Mahua Moitra (ಚಿತ್ರ X) 
ದೇಶ

ಇಂಡಿಗೋ ವಿಮಾನದಲ್ಲಿ ಮಹುವಾ ಮೊಯಿತ್ರಾಗೆ 'ಚೋರ್' ಘೋಷಣೆಗಳ ಕಿರುಕುಳ; ಕಿಡಿಗೇಡಿಗಳ ವಿರುದ್ಧ ಸಂಸದೆಯ ಆಕ್ರೋಶ... Mahua Moitra

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ (Mahua Moitra) ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪುರುಷರ ಗುಂಪಿನಿಂದ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿ, ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ  (DGCA) ಗುರುವಾರ (ಮೇ.07) ಅಧಿಕೃತವಾಗಿ ದೂರನ್ನು ದಾಖಲಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಮಹುವಾ ಮೊಯಿತ್ರಾ ಸೂಚಿಸುವಂತೆ ಈ ಘಟನೆಯು ಇಂಡಿಗೋ ವಿಮಾನ 6E 719 ರಲ್ಲಿ ಈ ಘಟನೆ ನಡೆದಿದೆ. ವಿಮಾನವು ದೆಹಲಿಯಲ್ಲಿ ಇಳಿದ ನಂತರ, ಬಾಗಿಲು ತೆರೆಯುವ ಮೊದಲೇ ಪುರುಷರ ಗುಂಪೊಂದು ತನ್ನ ಮೇಲೆ ಘೋಷಣೆಗಳನ್ನು ಕೂಗುತ್ತಾ ಪೋನ್​ಗಳಲ್ಲಿ ರೆಕಾರ್ಡ್​ ಮಾಡಿಕೊಳ್ಳಲು ಆರಂಭಿಸಿದರು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ವಿಮಾನದಲ್ಲಿ ಕೂಗಿದ ಘೋಷಣೆಗಳು ಏನು?

ಕಳ್ಳರು, ಕಳ್ಳರು, ಟಿಎಂಸಿ ಒಬ್ಬ ಕಳ್ಳ, ಚಿಕ್ಕಮ್ಮ ಒಬ್ಬಳು ಕಳ್ಳಿ, ಸೋದರಳಿಯ ಒಬ್ಬ ಕಳ್ಳ ಎಂದು ಪುರುಷರು ಕೂಗಿದರು. ಇದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡಿರುವ ಘೋಷಣೆಗಳಾಗಿವೆ. 
ಈ ಘಟನೆಯ ಸಮಯದಲ್ಲಿ ಸಂಸದೆ ಜೈ ಶ್ರೀರಾಮ್​ ಘೋಷಣೆಯನ್ನು ಸಹ ಎದುರಿಸಿದ್ದು, ಈ ಘಟನೆಯನ್ನು ಕಿರುಕುಳ ಎಂದು ಬಣ್ಣಿಸಿದ್ದಾರೆ. ಆದಾಗ್ಯೂ,ಇದು 'ನಾಗರಿಕ ಕೋಪವಲ್ಲ. ಬದಲಿಗೆ ಇದು ಕಿರುಕುಳ ವಿಮಾನದಲ್ಲಿ ನನ್ನ ಸುರಕ್ಷತೆಯ ಬಗ್ಗೆ ಉಲ್ಲಂಘಿಸುತ್ತದೆ ಎಂದು ಹೇಳಿದರು.
ಮೊಯಿತ್ರಾ ದೂರು ಸಲ್ಲಿಸಿದರೆ ಇಂಡಿಗೊ ತನಿಖೆ ನಡೆಸಲಿದೆ.
ಮೂಲಗಳ ಪ್ರಕಾರ, ಮೊಯಿತ್ರಾ ಔಪಚಾರಿಕ ದೂರು ದಾಖಲಿಸಿದ ನಂತರ ಇಂಡಿಗೋ ಈ ವಿಷಯವನ್ನು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 
ವರದಿಗಳಿಗೆ ವ್ಯತಿರಿಕ್ತವಾಗಿ, ಘೋಷಣೆಗಳು ಕೇಳಿಬರುತ್ತಿದ್ದಂತೆಯೇ ವಿಮಾನಯಾನ ಸಿಬ್ಬಂದಿ ಪ್ರವೇಶಿಸಿ ಕ್ರಮ ತೆಗೆದುಕೊಂಡ ನಂತರ ಘೋಷಣೆ ಕೂಗುವುದನ್ನು ನಿಲ್ಲಿಸಿತು ಎಂದು ಮೂಲಗಳು ತಿಳಿಸಿವೆ. 
ಟಿಎಂಸಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದು ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಟಿಎಂಸಿ ಕೇವಲ 80 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿತು.
ಚುನಾವಣಾ ಫಲಿತಾಂಶ ಬಂದ ನಂತರ  ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದು, ಈ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಬಹುದು ಎಂದು ಅಂದಾಜಿಸಲಾಗಿದೆ (ಏಜೆನ್ಸೀಸ್​).