ದಳಪತಿ ವಿಜಯ್ ಮತ್ತು ರಾಹುಲ್ ಗಾಂಧಿ 
ದೇಶ

ಸ್ಪಷ್ಟ ಬಹುಮತ ಪಡೆಯದ ದಳಪತಿ ವಿಜಯ್ ನೇತೃತ್ವದ ಟಿವಿಕೆ; ಕಾಂಗ್ರೆಸ್​ ಜೊತೆ ಮೈತ್ರಿ ಸಾಧ್ಯತೆ | Thalapathy Vijay

ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು, ಅಧಿಕಾರಕ್ಕೇರಲು ಬಹುಮತದ ಕೊರತೆಯನ್ನು ಎದುರಿಸಿದೆ. ಟಿವಿಕೆಗೆ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ತಮಿಳುನಾಡು ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ 105 ಸ್ಥಾನಗಳನ್ನು ಗಳಿಸಿದ್ದು, ಡಿಎಂಕೆ 71 ಸ್ಥಾನಗಳನ್ನು ಮತ್ತು ಎಐಎಡಿಎಂಕೆ 57 ಸ್ಥಾನಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 234 ಸ್ಥಾನಗಳಿವೆ. ಮ್ಯಾಜಿಕ್ ನಂಬರ್ 118 ಆಗಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ತಮಿಳುನಾಡು ಚುನಾವಣೆ ಫಲಿತಾಂಶ ಆಶ್ಚರ್ಯ ತಂದಿದೆ. ತಡಮಾಡದೇ ತಮಿಳುನಾಡು ಕಾಂಗ್ರೆಸ್​ಗೆ ಏನು ಮಾಡಬೇಕು ಎಂಬುದನ್ನು ಹೇಳುತ್ತೇವೆ. ವಿಜಯ್​ ಅವರ ಗೆಲುವಿಗೆ ಅಭಿನಂದನೆ ಎಂದು ಹೇಳಿದ್ದಾರೆ.
ಇನ್ನೂ ಚುನಾವಣೆಗೂ ಮೊದಲೇ ಟಿವಿಕೆ ಜೊತೆ ಕಾಂಗ್ರೆಸ್ ಒಂದಾಗಬೇಕಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ಅದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಚುನಾವಣಾ ಫಲಿತಾಂಶ ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗಕ್ಕೆ ಮುನ್ನುಡಿ ಬರೆದಿದೆ. ಎಂಜಿಆರ್ ಮತ್ತು ಜಯಲಲಿತಾ ಅವರ ನಂತರ ಸಿನಿಮಾದಿಂದ ಬಂದು ದೊಡ್ಡ ಮಟ್ಟದ ಯಶಸ್ಸು ಕಂಡ ನಟನಾಗಿ ವಿಜಯ್ ಹೊರಹೊಮ್ಮಿದ್ದಾರೆ. ಒಂದು ವೇಳೆ ಸರ್ಕಾರ ರಚಿಸಿದ್ರೆ ತಮಿಳುನಾಡಿನ ದ್ವಿಪಕ್ಷೀಯ (DMK vs AIADMK) ರಾಜಕೀಯ ಇತಿಹಾಸಕ್ಕೆ ಪೂರ್ಣವಿರಾಮ ಬೀಳಲಿದೆ. 50 ವರ್ಷಗಳ ಬಳಿಕ ಮೂರನೇ ಪಕ್ಷವೊಂದು ಅಧಿಕಾರಕ್ಕೇರಿದಂತಾಗುತ್ತದೆ (ಏಜೆನ್ಸೀಸ್).