ಚೆನ್ನೈ: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತುಂಡುಡುಗೆ ತೊಟ್ಟ ಯುವತಿಯರ ನೃತ್ಯಕ್ಕೆ ಚಪ್ಪಾಳೆ ತಟ್ಟಿದ್ದ ಸಚಿವ ಎಸ್. ಪೆರಿಯಕರುಪ್ಪನ್ ವರ್ತನೆಯನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ತಮಿಳುನಾಡು ಬಿಜೆಪಿ ರಾಜ್ಯ ಘಟಕ ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಘಟನೆಯ ತೀವ್ರತೆಯ ಬಗ್ಗೆ ಪ್ರಶ್ನಿಸಿದ್ದಾರೆ.
ಅರೆನಗ್ನ ಬಟ್ಟೆ ತೊಟ್ಟಿರುವ ಮಹಿಳೆಯರನ್ನು ತಮ್ಮ ಬಳಿ ಕರೆಸಿ, ಅವರನ್ನು ನೃತ್ಯ ಮಾಡಿಸಿ, ಸಂತೋಷದಿಂದ ಚಪ್ಪಾಳೆ ತಟ್ಟುವ ಸಚಿವ ಪೆರಿಯಕರುಪ್ಪನ್ರಂತಹ ನಾಯಕರನ್ನು ರಾಜ್ಯದ ಮಹಿಳೆಯರು ನಂಬುವುದು ಹೇಗೆ..?, ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳುವುದಾದರು ಹೇಗೆ ಎಂದು ಪ್ರಶ್ನಿಸಿದೆ.
ಮನರಂಜನೆ ಮತ್ತು ಮೋಜು ಮಸ್ತಿಯಲ್ಲಿ ತೊಡಗಿಸಿಕೊವ ಕಾರಣಕ್ಕೆ ರಾಜಕಾರಣಿಗಳು ಸರ್ಕಾರಿ ಹುದ್ದೆಯನ್ನು ವಹಿಸಿಕೊಳ್ಳಬೇಕೆ.? ಎಂದು ಪ್ರಶ್ನಿಸಿದ್ದು, ಇದು ಆಡಳಿತ ಪಕ್ಷದ ಕಾನೂನು ಸುವ್ಯವಸ್ಥೆ, ಆರೋಗ್ಯ ಮತ್ತು ಭ್ರಷ್ಟಾಚಾರದ ಕಾಳಜಿಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದೆ.
ತಮಿಳುನಾಡಿನಲ್ಲಿ ಈಗಾಗಲೇ, ಕಾನೂನು ಮತ್ತು ಸುವ್ಯವಸ್ಥೆ ಅಡಚಣೆಗಳು, ಆರೋಗ್ಯ ನ್ಯೂನತೆಗಳು, ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳಿಂದ ಆಡಳಿತ ಯಂತ್ರವೇ ಕುಸಿದು ಬಿದ್ದಿದೆ. ಇಂತಹ ಸಮಯದಲ್ಲಿ ಈ ರೀತಿಯ ದೃಶ್ಯಗಳಿಂದ ಸಚಿವರಾದವರು ಸುದ್ದಿಯಾಗುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್).