Flight Cleanliness 
ದೇಶ

ವಿಮಾನವೋ ಅಥವಾ ಹಳ್ಳಿ ಬಸ್ಸೋ?; ಭಾರತೀಯ ಪ್ರಯಾಣಿಕರ ನೈರ್ಮಲ್ಯದ ಬಗ್ಗೆ ಬ್ಲಾಗರ್ ಹೇಳಿದ್ದಿಷ್ಟು!..Flight Cleanliness

ಪ್ರಮುಖ ಮುಖ್ಯಾಂಶಗಳು

  • ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತಿನ ಬಗ್ಗೆ ಧ್ವನಿ ಎತ್ತಿದ ಬ್ಲಾಗರ್ ಸಂಧ್ಯಾ ಮಜ್ಜಿ
  • "ಎಲ್ಲೆಂದರಲ್ಲಿ ಕಸ ಎಸೆಯುವುದು ನಾಚಿಕೆಗೇಡಿನ ಸಂಗತಿ" ಎಂದು ಕಿಡಿ
  • ಭಾರತೀಯರು ಇರೋ ವಿಮಾನದಲ್ಲೇ ಇಂತಹ ಅನೈರ್ಮಲ್ಯ ಕಂಡುಬರೋದು ಎಂದ ಸಂಧ್ಯಾ
Flight Cleanliness: ಬಸ್​ ಮತ್ತು ರೈಲಿನಲ್ಲಿ ಪ್ರಯಾಣಿಸುವಾಗ ಅಲ್ಲಿ ಅನೈರ್ಮಲ್ಯ ಇರೋದು ಸಹಜವಾಗಿಬಿಟ್ಟಿದೆ. ತಿಂದ ಕಡಲೆ ಬೀಜದ ಸಿಪ್ಪೆ, ಕಡಲೇ ಪುರಿ, ಚಿಪ್ಸ್ ಪ್ಯಾಕೇಟ್ ಹೀಗೇ ನಾನಾ ತಿಂಡಿಯ ಚೂರುಗಳು ಬಿದ್ದಿರುತ್ತದೆ. ಆದರೆ, ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವ ಪರಿಸ್ಥಿತಿ ವಿಮಾನದಲ್ಲಿಯೂ ಇರುತ್ತದೆ ಎಂದರೆ ನಂಬೀರಾ?. ಖಂಡಿತಾ ಈಗ ನಂಬಲೇ ಬೇಕು. ಈ ಬಗ್ಗೆ ಟ್ರಾವೆಲ್ ಬ್ಲಾಗರ್ ಸಂಧ್ಯಾ ಮಜ್ಜಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಏನಿದೆ?

ಇದು ಕೇವಲ ಬ್ಯಾಂಕಾಕ್ ವಿಮಾನವೊಂದರ ಸಮಸ್ಯೆಯಲ್ಲ. ನಾನು ಪ್ರತಿ ಬಾರಿಯೂ ವಿಮಾನಗಳಲ್ಲಿ ಪ್ರಯಾಣಿಕರು ಬಿಟ್ಟುಹೋದ ಕಸವನ್ನು ನೋಡುತ್ತೇನೆ. ವಯಸ್ಕರು ಸಹ ಹೀಗೆಯೇ ಮಾಡುತ್ತಾರೆ, ಅದರಲ್ಲೂ ವಿಶೇಷವಾಗಿ ಭಾರತೀಯರು ಹೆಚ್ಚಿರುವ ವಿಮಾನಗಳಲ್ಲಿ ಇದು ಜಾಸ್ತಿ. ಆಮೇಲೆ ಭಾರತೀಯರನ್ನು ಗುರಿ ಮಾಡಿ ಮಾತನಾಡಲಾಗುತ್ತಿದೆ ಎಂದು ನಾವು ಹಲುಬುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಟಾಯ್ಲೆಟ್ ನೀಟ್​ ಇಡೋಲ್ಲ

ಈ ವಿಮಾನದ ಸ್ಥಿತಿ ನೋಡಿದರೆ ನಾನು ವಾಣಿಜ್ಯ ವಿಮಾನದಲ್ಲಿದ್ದೇನೋ ಅಥವಾ ಭಾರತದ ಯಾವುದೋ ಹಳ್ಳಿಯ ಸರ್ಕಾರಿ ಬಸ್ಸಿನಲ್ಲಿದ್ದೇನೋ ಎಂದು ಅನ್ನಿಸುವಂತಿತ್ತು. ಏನೇ ಇರಲಿ, ಎಲ್ಲೇ ಆಗಲಿ ಕಸ ಎಸೆಯುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇಂತಹ ವರ್ತನೆಗಳು ವಿಮಾನ ಹಾರಾಟ ವಿಳಂಬವಾಗಲು ಕೂಡ ಕಾರಣವಾಗುತ್ತವೆ ಎಂದು ಹೇಳಿದ್ದಾರೆ.
ಒಮ್ಮೆ ನಾನು ಪ್ರಯಾಣಿಸುವಾಗಲೇ ವಿಮಾನದ ಶೌಚಾಲಯವೊಂದನ್ನು ನೋಡಿದೆ. ಅಲ್ಲಿ ವ್ಯಕ್ತಿಯೊಬ್ಬ ನೆಲದ ತುಂಬೆಲ್ಲಾ ಮೂತ್ರ ವಿಸರ್ಜನೆ ಮಾಡಿ, ಟಿಶ್ಯೂ ಪೇಪರ್‌ಗಳು ಎಲ್ಲೆಂದರಲ್ಲಿ ಬಿಸಾಡಿದ್ದ. ಅದು ಒದ್ದೆಯಾಗಿತ್ತು. ಅದನ್ನು ವಿಮಾನದ ಸಿಬ್ಬಂದಿಯೊಬ್ಬರು ಅದನ್ನು ತನ್ನ ಕೈಯಾರೆ ಸ್ವಚ್ಛಗೊಳಿಸಬೇಕಾಯಿತು. ಅವರ ಸ್ಥಿತಿ ನೋಡಿ ನನಗೆ ತುಂಬಾ ಬೇಸರವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಸ ಬಳಿಯೋಕೆ ಸಿಬ್ಬಂದಿ ಇಲ್ಲ

ವಿಮಾನ ಸಿಬ್ಬಂದಿ ಕಸ ಗುಡಿಸುವವರಲ್ಲ. ಅವರು ಕಠಿಣ ತರಬೇತಿ ಮತ್ತು ಕೌಶಲ್ಯಗಳ ಮೂಲಕ ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ನೀವು ಮಾಡುವ ಗಲೀಜನ್ನು ಅವರು ಬಾಚಬೇಕು ಎಂದು ನಿರೀಕ್ಷಿಸುವುದು ತಪ್ಪು ಎಂದು ಸಂಧ್ಯಾ ಪ್ರತಿಪಾದಿಸಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಜನರಿಗೆ ಸಿವಿಕ್ ಸೆನ್ಸ್​ ಅನ್ನೋದೆ ಇಲ್ಲ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)