ಸ್ಕಿನ್‌ಕೇರ್ ಸೀಕ್ರೆಟ್‌ಗಳನ್ನು ಹಂಚಿಕೊಂಡ ನಟಿ ಕಿಯಾರಾ ಅಡ್ವಾಣಿ
- ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಗ್ಲಾಮರಸ್ ಲುಕ್
- ಹೊಳಪಿನ ತ್ವಚೆಗಾಗಿ ತಮ್ಮದೇ ಸಿಂಪಲ್ ಸ್ಕಿನ್‌ಕೇರ್ ರೂಟಿನ್
- ತಮ್ಮ ಸ್ಕಿನ್‌ಕೇರ್ ಸೀಕ್ರೆಟ್‌ಗಳನ್ನು ಹಂಚಿಕೊಂಡ ಕಿಯಾರಾ
Kiara Advani Skin Care: ನಟಿ ಕಿಯಾರಾ ಅಡ್ವಾಣಿ ಸದ್ಯ ಟಾಕ್ಸಿಕ್ ಸಿನಿಮಾದಲ್ಲಿನ ತಮ್ಮ ಗ್ಲಾಮರಸ್ ಲುಕ್‌ನಿಂದ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕಿಯಾರಾ ಅವರ ಗ್ಲೋಯಿಂಗ್ ಸ್ಕಿನ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಹಾಗಾದ್ರೆ ಕಿಯಾರಾ ಅವರ ಈ ಫ್ಲಾಲೆಸ್ ಸ್ಕಿನ್ ಸೀಕ್ರೆಟ್ ಏನು? ಈ ಬಗ್ಗೆ ನಟಿ ಈ ಹಿಂದೆಯೇ ತಮ್ಮ ಸ್ಕಿನ್‌ಕೇರ್ ರೂಟಿನ್ ಬಗ್ಗೆ ಹೇಳಿಕೊಂಡಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಕಿಯಾರಾ ತಮ್ಮ ಬ್ಯೂಟಿ ಸೀಕ್ರೆಟ್‌ಗಳ ಬಗ್ಗೆ ಮಾತಾಡಿದ್ದರು. ಉತ್ತಮ ಸ್ಕಿನ್ ಅಂದ್ರೆ ಕೇವಲ ಜೀನ್ಸ್‌ನಿಂದ ಬರೋದಿಲ್ಲ, ನಾವು ಪ್ರತಿದಿನ ಏನು ತಿನ್ನುತ್ತೇವೆ ಮತ್ತು ಸ್ಕಿನ್ ಅನ್ನು ಹೇಗೆ ಕೇರ್ ಮಾಡ್ತೀವಿ ಅನ್ನೋದೂ ಮುಖ್ಯ ಎಂದಿದ್ದರು. ತಮ್ಮ ದಿನವನ್ನು ಒಂದು ಲೋಟ ನೀರು ಕುಡಿಯುವುದರಿಂದ ಆರಂಭಿಸುವುದಾಗಿ ಕಿಯಾರಾ ಹೇಳಿದ್ದರು.
ತೇವಾಂಶ ಕಾಪಾಡಿಕೊಳ್ಳುವುದು ಮುಖ್ಯ
ಕಿಯಾರಾ ತಮ್ಮ ಸ್ಕಿನ್‌ಕೇರ್‌ನಲ್ಲಿ ತುಂಬಾ ಬೇಸಿಕ್ ಆದ್ರೆ ಎಫೆಕ್ಟಿವ್ ರೂಟಿನ್ ಫಾಲೋ ಮಾಡುತ್ತಾರೆ. ಜೆಂಟಲ್ ಜೆಲ್ ಆಧಾರಿತ ಫೇಸ್‌ವಾಶ್‌ನಿಂದ ಮುಖ ತೊಳೆದು, ಬಳಿಕ ಅಗತ್ಯಕ್ಕೆ ತಕ್ಕಂತೆ ಮಾಯಿಶ್ಚರೈಸರ್ ಅಥವಾ ಸೀರಮ್ ಬಳಸುತ್ತಾರೆ. ಹೊರಗಡೆ ಹೆಚ್ಚು ಸಮಯ ಕಳೆಯಬೇಕಾದಾಗ ಸನ್‌ಸ್ಕ್ರೀನ್ ಹಾಕೋದನ್ನ ಮಾತ್ರ ಮಿಸ್ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಮೇಕಪ್ ತೆಗೆದು ಮಲಗಿ
ಮೇಕಪ್ ಹಾಕಿಕೊಂಡು ಮಲಗುವುದಿಲ್ಲ. ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆದು, ನೈಟ್ ಕ್ರೀಮ್ ಮತ್ತು ಸೀರಮ್ ಬಳಸುತ್ತಾರೆ. ರಾತ್ರಿ ವೇಳೆ ತ್ವಚೆ ತನ್ನನ್ನು ತಾನೇ ರಿಪೇರ್ ಮಾಡಿಕೊಳ್ಳುವುದರಿಂದ ನೈಟ್‌ಟೈಮ್ ಸ್ಕಿನ್ ಕೇರ್ ಕೂಡ ತುಂಬಾ ಮುಖ್ಯ ಎಂದು ಕಿಯಾರಾ ಹೇಳಿದ್ದಾರೆ.
ಅಡುಗೆ ಮನೆಯಲ್ಲೇ ಬ್ಯೂಟಿ ಸೀಕ್ರೆಟ್
ಕಿಯಾರಾಗೆ ನ್ಯಾಚುರಲ್ ಫೇಸ್ ಮತ್ತು ಹೇರ್ ಪ್ಯಾಕ್‌ಗಳೆಂದರೆ ತುಂಬಾ ಇಷ್ಟವಂತೆ. ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಫೇಸ್ ಪ್ಯಾಕ್ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಈ ರೆಸಿಪಿಗಳನ್ನು ತಮ್ಮ ಮತ್ತು ಅಜ್ಜಿಯಿಂದ ಕಲಿತಿರುವುದಾಗಿಯೂ ಕಿಯಾರಾ ಹಂಚಿಕಂಡಿದ್ದಾರೆ.
ಸನ್‌ಸ್ಕ್ರೀನ್ ಮರೆಯಬೇಡಿ
ಮಳೆಗಾಲದಲ್ಲೂ ಸನ್‌ಸ್ಕ್ರೀನ್ ಬಳಸುವುದನ್ನು ಬಿಡಬಾರದು. ಬಿಸಿಲು ಜಾಸ್ತಿ ಇರದಿದ್ದರೆ ಸನ್‌ಸ್ಕ್ರೀನ್ ಬೇಡ ಎನ್ನುವುದು ತಪ್ಪು ಕಲ್ಪನೆ ಎಂದು ಕಿಯಾರಾ ತಿಳಿಸಿದ್ದಾರೆ. ಜೊತೆಗೆ ಪ್ರತಿದಿನ ಚರ್ಮಕ್ಕೆ ತೇವಾಂಶ ನೀಡುವುದು ಮತ್ತು ಸ್ಕಿನ್‌ಕೇರ್ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಖ್ಯ ಎಂದಿದ್ದಾರೆ.
ಬ್ಯೂಟಿ ಅಂದ್ರೆ ಆರೋಗ್ಯಯುತ ತ್ವಚೆ
ತಮಗೆ ಬ್ಯೂಟಿ ಅಂದ್ರೆ ಆರೋಗ್ಯಕರ ಹಾಗೂ ಹೊಳೆಯುವ ತ್ವಚೆ ಎಂದು ಕಿಯಾರಾ ಹೇಳಿದ್ದಾರೆ. ಕ್ಯಾಮೆರಾ ಮುಂದೆ ಇಲ್ಲದಾಗಲೂ ಕಡಿಮೆ ಮೇಕಪ್‌ನೊಂದಿಗೆ ನ್ಯಾಚುರಲ್ ಲುಕ್ ಇಷ್ಟಪಡುತ್ತೇನೆ ಎಂದಿದ್ದಾರೆ. ಒಳ್ಳೆಯ ಸ್ಕಿನ್‌ಕೇರ್ ರೂಟಿನ್, ಸರಿಯಾದ ಆಹಾರ, ಸಾಕಷ್ಟು ದ್ರವ ಸೇವನೆ ಮತ್ತು ಬ್ಯಾಲೆನ್ಸ್ಡ್ ಲೈಫ್‌ಸ್ಟೈಲ್—ಇವೆಲ್ಲದರ ಕಾಂಬಿನೇಷನ್‌ನೇ ತಮ್ಮ ಬ್ಯೂಟಿ ಸೀಕ್ರೆಟ್ ಎಂದು ಕಿಯಾರಾ ಹೇಳಿದ್ದಾರೆ,(ಏಜೆನ್ಸೀಸ್).