- ರಾಜ್ಯಪಾಲರ ಎದುರು ಹಕ್ಕು ಮಂಡಿಸುವಲ್ಲಿ ಜನ ನಾಯಗನ್ ಕೊನೆಗೂ ಯಶಸ್ವಿ
- ಟಿವಿಕೆ ನಾಯಕ ಬಹುಮತ ತೋರಿಸುತ್ತಿದ್ದಂತೆ ಸರ್ಕಾರ ರಚನೆಗೆ ಗವರ್ನರ್ ಅಸ್ತು
- ನಾಳೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ವಿಜಯ್ ಸಿಎಂ ಆಗಿ ಪ್ರಮಾಣವಚನ
TVK Vijay: ಹೊಸ ಸರ್ಕಾರ ರಚನೆಗೆ ಎರಡು ಬಾರಿ ಬಹುಮತ ತೋರಿಸಿ ಎಂದು ಟಿವಿಕೆ ಪಕ್ಷದ ನಾಯಕ ವಿಜಯ್ರನ್ನು ವಾಪಾಸ್ ಕಳುಹಿಸಿದ್ದ ರಾಜ್ಯಪಾಲರು, ಕಡೆಗೂ ಮೂರನೇ ಭೇಟಿಯಲ್ಲಿ ದಳಪತಿ ಮ್ಯಾಜಿಕ್ ನಂಬರ್ ದಾಟಿದ್ದನ್ನು ಪ್ರದರ್ಶಿಸಿದ ಬೆನ್ನಲ್ಲೇ ಸರ್ಕಾರ ರಚನೆಗೆ ಅಸ್ತು ಎಂದಿದ್ದಾರೆ.
ನಾಳೆ (ಮೇ.09) ಬೆಳಗ್ಗೆ 11 ಗಂಟೆಗೆ ಚೆನ್ನೈ ನೆಹರು ಸ್ಟೇಡಿಯಂನಲ್ಲಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಡೆಗೂ ರಾಜ್ಯಪಾಲರ ಎದುರು ಹಕ್ಕು ಮಂಡಿಸಿದ ವಿಜಯ್ರನ್ನು ನೋಡಿ ಟಿವಿಕೆ ಪಕ್ಷದ ಕಾರ್ಯಕರ್ತರು ವಿಜಯ್ ನಿವಾಸದ ಮುಂದೆ ಕಣ್ಣೀರು ಹಾಕಿದ್ದಾರೆ. ಹಲವರು ಕುಣಿದು ಕುಪ್ಪಳಿಸುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.
ತಮಿಳುನಾಡಿನ ಚುನಾವಣೆಯಲ್ಲಿ ದಾಖಲೆಯ ಗೆಲ್ಲುವ ನೋಡುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆಗೆ ಪಟ್ಟ ಸಿಗಲು ವಿಳಂಬ ಎದುರಾಯಿತು. ಈಗ ರಾಜ್ಯಪಾಲರ ಜೊತೆಗಿನ ಭೇಟಿಯಲ್ಲಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಸದ್ಯ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಗೆಲುವು ಒಲಿದಂತಾಗಿದೆ. ಕಡೆಗೂ ವಿಜಯ್ ನಂಬರ್ ಗೇಮ್ ಯಶಸ್ವಿಯಾಗಿದೆ.
ನಾಳೆ ನಡೆಯಲಿರುವ ಪ್ರಮಾಣ ವಚನಕ್ಕೆ 'ಕೈ' ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆಗಮಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ (5), ಎಡ ಪಕ್ಷಗಳಾದ ಸಿಪಿಐ (2), ಸಿಪಿಐ (ಎಂ)- 2, ವಿಸಿಕೆ (2) ಮತ್ತು ಐಯುಎಂಎಲ್ (2) ತಮ್ಮ ಬೆಂಬಲವನ್ನು ಟಿವಿಕೆಗೆ ನೀಡುವ ಮೂಲಕ ತಮಿಳುನಾಡಿನಲ್ಲಿ ವಿಜಯ್ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ದೊಡ್ಡ ಕಾರಣವಾಗಿವೆ.