Goa Accident (ಸಾಂದರ್ಭಿಕ ಚಿತ್ರ) 
ದೇಶ

ಮೋಜು ಮಾಡಲು ಹೋದವರಿಗೆ ಎದುರಾಯ್ತು ಮೃತ್ಯು ಭಯ: ಗೋವಾ ಕಡಲತೀರದಲ್ಲಿ ನಡೆದ ಈ ಘಟನೆ ಎಲ್ಲರಿಗೂ ಎಚ್ಚರಿಕೆ ಗಂಟೆ! Goa Accident

ಪಣಜಿ: ಪ್ರವಾಸಿಗರ ಸ್ವರ್ಗ ಎಂದೇ ಕರಿಸಿಕೊಳ್ಳುವ ಗೋವಾ ಇದೀಗ ಮೋಜು ಮಸ್ತಿಯ ತಾಣವಾಗಿ ಉಳಿದಿಲ್ಲ. ಬದಲಾಗಿ ಸಾಹಸ ಕ್ರೀಡೆಗಳ ಹೆಸರಿನಲ್ಲಿ ಪ್ರವಾಸಿಗರೊಂದಿಗೆ ಚೆಲ್ಲಾಟವಾಡುವ ತಾಣವಾಗುತ್ತಿದೆ ಎಂಬ ಅನುಮಾನ ಮೂಡಿದೆ. ಭಾನುವಾರ (Goa Accident) ಗೋವಾದ ಕಡಲ ತೀರದಲ್ಲಿ ನಡೆದ ಜಲಕ್ರೀಡೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪ್ರವಾಸಿಗರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಘಟನೆಯ ವಿವರ

ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಬಾಗಾ ಬೀಚ್‌ನಲ್ಲಿ ಒಬ್ಬ ವ್ಯಕ್ತಿ ಪ್ಯಾರಾಸೈಲಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಗಾಳಿಯ ರಭಸಕ್ಕೆ ಹಗ್ಗವು ತುಂಡಾಗಿ ಪ್ರವಾಸಿಗರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆ ಆತನ ಜೊತೆಗಿದ್ದ ಮಹಿಳೆಯು ದೋಣಿಯಲ್ಲಿ ಕಿರುಚುತ್ತಾ ಭಯಭೀತರಾಗಿದ್ದು, ಸಿಬ್ಬಂದಿಗೆ ಸಹಾಯ ಮಾಡಲು ಕೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ, ಪ್ರವಾಸೋದ್ಯಮ ಇಲಾಖೆಯು ಈ ಘಟನೆ ಕುರಿತು ಸಂಪೂರ್ಣ ವರದಿಯನ್ನು ಕೋರಿದೆ. ಆದಾಗ್ಯೂ, ನಿರ್ಲಕ್ಷ್ಯ ಕಂಡುಬಂದಲ್ಲಿ ಪರವಾನಗಿ ರದ್ದುಪಡಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದರಾಗಿ ಎಚ್ಚರಿಕೆ ನೀಡಿದೆ.
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ, ಹಲವಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಒಬ್ಬ ಬಳಕೆದಾರರು ಹಗ್ಗದ ಗುಣಮಟ್ಟ ಕಳಪೆಯಾಗಿದೆ. ಉಪಕರಣಗಳನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಇಂತಹ ಘಟನೆಗಳು ಗೋವಾದಲ್ಲಿ ಹಲವು ಬಾರಿ ನಡೆದಿದೆ. ಸಲಕರಣೆಗಳ ಗುಣಮಟ್ಟ ಮತ್ತು ನಿರ್ವಹಣೆಯನ್ನು ಪರಿಶೀಲಿಸಲು ಯಾವುದೇ ಇಲಾಖೆಗಳು ಇಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಭಾರತದಲ್ಲಿ ಹಿಂದಿನ ಘಟನೆಗಳು

2025 ರಲ್ಲಿ ಸಾಹಸ ಕ್ರೀಡೆಗಳನ್ನು ಒಳಗೊಂಡ ಹಲವಾರು ಅಪಘಾತಗಳು ಸಂಭವಿಸಿದ್ದು, ಹಲವಾರು ಸಾವುಗಳು ಮತ್ತು ಗಾಯಗಳಿಗೆ ಕಾರಣವಾಯಿತು.
ಕಳೆದ ವರ್ಷ ಜುಲೈನಲ್ಲಿ, ಹಿಮಾಚಲ ಪ್ರದೇಶದ ಇಂದ್ರುನಾಗ್‌ನಲ್ಲಿ ಟೇಕ್-ಆಫ್ ಸ್ಥಳದಲ್ಲಿ ಪ್ಯಾರಾಗ್ಲೈಡರ್ ಅಪಘಾತಕ್ಕೀಡಾಗಿ ಗುಜರಾತ್‌ನ ಅಹಮದಾಬಾದ್‌ನ 25 ವರ್ಷದ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದರು (ಏಜೆನ್ಸೀಸ್​).