ಘಟನೆಯ ಸ್ಥಳ 
ದೇಶ

ಮುಂಬೈನಲ್ಲಿ 22 ಅಡಿ ಎತ್ತರದ ಗಣೇಶ ವಿಗ್ರಹ ಬಿದ್ದು ದುರಂತ: ಇಬ್ಬರು ಸಾ*, ಐವರಿಗೆ ಗಂಭೀರ ಗಾಯ | Ganesha idol

ಮುಂಬೈ: ಮಹಾರಾಷ್ಟ್ರದ ದಕ್ಷಿಣ ಮುಂಬೈನಲ್ಲಿ ನಿನ್ನೆ(ಆ. 22) ರಾತ್ರಿ ಭುಲೇಶ್ವರಚ ರಾಜ ಆಗಮನ ಸಂಭ್ರಮದ ವೇಳೆ ದುರಂತ ಸಂಭವಿಸಿದ್ದು, 22 ಅಡಿ ಎತ್ತರದ ಗಣೇಶ ವಿಗ್ರಹ(Ganesha idol) ಬಿದ್ದು, ಇಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಭುಲೇಶ್ವರದ ಬಲರಾಮ್ ಮರ್ಚೆಂಟ್ ರಸ್ತೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಗ್ರಹದ ಚೌಕಟ್ಟಿನಲ್ಲಿ ಕೆಲವು ಸಡಿಲವಾದ ನಟ್‌ಗಳು ಮತ್ತು ಬೋಲ್ಟ್‌ಗಳಿಂದಾಗಿ ವಿಗ್ರಹವು ಬಿದ್ದಿದೆ ಎನ್ನಲಾಗಿದೆ.
ತಕ್ಷಣ ಮುಂಬೈ ಪೊಲೀಸರು, ಅಗ್ನಿಶಾಮಕ ದಳ, ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಮೃತರನ್ನು ಸಂಕೇತ್ ನೆವ್ಶೆ(33) ಮತ್ತು ಬ್ರಿಜೇಶ್ ಹೇಮಂತ್ ಜೋಶಿ(30) ಎಂದು ಗುರುತಿಸಲಾಗಿದೆ. ವೈಭವ್ ಘೇನಂದ್, ಪವನ್ ಚೌರಾಸಿಯಾ ಜಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಲಾವಣ್ಯ ಗನೇರ್, ದಿವ್ಯಾ ಗನೇರ್ ಹಾಗೂ ಕುನಾಲ್ ಕಾಶಿದ್ ಎಂಬ ಗಾಯಾಳುಗಳು ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳದಲ್ಲಿ 108 ಆಂಬ್ಯುಲೆನ್ಸ್ ಸೇವೆ ಮತ್ತು ನಾಗರಿಕ ವಾರ್ಡ್ ಸಿಬ್ಬಂದಿಯನ್ನು ಘಟನಾ ಸ್ಥಳದಲ್ಲಿ ತಕ್ಷಣವೇ ನಿಯೋಜಿಸಲಾಗಿದೆ (ಏಜೆನ್ಸೀಸ್).