- ರಾಜ್ಯಪಾಲರ ಎದುರು ಹಕ್ಕು ಮಂಡಿಸುವಲ್ಲಿ ಕೊನೆಗೂ ಜನ ನಾಯಗನ್ ಯಶಸ್ವಿ
- ಟಿವಿಕೆ ನಾಯಕ ಬಹುಮತ ತೋರಿಸುತ್ತಿದ್ದಂತೆ ಸರ್ಕಾರ ರಚನೆಗೆ ಗವರ್ನರ್ ಗ್ರೀನ್ ಸಿಗ್ನಲ್
- ನಾಳೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ವಿಜಯ್ ಸಿಎಂ ಆಗಿ ಪ್ರಮಾಣವಚನ
TVK Vijay: ಹೊಸ ಸರ್ಕಾರ ರಚನೆಗೆ ಮೂರು ಬಾರಿ ಬಹುಮತ ತೋರಿಸಿ ಎಂದು ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ನಾಯಕ ವಿಜಯ್ರನ್ನು ವಾಪಾಸ್ ಕಳುಹಿಸಿದ್ದ ರಾಜ್ಯಪಾಲರು, ಕಡೆಗೂ ನಾಲ್ಕನೇ ಭೇಟಿಯಲ್ಲಿ ದಳಪತಿ ಮ್ಯಾಜಿಕ್ ನಂಬರ್ ದಾಟಿದ್ದನ್ನು ಸಾಬೀತುಪಡಿಸಿದ ಬೆನ್ನಲ್ಲೇ ಸರ್ಕಾರ ರಚನೆಗೆ ಅಸ್ತು ಎಂದಿದ್ದಾರೆ.
ನಾಳೆ (ಮೇ.10) ಮಧ್ಯಾಹ್ನ 3.15ಕ್ಕೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಡೆಗೂ ರಾಜ್ಯಪಾಲರ ಎದುರು ಹಕ್ಕು ಮಂಡಿಸಿದ ವಿಜಯ್ರನ್ನು ನೋಡಿ ಟಿವಿಕೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ದಳಪತಿ ನಿವಾಸದ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.
ತಮಿಳುನಾಡಿನ ಚುನಾವಣೆಯಲ್ಲಿ ದಾಖಲೆಯ ಗೆಲ್ಲುವ ನೋಡುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಪಟ್ಟ ಸಿಗಲು ಭಾರೀ ವಿಳಂಬ ಎದುರಾಯಿತು. ಈಗ ರಾಜ್ಯಪಾಲರ ಜೊತೆಗಿನ ನಾಲ್ಕನೇ ಭೇಟಿಯಲ್ಲಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ಪಡೆದಿರುವ ವಿಜಯ್, ನಾಳೆಯಿಂದಲೇ ತಮಿಳುನಾಡಿನಲ್ಲಿ ತಮ್ಮ ದರ್ಬಾರ್ ಆರಂಭಿಸಲಿದ್ದಾರೆ. ಇದು ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಗೆಲುವು ಒಲಿದಂತಾಗಿದೆ. ಕಡೆಗೂ ವಿಜಯ್ ನಂಬರ್ ಗೇಮ್ ಕೈಹಿಡಿದಿದೆ.
ನಾಳೆ ನಡೆಯಲಿರುವ ಪ್ರಮಾಣ ವಚನಕ್ಕೆ 'ಕೈ' ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆಗಮಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ (5), ಎಡ ಪಕ್ಷಗಳಾದ ಸಿಪಿಐ (2), ಸಿಪಿಐ (ಎಂ)- 2, ವಿಸಿಕೆ (2) ಮತ್ತು ಐಯುಎಂಎಲ್ (2) ತಮ್ಮ ಬೆಂಬಲವನ್ನು ಟಿವಿಕೆಗೆ ನೀಡುವ ಮೂಲಕ ತಮಿಳುನಾಡಿನಲ್ಲಿ ವಿಜಯ್ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ದೊಡ್ಡ ಕಾರಣವಾಗಿವೆ.