TVK Minister S Keerthana 'Short Dress' Video Sparks Political Row 
ದೇಶ

ತುಂಡುಡುಗೆ ತೊಟ್ಟ ವಿಡಿಯೋ ವಿವಾದ; ಶಾರ್ಟ್ ಡ್ರೆಸ್ ಧರಿಸಿದ್ದು ನಾನಲ್ಲ, ನಾನಾಗಿದ್ದರೂ ತಪ್ಪೇನು ಎಂದ ಟಿವಿಕೆ ಸಚಿವೆ ಕೀರ್ತನಾ

ಪ್ರಮುಖ ಮುಖ್ಯಾಂಶಗಳು

  • ನನ್ನ ಕಾರ್ಯ, ಸಾಧನೆ ಬಗ್ಗೆ ಮಾತನಾಡಲು ಸಾಧ್ಯವಾಗದೆ..ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡ್ತಿದ್ದಾರೆ.
  • ಸಚಿವೆ ಕೀರ್ತನಾ ಅವರು ಎಂದು ಗುರತಿಸಲಾದ ಮಿನಿ ಡ್ರೆಸ್ ಧರಿಸಿದ್ದ ವಿಡಿಯೋ ವೈರಲ್.
  • ನಾನು ಅಂತಹ ಬಟ್ಟೆ ಹಾಕಿಲ್ಲ..ಅಕಸ್ಮಾತ್​ ಧರಿಸಿದರೂ ತಪ್ಪೇನಿದೆ ಎಂದ ಸಚಿವೆ ಕೀರ್ತನಾ.

ಚೆನ್ನೈ:  ತಮಿಳುನಾಡಿನಲ್ಲಿ  ಸಚಿವೆ ಎಸ್. ಕೀರ್ತನಾ ಸ್ಕರ್ಟ್​ ಧರಿಸಿದ್ದಾರೆ ಎನ್ನುವ ವಿಡಿಯೋಗಳು ವೈರಲ್​ ಆಗಿದೆ. ಆ ಬೆನ್ನಲ್ಲೇ ಮಾತನಾಡಿರುವ ಅವರು, ಸುಳ್ಳು ಸುದ್ದಿ ಹರಡುತ್ತಿರುವ ಹಾಗೂ ಸ್ತ್ರೀ ದ್ವೇಷದ(

TVK Minister  S Keerthana 'Short Dress' Video Sparks Political Row

) ಬಗ್ಗೆ ಕಿಡಿಕಾರಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಕಪ್ಪು ಬಣ್ಣದ ಸ್ಕರ್ಟ್​ ಧರಿಸಿ ಮಹಿಳೆಯೊಬ್ಬರು ಕಾರಿನಿಂದ ಇಳಿಯುತ್ತಿರುವ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಮಹಿಳೆ ತಮಿಳುನಾಡಿನ ಟಿವಿಕೆ ಸರ್ಕಾರದ ಸಚಿವೆ ಸಚಿವೆ ಎಸ್. ಕೀರ್ತನಾ ಎಂದು ಗುರುತಿಸಿ, ಟೀಕೆ ವ್ಯಕ್ತಪಡಿಸಲಾಗುತ್ತಿತ್ತು. ಈ ಬಗ್ಗೆ ಅವರು ಭಾನುವಾರ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡರು.
ವಿಡಿಯೋದಲ್ಲಿರುವ ಮಹಿಳೆ ನಾನಲ್ಲ. ನಾನಾಗಿದ್ದರೂ ತಪ್ಪೇನು?. ಮಹಿಳೆಯರ ಬಟ್ಟೆ ಹಾಗೂ ಅವರ ನೋಟದ ಬಗ್ಗೆ  ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸುವ ಸ್ತ್ರೀ ದ್ವೇಷ ಮನೋಭಾವನೆ ವಿರುದ್ಧ ಅವರು ಕಿಡಿಕಾರಿದ್ದಾರೆ.  ನಮ್ಮ ಕೆಲಸಗಳ ವಿರುದ್ಧ ಸವಾಲು ಹಾಕಲು ಸಾಧ್ಯವಾಗದೇ ಇದ್ದಾಗ ವೈಯಕ್ತಿಕ ಜೀವನದ ವಿಚಾರಗಳನ್ನು ಚರ್ಚೆಗೆ ತರುತ್ತಾರೆ ಎಂದು ಟ್ರೋಲಿಗರ ವಿರುದ್ಧ ಕಿಡಿಕಾರಿದ್ದಾರೆ. 

ಕೀರ್ತನಾ ಹೇಳಿದ್ದು ಹೀಗೆ

ಒಬ್ಬ ಮಹಿಳೆ ತನ್ನ ಪಾಡಿಗೆ ತಾನಿರುವ ವಿಡಿಯೋ ರಾಜಕೀಯ ಚರ್ಚೆಗೆ ಕಾರಣವಾಗುತ್ತೆ ಎಂದರೆ, ಅದರ ಹಿಂದೆ ಇರುವ ದುರ್ಬಲ ಮತ್ತು ಪ್ರತಿಗಾಮಿ ಮನಸ್ಥಿತಿ ಏನೆಂಬುದು ಸ್ಪಷ್ಟವಾಗುತ್ತದೆ. ಆದರೆ ನನಗೆ ಯಾವುದೇ ಆಶ್ಚರ್ಯವಾಗಿಲ್ಲ.  ಮಹಿಳೆಯರ ವಿರುದ್ಧ ಆಳವಾದ ಅವಹೇಳನಕಾರಿ ಟೀಕೆಗಳ ಇತಿಹಾಸವಿರುವ ನಾಯಕನ ಅನುಯಾಯಿಗಳಿಂದ ಬೇರೇನು ನಿರೀಕ್ಷಿಸಲು ಸಾಧ್ಯ? ಎಂದು  ಸಚಿವೆ ಕೀರ್ತನಾ ಹೇಳಿದರು.

ಅದು ನಾನಲ್ಲ

ಆ ವಿಡಿಯೋದಲ್ಲಿರುವ ಮಹಿಳೆ ನಾನಲ್ಲ. ಆದರೆ ಒಂದು ವೇಳೆ ಅದು ನಾನಾಗಿದ್ದರೂ ಅದರಿಂದ ಏನು ವ್ಯತ್ಯಾಸವಾಗುತ್ತದೆ? ಒಬ್ಬ ಮಹಿಳೆಯ ಬಟ್ಟೆ, ನೋಟ ಅಥವಾ ಅವಳ ಸಂತೋಷವು ಇಂದಿಗೂ ಸಾರ್ವಜನಿಕ ವಿಚಾರಣೆಗೆ ಒಳಪಡುವ ವಿಷಯಗಳಾಗಿ ಏಕೆ ಉಳಿದಿವೆ? ಎಂದು ಗುಡುಗಿದರು

ಸ್ತ್ರೀ ದ್ವೇಷ

ನಮ್ಮ ನೀತಿ, ಕಾರ್ಯ, ಆಡಳಿತ ಹಾಗೂ ಸಾಧನೆಗಳ ಮೂಲಕ ನಮ್ಮನ್ನು ಎದುರಿಸಲು ಸಾಧ್ಯವಾಗದೇ ಇದ್ದಾಗ, ಆಯ್ಕೆ ಮಾಡಿಕೊಳ್ಳುವ  ವಿಚಾರ ಎಂದರೆ ನಮ್ಮ ಹಾಗೂ ಕುಟುಂಬದ ಸದಸ್ಯರ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಕತೆಯನ್ನು ಸೃಷ್ಟಿ ಮಾಡುವುದು. ಸಕಾರಾತ್ಮಕವಾಗಿ ಕೊಡುಗೆ ನೀಡಲು ಏನೂ ಇಲ್ಲದವರ ಅತ್ಯಂತ ಹಳೆಯ ಆಯುಧವೇ ಈ ಸ್ತ್ರೀದ್ವೇಷ ಎಂದು ಕೆಂಡಕಾರಿದರು
ಹಾಗೂ, ಕೇವಲ ಸಣ್ಣ ಹೋಲಿಕೆಯಿಂದಾಗಿ ಈ ವಿಡಿಯೋದಲ್ಲಿ ಅನಗತ್ಯವಾಗಿ ಸಿಲುಕಿಕೊಂಡಿರುವ ಆ ಮಹಿಳೆಗೆ: ನಾನು ಕ್ಷಮೆ ಕೋರುತ್ತೇನೆ. ನೀವು ನೋಡಲು ತುಂಬಾ ಸುಂದರವಾಗಿದ್ದೀರಿ, ಮತ್ತು ನಿಮ್ಮ ಸ್ವಂತ ಶೈಲಿಯಲ್ಲಿ ನೀವು ಬದುಕು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ನಿಮ್ಮ ಹೇರ್ ಚೆನ್ನಾಗಿವೆ. ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).