Indian Railways (ಚಿತ್ರ Instagram)
- ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಐಆರ್‌ಸಿಟಿಸಿ ನಿಗದಿತ ದರಗಳನ್ನು ಜಾರಿ ಮಾಡಿದೆ
- ಆದರೆ, ಕೆಲವು ಖಾಸಗಿ ಮಾರಾಟಗಾರರು ಕಾನೂನು ಬಾಹಿರವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ
- ದೂರು ದಾಖಲಾಗದಂತೆ ತಡೆಯಲು ಹೆಚ್ಚುವರಿ ಪಡೆದಿದ್ದ ಹಣವನ್ನು ಪ್ರಯಾಣಿಕರಿಗೆ ಮರುಪಾವತಿಸಲು ಮುಂದಾಗಿದ್ದಾರೆ
Indian Railways: ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಐಆರ್‌ಸಿಟಿಸಿ (IRCTC) ನಿಗದಿತ ದರಗಳನ್ನು ಜಾರಿಗೆ ತಂದಿದ್ದರೂ, ಕೆಲವು ಖಾಸಗಿ ಮಾರಾಟಗಾರರು ಕಾನೂನು ಬಾಹಿರವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಆದಾಗ್ಯೂ, ದೆಹಲಿ ಮತ್ತು ಅಮೃತಸರ ನಡುವೆ ಸಂಚರಿಸುವ ಇಂಟರ್ಸಿಟಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕರೊಬ್ಬರು ನಡೆಸಿದ 'ಸ್ಟಿಂಗ್ ಆಪರೇಷನ್' ಮಾದರಿಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪ್ರಯಾಣಿಕನು ಒಂದು ಕಪ್ ಚಹಾ ಮತ್ತು ಕಾಫಿಯನ್ನು ಕೇಳುತ್ತಿರುವುದು ಕಂಡುಬರುತ್ತದೆ. ಈ ವೇಳೆ ಮಾರಾಟಗಾರ ಪ್ರಯಾಣಿಕನಿಗೆ 10 ರೂಗಳಿಗೆ ಮಾರಾಟ ಮಾಡಿದ್ದಾನೆ. ಜೊತೆಗೆ ನೀರಿನ ಬಾಟಲಿಗಳನ್ನು 20 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅದರ ಅಧೀಕೃತ ಬೆಲೆ ಲೀಟರ್ಗೆ 14 ರೂ ಆಗಿತ್ತು.
ಈ ಘಟನೆಯಿಂದ ಆಕ್ರೋಶಕ್ಕೆ ಒಳಗಾದ ಪ್ರಯಾಣಿಕನು ಹೆಚ್ಚಿನ ಬೆಲೆಯ ವಸ್ತುಗಳನ್ನು ಪಟ್ಟಿ ಮಾಡಿ ಔಪಚಾರಿಕ ದೂರು ದಾಖಲಿಸಿದನು. ಸಲಾಡ್ ಅಥವಾ ಮೊಸರಿನಂತಹ ಅಗತ್ಯ ಪದಾರ್ಥಗಳಿಲ್ಲದೆ ಜೊತೆಗೆ ನ್ಯಾಪ್ಕಿನ್ ಇಲ್ಲದೆಯೂ ಬಿರಿಯಾನಿಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಯಾಣಿಕನು ಬೆಲೆ ಏರಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ನಿಮ್ಮ ಮ್ಯಾನೇಜರ್ ಎಲ್ಲಿದ್ದಾರೆ? ಅವರೊಂದಿಗೆ ಮಾತನಾಡಬೇಕು ಎಂದು ಕೇಳಿದ್ದಾರೆ. ಈ ವೇಳೆ ಸಿಬ್ಬಂದಿ ತಕ್ಷಣವೇ ಗಾಬರಿಗೊಂಡಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ದೂರು ದಾಖಲಾಗದಂತೆ ತಡೆಯಲು ಹೆಚ್ಚುವರಿ ಪಡೆದಿದ್ದ ಹಣವನ್ನು ಪ್ರಯಾಣಿಕರಿಗೆ ಮರುಪಾವತಿಸಲು ಮುಂದಾಗಿದ್ದಾರೆ.
ಆದರೆ, ವಿಷಯ ಅಲ್ಲಿಗೆ ಮುಗಿಯಲಿಲ್ಲ. ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದ ಹಿರಿಯ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ಬೆದರಿಕೆ ಧ್ವನಿಯಲ್ಲಿ ಮಾತನಾಡಿದ್ದು, ನೀವು ಅಗ್ಗದ ದರದ ಚಹಾ ಅಥವಾ ಕಾಫಿ ಬೇಕೆಂದು ನಮಗೆ ಮೊದಲೇ ಕೇಳಲಿಲ್ಲ. ಹಾಗಾಗಿ ನಾವು ಪ್ರೀಮಿಯಂ ದರ ವಿಧಿಸಿದ್ದೇವೆ ಎಂದು ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದ ಶೀರ್ಷಿಕೆಯಲ್ಲಿ ನಮಗೆ 5 ಅಥವಾ 10 ರೂಪಾಯಿ ಸಣ್ಣ ಮೊತ್ತವಾಗಿ ಕಾಣಿಸಬಹುದು. ಆದರೆ ಪ್ರತಿ ಪ್ರಯಾಣಿಕರಿಂದ, ಪ್ರತಿ ಕೋಚ್‌ನಿಂದ ಹೀಗೆ ಸಂಗ್ರಹವಾಗುವ ಹಣವನ್ನು ಲೆಕ್ಕ ಹಾಕಿದರೆ, ಒಂದು ಟ್ರಿಪ್‌ನಲ್ಲಿ ಸಾವಿರಾರು ರೂಪಾಯಿಗಳ ಅಕ್ರಮ ಲಾಭವಾಗುತ್ತದೆ. ಇದು "ಬಡ ವ್ಯಾಪಾರಿಗಳು" ಎಂಬ ಮುಖವಾಡದ ಹಿಂದೆ ನಡೆಯುತ್ತಿರುವ ವ್ಯವಸ್ಥಿತ ದೋಚುವಿಕೆ.
ಹಾಗೆಯೇ 80 ರೂ. ಮೌಲ್ಯದ ಊಟಕ್ಕೆ 180 ರೂಗಳನ್ನು ಪಾವತಿಸಲು ಒತ್ತಾಯಿಸಲ್ಪಡುತ್ತಾರೆ. ಇದು ಕೇವಲ 'ಅತಿಯಾದ ಶುಲ್ಕ'ವಲ್ಲ. ಇದು ತಿನ್ನುವುದು ಅಥವಾ ಹಸಿವಿನಿಂದ ಮಲಗುವುದರ ನಡುವಿನ ವ್ಯತ್ಯಾಸ. ಮುಂದಿನ ಬಾರಿ ನೀವು ಇದನ್ನು ನೋಡಿದಾಗ, ಅದನ್ನು ನಿರ್ಲಕ್ಷಿಸಬೇಡಿ. ಆ ಹೆಚ್ಚುವರಿ ಹಣದ ಹಿಂದೆ ಯಾರೊಬ್ಬರ ಹಸಿವು ಅಡಗಿರುತ್ತದೆ ಎಂದು ಬರೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) X ನಲ್ಲಿ ನಡೆದ ಘಟನೆಗೆ ಕ್ಷಮೆಯಾಚಿಸಿತು, ಸೇವಾ ಸಿಬ್ಬಂದಿ ಮತ್ತು ಪ್ಯಾಂಟ್ರಿ ಕಾರ್ ವ್ಯವಸ್ಥಾಪಕರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿಕೆ ನೀಡಿತು.
ಆದಾಗ್ಯೂ, ಸೇವಾ ಪೂರೈಕೆದಾರರಿಗೆ ಭಾರಿ ದಂಡ ವಿಧಿಸುವುದರ ಜೊತೆಗೆ ಒಪ್ಪಂದವನ್ನು ಮುಕ್ತಾಯಗೊಳಿಸಲು ಶೋಕಾಸ್ ನೋಟಿಸ್ ನೀಡಲಾಗಿದೆ" ಎಂದು ಐಆರ್‌ಸಿಟಿಸಿ ಅಧೀಕೃತವಾಗಿ ತಿಳಿಸಿದೆ (ಏಜೆನ್ಸೀಸ್).