ಅಗ್ರ 10 ಯೂಟ್ಯೂಬರ್‌ಗಳ ಪಟ್ಟಿ
- ವಿಶ್ವದ ಟಾಪ್ 10 ಶ್ರೀಮಂತ ಯೂಟ್ಯೂಬರ್‌ಗಳ ಪಟ್ಟಿ
- 7 ಶ್ರೀಮಂತ ಯೂಟ್ಯೂಬರ್‌ಗಳು ಒಂದೇ ದೇಶದವರು
- ಭಾರತೀಯ ಕಂಟೆಂಟ್ ಕ್ರಿಯೆಟರ್ಸ್ಗಳಲ್ಲಿ ಯಾರೊಬ್ಬರಿಗೂ ಪಟ್ಟಿಯಲ್ಲಿ ಇಲ್ಲ ಸ್ಥಾನ
- ಅಗ್ರಸ್ಥಾನದಲ್ಲಿ ಅಮೆರಿಕದ ಮಿಸ್ಟರ್ ಬೀಸ್ಟ್
ಅಮೆರಿಕ: ಯೂಟ್ಯೂಬ್ ವಿಶ್ವದ ಅತಿದೊಡ್ಡ ಆನ್ಲೈನ್ ವಿಡಿಯೋ ಪ್ಲಾಟ್‌ಫಾರ್ಮ್ ಎಂಬುದರಲ್ಲಿ ಅನುಮಾನ ಬೇಡ. ಇದು ಜಾಗತಿಕವಾಗಿ ಅತ್ಯಂತ ಜನಪ್ರಿಯ ವಿಡಿಯೋ ಕಂಟೆಂಟ್ ಸಿಗುವ ಒಂದು ಮೂಲವಾಗಿದೆ. ಈ ಪ್ಲಾಟ್‌ಫಾರ್ಮ್, ವಿಡಿಯೋಗಳನ್ನು ಅಪ್‌ಲೋಡ್ ಮಾಡಲು, ವೀಕ್ಷಿಸಲು ಮತ್ತು ಇನ್ನೊಬ್ಬರಿಗೆ ಶೇರ್ ಮಾಡಲು ಅನುಮತಿಸುತ್ತದೆ. ಅತಿ ಹೆಚ್ಚು ವೀಕ್ಷಣೆಗೆ ಹಾಗೂ ಚರ್ಚೆಗೆ ಗ್ರಾಸವಾಗುವ ವಿಡಿಯೋಗಳು ಸಿಗುವುದು ಇದೇ ಯೂಟ್ಯೂಬ್ನಲ್ಲಿ.
ಪ್ರಸ್ತುತ, ಶತಕೋಟಿ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್, ಮನರಂಜನೆ, ಶಿಕ್ಷಣ, ಟೆಕ್ನಾಲಜಿ, ಉತ್ತಮ ಮಾಹಿತಿಯಿಂದ ಹಿಡಿದು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಜನರಿಗೆ ವಿಡಿಯೋ ಮೂಲಕ ತಲುಪಿಸುತ್ತದೆ. ಆದಾಗ್ಯೂ, ಬಹುತೇಕ ಮಂದಿ ಯೂಟ್ಯೂಬ್ ಅನ್ನು ಮನರಂಜನೆಗಾಗಿಯೇ ಹೆಚ್ಚು ಬಳಸುತ್ತಾರೆ. ಈ ಪ್ಲಾಟ್ಫಾರ್ಮ್ಗಳ ಸದುಪಯೋಗವನ್ನು ಪಡೆದುಕೊಳ್ಳುವ ಅದೆಷ್ಟೋ ವಿಡಿಯೋ ಕ್ರಿಯೇಟರ್ಸ್ಗಳು, ಹೆಚ್ಚೆಚ್ಚು ಕ್ರಿಯೇಟಿವ್ ಕಂಟೆಂಟ್ಗಳನ್ನು ಮಾಡಿ, ತಮ್ಮ ಖಾತೆಗಳ ಮೂಲಕ ಹರಿಬಿಡುತ್ತಾರೆ.
ಜನರಿಂದ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಈ ವಿಡಿಯೋಗಳು, ಆಯಾ ಯೂಟ್ಯೂಬರ್ಗಳಿಗೆ ನಿರೀಕ್ಷೆಗೆ ತಕ್ಕಂತ, ಉತ್ತಮ ಆದಾಯವನ್ನೇ ತಂದುಕೊಡುತ್ತದೆ. ಕೆಲವರು ಕೇವಲ ಹಣ ಗಳಿಸಿದರೆ, ಇನ್ನೂ ಕೆಲವರು ಒಳ್ಳೆಯ ಹೆಸರು ಹಾಗೂ ಹಣ ಎರಡನ್ನೂ ಸಂಪಾದಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಯೂಟ್ಯೂಬ್ ಮೂಲಕ ಹಣ ಗಳಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದಾಗ್ಯೂ, ಈ ಬಾರಿಯ ವಿಶ್ವದ ಟಾಪ್ 10 ಶ್ರೀಮಂತ ಯೂಟ್ಯೂಬರ್‌ಗಳ ಪಟ್ಟಿಯಲ್ಲಿ ಒಬ್ಬ ಭಾರತೀಯ ಇಲ್ಲ ಎಂಬುದೇ ಸದ್ಯ ಅಚ್ಚರಿಯ ಸಂಗತಿ.
ವಿಶ್ವದ ಅತ್ಯಂತ ಶ್ರೀಮಂತ ಯೂಟ್ಯೂಬರ್‌ಗಳ ಪಟ್ಟಿಯಲ್ಲಿ ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ಗಳೇ ಮುಂಚೂಣಿಯಲ್ಲಿದ್ದಾರೆ. ವಿಶ್ವದ 10 ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಏಳು ಮಂದಿ ಯುಎಸ್‌ನಿಂದ ಬಂದವರೇ ಆಗಿದ್ದಾರೆ. ಮಿಸ್ಟರ್ ಬೀಸ್ಟ್ 1 ಡಾಲರ್ ಬಿಲಿಯನ್ ಆದಾಯ ಹೊಂದುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ತದನಂತರ ರಷ್ಯಾ, ಬ್ರಿಟನ್ ಮತ್ತು ಸ್ವೀಡನ್‌ನಲ್ಲಿ ತಲಾ ಒಬ್ಬ ಯೂಟ್ಯೂಬರ್ಗಳಿದ್ದಾರೆ.
ರಿಚೆಸ್ಟ್‌ಟ್ಯೂಬರ್ಸ್ ಪ್ರಕಾರ, 458 ಮಿಲಿಯನ್ ಸಬ್ಸ್ಕ್ರೈಬರ್ಸ್ ಹೊಂದಿರುವ ಮಿಸ್ಟರ್ ಬೀಸ್ಟ್, 1 ಬಿಲಿಯನ್ ಡಾಲರ್ ಆದಾಯವನ್ನು ಹೊಂದುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಎಂಬ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಮೆರಿಕದ ಜೆಫ್ರಿ ಸ್ಟಾರ್ 200 ಮಿಲಿಯನ್ ಡಾಲರ್, ಲೋಗನ್ ಪಾಲ್ 150 ಮಿಲಿಯನ್ ಡಾಲರ್ ಹೊಂದುವ ಮೂಲಕ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಟಾಪ್ 10 ಶ್ರೀಮಂತ ಯೂಟ್ಯೂಬರ್‌ಗಳು (2025ರ ಅಂಕಿಅಂಶಗಳ ಪ್ರಕಾರ)
1. ಮಿಸ್ಟರ್‌ಬೀಸ್ಟ್: 1 ಬಿಲಿಯನ್ ಡಾಲರ್
2. ಜೆಫ್ರಿ ಸ್ಟಾರ್: 200 ಮಿಲಿಯನ್ ಡಾಲರ್
3. ಲೋಗನ್ ಪಾಲ್: 150 ಮಿಲಿಯನ್ ಡಾಲರ್
4. ಲೈಕ್ ನಾಸ್ತ್ಯ: 125 ಮಿಲಿಯನ್ ಡಾಲರ್
5. ರಿಯಾನ್ಸ್ ವರ್ಲ್ಡ್: 110 ಮಿಲಿಯನ್ ಡಾಲರ್
6. ಕೆಎಸ್ಐ: 100 ಮಿಲಿಯನ್ ಡಾಲರ್
7. ಡ್ಯೂಡ್ ಪರ್ಫೆಕ್ಟ್: 100 ಮಿಲಿಯನ್ ಡಾಲರ್
8. ಜೇಕ್ ಪಾಲ್: 100 ಮಿಲಿಯನ್ ಡಾಲರ್
9. ನಿಂಜಾ: 50 ಮಿಲಿಯನ್ ಡಾಲರ್
10. ಪ್ಯೂಡೈಪೈ: 45 ಮಿಲಿಯನ್ ಡಾಲರ್