ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ 
ದೇಶ

ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಸುಂಕ ಹೇರಿದ್ದು ರಷ್ಯಾ ತೈಲ ಖರೀದಿಯಿಂದಾಗಿ ಅಲ್ಲ; ಬೇರೆ ಕಥೆ ಹೇಳಿದ ರಘುರಾಮ್ ರಾಜನ್ | Raghuram Rajan

ನವದೆಹಲಿ: ಭಾರತದ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 25ರಷ್ಟು ಸುಂಕದ ಜೊತೆಗೆ ಹೆಚ್ಚುವರಿಯಾಗಿ ಮತ್ತೆ ಶೇ. 25ರಷ್ಟು ಸುಂಕ ವಿಧಿಸಿದ್ದು, ರಷ್ಯಾ ತೈಲ ಖರೀದಿಸಿದ್ದಕ್ಕಾಗಿ ಅಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್(Raghuram Rajan) ಬೇರೆಯದೇ ಕಥೆಯನ್ನು ಹೇಳಿದ್ದಾರೆ. ಅದು ಏನೂ ಇಲ್ಲಿ ಓದಿ.
ಯುಬಿಎಸ್​ ಸೆಂಟರ್ ಫೋರಂ ಫಾರ್ ಎಕನಾಮಿಕ್ ಡೈಲಾಗ್​ನಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಭಾರತ-ಪಾಕಿಸ್ತಾನ ನಡುವೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕದನ ವಿರಾಮದ ಕ್ರೆಡಿಟ್ ಬಗ್ಗೆ ನಡೆದ ಭಿನ್ನಾಭಿಪ್ರಾಯದಿಂದ ಹೆಚ್ಚುವರಿ ಸುಂಕ ವಿಧಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತ ರಷ್ಯಾದಿಂದ ತೈಲ ಖರೀದಿ ಭಾರತ ಮತ್ತು ಅಮೆರಿಕಾದ ನಡುವಿನ ವ್ಯಾಪಾರ ಸಮಸ್ಯೆಯಿಂದಾಗಿ ಹೆಚ್ಚುವರಿ ಸುಂಕ ವಿಧಿಸಲಾಗಿದೆ ಎಂದು ನಾನು ಭಾವಿಸುವುದಿಲ್ಲ. ಬದಲಾಗಿ ನಿಜವಾದ ಸಮಸ್ಯೆ ಭಾರತ-ಪಾಕ್ ನಡುವಿ ಕದನ ವಿರಾಮದ ಕ್ರೆಡಿಟ್ ಬಗ್ಗೆ ಇರೋದು. ಕದನ ವಿರಾಮದ ಬಳಿಕ ಟ್ರಂಪ್ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಕ್ರೆಡಿಟ್ ಪಡೆದುಕೊಂಡರು, ಅದರ ಬಳಿಕ ಭಾರತ ನೀಡಿದ ಹೇಳಿಕೆ ಅವರಿಗೆ ಇಷ್ಟವಾಗಲಿಲ್ಲ ಅಂತ ಕಂಡಿದೆ ಎಂದು ತಿಳಿಸಿದ್ದಾರೆ.

ಕ್ರೆಡಿಟ್ ವಿಚಾರದಲ್ಲಿ ಪಾಕ್ ಜಾಣ್ಮೆಯ ಆಟವಾಡಿತು

ಭಾರತ-ಪಾಕ್ ಕದನ ವಿರಾಮದ ವಿಚಾರದಲ್ಲಿ ಪಾಕಿಸ್ತಾನ ಜಾಣ್ಮೆಯ ಆಟವಾಡಿತು. ಕದನ ವಿರಾಮದ ಕೀರ್ತಿಯನ್ನು ಪಾಕ್ ಬಹಿರಂಗವಾಗಿ ಟ್ರಂಪ್​ಗೆ ನೀಡಿತು. ಪಾಕ್ ಟ್ರಂಪ್ ಅವರನ್ನು ಚೆನ್ನಾಗಿ ನಿಭಾಯಿಸಿತು. ಭಾರತ ಎರಡೂ ದೇಶಗಳ ನಡುವಿನ ಮಾತುಕತೆ ಬಳಿಕ ಕದನ ವಿರಾಮ ಆಯ್ತು, ಮೂರನೇ ವ್ಯಕ್ತಿ ಪ್ರವೇಶವಾಗಲಿಲ್ಲ ಎಂದು ಹೇಳಿತು. ಸತ್ಯ ಬೇರೆ ಇರಬಹುದು. ಆದರೆ ಅಮೆರಿಕ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 50ರಷ್ಟು ಸುಂಕ ವಿಧಿಸಿತು. ಅದೇ ಪಾಕಿಸ್ತಾನಕ್ಕೆ ಶೇ. 19ರಷ್ಟು ವಿಧಿಸಿತು ಎಂದಿದ್ದಾರೆ (ಏಜೆನ್ಸೀಸ್).