West Bengal Election  
ದೇಶ

ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿದ ಬಿಜೆಪಿ; '10 ಜನ್ಮ ಎದ್ದು ಬಂದ್ರು ಫಾಲ್ಟಾದಲ್ಲಿ ಗೆಲ್ಲಲ್ಲ' ಎಂದಿದ್ದ ಅಭಿಷೇಕ್​​ ಬ್ಯಾನರ್ಜಿಗೆ ಮುಖಭಂಗ?.. West Bengal Election

ಪ್ರಮುಖ ಮುಖ್ಯಾಂಶಗಳು

  • ಅಭಿಷೇಕ್​ ಬ್ಯಾನರ್ಜಿ ಸವಾಲು ಸ್ವೀಕರಿಸೋಕು ಮುನ್ನವೇ ಬಂಗಾಳವನ್ನು ತೆಕ್ಕೆಗೆ ಪಡೆದುಕೊಂಡ ಬಿಜೆಪಿ
  • ಪಶ್ಚಿಮ ಬಂಗಾಳದಲ್ಲಿ 148 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ
  • ದಮ್ಮು, ತಾಕತ್ತು ಇದ್ದರೆ ಫಾಲ್ಟಾದಲ್ಲಿ ಸ್ಪರ್ಧಿಸಿ ಗೆಲ್ಲಿ ಎಂದಿದ್ದ ಅಭಿಷೇಕ್​ ಬ್ಯಾನರ್ಜಿಗೆ ಪರೋಕ್ಷವಾಗಿ ಟಾಂಗ್
ಕೋಲ್ಕತ್ತಾ: ದಮ್ಮು, ತಾಕತ್ತು ಇದ್ರೆ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ(West Bengal Election ) ನಿಂತು ಸ್ಪರ್ಧಿಸಿ ಗೆಲ್ಲಿ, ನಿಮ್ಮ ಯಾವುದೇ ತಂತ್ರವು ಡೈಮಂಡ್​ ಹಾರ್ಬರ್​ ಮಾಡೆಲ್​ಗೆ ಹಾನಿ ಮಾಡೋದಿಲ್ಲ ಎಂದು ಟಿಎಂಸಿ ನಾಯಕ ಅಭಿಷೇಕ್​ ಬ್ಯಾನರ್ಜಿ ಅವರು ಇತ್ತೀಚೆಗೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದರು. ಆದರೆ, ವಾಸ್ತವ ಏನೆಂದರೆ, ಸವಾಲು ಸ್ವೀಕರಿಸಿದ್ದೇವೆ ಎನ್ನುವ ಮುನ್ನವೇ ಬಿಜೆಪಿ ಇಡೀ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು (ಟಿಎಂಸಿ)ಯನ್ನು ಗುಡಿಸಿಗುಂಡಾಂತರ ಮಾಡಿ ಬಿರುಗಾಳಿ ಎಬ್ಬಿಸಿದೆ.
ಹೌದು, ಏಪ್ರಿಲ್ 23 ಮತ್ತು​ 29ರಂದು ಎರಡು ಹಂತದಲ್ಲಿ ಪಶ್ಚಿಮ ಬಂಗಾಳದ 294 ಸದಸ್ಯ ಬಲದ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇಂದು ಮೇ.4 ರಂದು ಮತ ಎಣಿಕೆ ಕಾರ್ಯ ಕೊನೆಯ ಹಂತದಲ್ಲಿದೆ. ಈಗಾಗಲೇ ಬಿಜೆಪಿಯು ಮ್ಯಾಜಿಕ್​ ನಂಬರ್​ ದಾಟಿ 148 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ತೃಣಮೂಲ ಕಾಂಗ್ರೆಸ್ 97 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ದೀದಿ ಕೋಟೆ ಬೇಧಿಸಿ ಮುನ್ನುಗ್ಗಿದ ಕೇಸರಿ ಪಡೆ
34 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದ ಎಡಪಂಥೀಯ ಪಕ್ಷವನ್ನು ಸೋಲಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಆ ಪಕ್ಷವನ್ನು ಸೋಲಿಸಿ ತೃಣಮೂಲ ಕಾಂಗ್ರೆಸ್​ ಕಟ್ಟಿದ್ದ ಮಮತಾ ಬ್ಯಾನರ್ಜಿ ಅವರು 2011 ರಿಂದ ಪಶ್ಚಿಮ ಬಂಗಾಳದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.

ಅಭಿಷೇಕ್​ ಬ್ಯಾನರ್ಜಿ ಹೇಳಿದ್ದೇನು?

ಫಾಲ್ಟಾ ವಿಧಾನಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಚುನಾವಣಾ ಆಯೋಗವು ಮೇ.21ರಂದು 285 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಆದೇಶಿಸಲಾಗಿತ್ತು. ಇದನ್ನು ಉಲ್ಲೇಖಿಸಿ ಬಿಜೆಪಿ ನಾಯಕ ಅಮಿತ್​ ಮಾಳವೀಯ ಅವರು, ಡೈಮಂಡ್​ ಹಾರ್ಬರ್​ ಮಾಡೆಲ್​ ಕುಸಿಯುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ಅಮಿತ್​ ಮಾಳವೀಯಗೆ ಗುನ್ನ ಕೊಟ್ಟಿದ್ದ ಅಭಿಷೇಕ್​

ಅವರ ಈ ಟ್ವೀಟ್​ಗೆ ಸಿಟ್ಟಾದ ಟಿಎಂಸಿ ನಾಯಕ ಅಭಿಷೇಕ್​ ಬ್ಯಾನರ್ಜಿ ಅವರು ಡೈಮಂಡ್​ ಹಾರ್ಬರ್​ ಮಾಡೆಲ್​ಗೆ ನಿಮ್ಮ ಯಾವ ತಂತ್ರದಿಂದಲೂ ಸಣ್ಣ ಪೆಟ್ಟಾಗೋದಿಲ್ಲ. ನಾನು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕುತ್ತಿದ್ದೇನೆ. ನಿಮಗೆ ಧೈರ್ಯವಿದ್ದರೆ ಫಾಲ್ಟಾದಿಂದ ಸ್ಪರ್ಧಿಸಿ ಗೆದ್ದು ತೋರಿಸಿ, ನಿಮ್ಮಲ್ಲಿರುವ ಪ್ರಬಲ ವ್ಯಕ್ತಿಯನ್ನು ಕರೆತಂದು ಚುನಾವಣೆಗೆ ನಿಲ್ಲಿಸಿ. ಹತ್ತು ಜನ್ಮ ಎದ್ದು ಬಂದರು ನಿಮಗೆ ಫಾಲ್ಟಾದಲ್ಲಿ ಜಯಭೇರಿ ಸಾಧಿಸೋಕೆ ಸಾಧ್ಯವಾಗೋದಿಲ್ಲ ಎಂದು ಹೇಳಿ ಎಕ್ಸ್​ನಲ್ಲಿ ಬರೆದುಕೊಂಡಿದ್ದರು.

ಫಾಲ್ಟಾದಲ್ಲಿ ಮರು ಮತದಾನ; ಟಿಎಂಸಿಗೆ ಸಿಗಲಿದ್ಯಾ ಗೆಲುವು?

ಅಭಿಷೇಕ್​ ಬ್ಯಾನರ್ಜಿ ಅವರ ಸವಾಲಿನ ನಂತರವೂ ಬಿಜೆಪಿ ಹಲವು ಕ್ಷೇತ್ರದಲ್ಲಿ ಅಧಿಕಾರ ಗದ್ದುಗೆಯನ್ನೇರಲ್ಲಿದೆ. ಆ ಮೂಲಕ ಮೇ.21ರಲ್ಲಿ ಫಾಲ್ಟಾದಲ್ಲಿ ನಡೆಯಲಿರುವ ಮತ ಎಣಿಕೆ ವೇಳೆ ಅವರಿಗೂ ಹಿನ್ನಡೆಯಾಗುವ ಸಾಧ್ಯತೆ ಇದೆಯೇ ಎನ್ನುವ ಆತಂಕ ಸದ್ಯ ಮನೆ ಮಾಡಿದೆ, (ಏಜೆನ್ಸೀಸ್​).