಯಪ್ರದೇಶ ಸರ್ಕಾರ) ಪರ ವಾದ ಮಂಡಿಸುವಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಚ್ಛೇದಿತ ಮಗಳು ಸತ್ತ ಮಗಳಿಗಿಂತ ಉತ್ತಮ ಎಂದು ವಾದ ಆರಂಭಿಸಿದರು. ತ್ವಿಶಾ ಶರ್ಮಾ ಪಾಲಕರು ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಿದ್ದಾರೆ.

ಸಿಬಿಐ ಕೈ ಸೇರುತ್ತಾ ಪ್ರಕರಣ?

ಮಧ್ಯಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ನ್ಯಾಯಪೀಠದ ಮುಂದಿಟ್ಟರು.
ಇದೇ ಸಂದರ್ಭದಲ್ಲಿ ಮಾಧ್ಯಮದವರ ಮುಂದೆ ತ್ವಿಶಾ ಶರ್ಮಾಳ ಪಾಲಕರು ಮನಸೋ ಇಚ್ಛೆ ಹೇಳಿಕೆಯನ್ನು ಕೊಡಬಾರದು. ಇದು ತನಿಖೆ ವೇಳೆ ಗಂಭೀರ ಪರಿಣಾಮ ಬೀರಲು ಕಾರಣವಾಗುತ್ತದೆ ಎಂದು ಖಡಕ್​ ಸೂಚನೆ ನೀಡಿದೆ. ಹಾಗೆಯೇ ಮಾಧ್ಯಮದವರಿಗೆ ಸಹ ಪ್ರಕರಣದ ಸಾಕ್ಷಿಗಳ ಹೇಳಿಕೆಗಳನ್ನು ವೀಕ್ಷಣೆ ಉದ್ದೇಶಕ್ಕಾಗಿ ಸೆರೆಹಿಡಿಯದಂತೆ ಹೇಳಿದೆ.
ಈ ಪಕ್ರರಣದಲ್ಲಿ ನ್ಯಾಯಯುತ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ವಿಚಾರಣೆ ಜವಾಬ್ದಾರಿಯನ್ನು ಸಿಬಿಐಗೆ ನೀಡುವುದು ಬಹುತೇಕ ಖಚಿತವಾಗಿದೆ ಎಂದು ಹೇಳಬಹುದಾಗಿದೆ.

ಪಂಚಭೂತಗಳಲ್ಲಿ ಲೀನವಾದ ತ್ವಿಶಾ!

ಮೇ. 12 ರಂದು ನಿಗೂಢವಾಗಿ ಸಾವನ್ನಪ್ಪಿದ್ದ ನಟಿ ತ್ವಿಶಾ ಶರ್ಮಾಳ ಅಂತ್ಯಕ್ರಿಯೆ ನಿನ್ನೆ (ಮೇ.24) ರಂದು ಭೋಪಾಲ್​ನಲ್ಲಿರುವ ಚಿತಾಗಾರದಲ್ಲಿ ನಡೆಯಿತು. ಮರಣಹೊಂದಿ 12 ದಿನಗಳ ನಂತರ ಎರಡನೇ ಮರಣೋತ್ತರ ಪರೀಕ್ಷೆಗೆ ಮುಗಿಸಿದ ವೈದ್ಯರು ಶವವನ್ನು ಕುಟುಂಬವರಿಗೆ ಹಸ್ತಾಂತರ ಮಾಡಿದರು.
ಏನಿದು ತ್ವಿಶಾ ಶರ್ಮಾ ಪ್ರಕರಣ?
ಕಳೆದ ಮೇ 12 ರಂದು ಭೋಪಾಲ್‌ನ ಕತಾರಾ‌ ಹಿಲ್ಸ್‌ನಲ್ಲಿರುವ ತನ್ನ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ಮರುದಿನವೇ ಅಂದರೆ ಮೇ 13 ರಂದು ಮೊದಲ ಮರಣೋತ್ತರ ಪರೀಕ್ಷೆ ನಡೆದಿತ್ತು. ಆದರೆ, ಈ ಮೊದಲ ವರದಿಯಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಹೊರಬಂದಿವೆ.
ವರದಿಯ ಪ್ರಕಾರ, ತ್ವಿಶಾ ಕುತ್ತಿಗೆಯ ಮೇಲೆ ಎರಡು ಗಂಭೀರವಾದ ಗುರುತುಗಳಿದ್ದವು. ಅಷ್ಟೇ ಅಲ್ಲದೆ ಅವರ ಕೈಗಳು, ಮುಂಗೈ ಮತ್ತು ಬೆರಳುಗಳ ಮೇಲೆಯೂ ಗಾಯದ ಕಲೆಗಳು ಪತ್ತೆಯಾಗಿದ್ದವು. ಯಾರೋ ಅವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ನಂಬಿದ್ದಾರೆ.
ಅಷ್ಟೇ ಅಲ್ಲದೆ ತ್ವಿಶಾಳ ಪತಿ ಹಾಗೂ ಅತ್ತೆ (ಗಂಡನ ತಾಯಿ) ತನ್ನ ಮಗಳಿಗೆ ವರದಕ್ಷಿಣೆ ಸಂಬಂಧ ನಿರಂತರ ಕಿರುಕುಳ ನೀಡುತ್ತಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯವಳಲ್ಲ. ನಮ್ಮ ಮಗಳ ಕೊಲೆ ನಡೆದ ಬಗ್ಗೆ ಅನುಮಾನವಿದೆ ಎನ್ನುವುದು ತ್ವಿಶಾಳ ಪಾಲಕರ ವಾದವಾಗಿದೆ,(ಏಜನ್ಸೀಸ್​).