ಘಟನೆ ನಡೆದ ಸ್ಥಳ  
ದೇಶ

ದ್ವಾರಕಾಗೆ ಪಾದಯಾತ್ರೆ ಹೊರಟಿದ್ದ ಯಾತ್ರಿಗಳಿಗೆ ಡಿಕ್ಕಿ ಹೊಡೆದ ಟ್ರಕ್; ಸ್ಥಳದಲ್ಲೇ ನಾಲ್ವರು ಸಾವು | Truck hits pilgrims

ಅಲಹಾಬಾದ್: ಗುಜರಾತ್​ನ ಐತಿಹಾಸಿಕ ದ್ವಾರಕಾಗೆ ಪಾದಯಾತ್ರೆ ಹೊರಟಿದ್ದ ಯಾತ್ರಾರ್ಥಿಗಳಿಗೆ ಇಂದು(ಡಿ. 17) ಟ್ರಕ್​ವೊಂದು ಡಿಕ್ಕಿ ಹೊಡೆದಿದ್ದು(Truck hits pilgrims), ಸ್ಥಳದಲ್ಲೇ ನಾಲ್ವರು ಮೃತಪಟ್ಟರೇ, ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗುಜರಾತ್‌ನ ಮೋರ್ಬಿ ಜಿಲ್ಲೆಯ ಮಾಲಿಯಾ ಗ್ರಾಮ ಮತ್ತು ಜಾಮ್‌ನಗರದ ನಡುವೆ ಅಪಘಾತ ಸಂಭವಿಸಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗಾಯಗೊಂಡ ಯಾತ್ರಿಕನನ್ನು ಮೋರ್ಬಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಪಾಲ್‌ಸಿನ್ಹ್ ಜಲಾ, ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯಾತ್ರಿಕರ ಮೇಲೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಅವರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು, ಒಬ್ಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ತೀರ್ಥಯಾತ್ರೆಗೆ ದ್ವಾರಕಾಗೆ ನಡೆದುಕೊಂಡು ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.
ಮೃತಪಟ್ಟವರು ಬನಸ್ಕಾಂತ ಜಿಲ್ಲೆಯ ನಿವಾಸಿಗಳಾದ ದಿಲೀಪ್‌ಭಾಯ್ ಚೌಧರಿ (28), ಹಾರ್ದಿಕ್ ಚೌಧರಿ (28), ಭಗವಾನ್‌ಭಾಯ್ ಚೌಧರಿ (65) ಮತ್ತು ಅಮರಾಭಾಯಿ ಚೌಧರಿ (62) ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದು, ತನಿಖೆ ಆರಂಭಿಸಲಾಗಿದೆ. ಡಿಕ್ಕಿ ಹೊಡೆದಿರುವ ಟ್ರಕ್ ಚಾಲಕನನ್ನು ಪತ್ತೆಹಚ್ಚಲಾಗ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).