ಅಂದು ವಿಚಿತ್ರ ಟಿಕ್ಟಾಕ್ ವಿಡಿಯೋದಿಂದಲೇ ಸಖತ್ ಸದ್ದು ಮಾಡಿದ್ದ ಈ ಬಾಲಕ ಇಂದು ಹೇಗಿದ್ದಾನೆ ನೋಡಿ...RCB Fan Sagar Goswami
- ಈ ಸಾಗರ್ ಗೋಸ್ವಾಮಿ ಹೆಸರು ಗೊತ್ತಿಲ್ಲದಿರಬಹುದು ಆದರೆ, ಆತನ ಮುಖ ಪರಿಚಯ ಮಾತ್ರ ಎಲ್ಲರಿಗೂ ಗೊತ್ತೇ ಇದೆ
- ಒಂದು ಕಾಲದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಟಿಕ್ಟಾಕ್ ಜಮಾನದಲ್ಲಿ ಈ ಮುಖ ಭಾರತದಾದ್ಯಂತ ಸಖತ್ ಫೇಮಸ್ ಆಗಿತ್ತು
- ತೇರಿ ಪ್ಯಾರಿ ಪ್ಯಾರಿ ದೋ ಅಂಖಿಯಾ ಹಾಡಿಗೆ ಲಿಪ್-ಸಿಂಕ್ ಹಾಗೂ ವಿಚಿತ್ರ ನಟನೆಯ ಮೂಲಕ ಸಾಗರ್ ಮನೆ ಮಾತಾಗಿದ್ದರು
RCB Fan Sagar Goswami : ಇಂದು ಹೆಚ್ಚಿನ ಮಂದಿಗೆ ಗೊತ್ತಿರುವುದು ಎರಡೇ, ಒಂದು ಇನ್ಸ್ಟಾಗ್ರಾಂ ರೀಲ್ಸ್, ಮತ್ತೊಂದು ಯೂಟ್ಯೂಬ್ ಶಾರ್ಟ್ಸ್. ಆದರೆ, ಇವೆರೆಡು ಬರುವುದಕ್ಕೂ ಮುಂಚೆ ಅನೇಕ ಮಂದಿ ಡಬ್ಸ್ಮ್ಯಾಶ್ ಮೂಲಕ ಜನರನ್ನು ರಂಜಿಸುತ್ತಿದ್ದರು. ಆರಂಭದಲ್ಲಿ ಸಿನಿಮಾ ಡೈಲಾಗ್ಗಳಿಗೆ ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡುತ್ತಿದ್ದರು. ಈ ಪ್ರಕ್ರಿಯೆ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ, ಯಾವಾಗ ಟಿಕ್ಟಾಕ್ ಪರಿಚಯವಾಯಿತೋ ಆಗ ಎಲ್ಲವೂ ಸರಳವಾಯಿತು. ಒಂದೇ ಸೂರಿನಲ್ಲಿ ಎಲ್ಲವೂ ಲಭ್ಯವಾಯಿತು ಮತ್ತು ವಿಡಿಯೋ ಮಾಡುವುದು ತುಂಬಾ ಸರಳವಾಯಿತು. ಈ ಸಂದರ್ಭದಲ್ಲಿ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದವು. ಅವರಲ್ಲಿ ಸಾಗರ್ ಗೋಸ್ವಾಮಿ ಕೂಡ ಒಬ್ಬರು.
ಈ ಸಾಗರ್ ಗೋಸ್ವಾಮಿ ಹೆಸರು ಗೊತ್ತಿಲ್ಲದಿರಬಹುದು ಆದರೆ, ಆತನ ಮುಖ ಪರಿಚಯ ಮಾತ್ರ ಎಲ್ಲರಿಗೂ ಗೊತ್ತೇ ಇದೆ. ಟಿಕ್ಟಾಕ್ ಜಮಾನದಲ್ಲಿ ಈ ಮುಖ ಸಖತ್ ಫೇಮಸ್ ಆಗಿತ್ತು. ಈ ಟಿಕ್ ಟಾಕ್ ಸ್ಟಾರ್ 'ತೇರಿ ಪ್ಯಾರಿ ಪ್ಯಾರಿ ದೋ ಅಂಖಿಯಾ' ಹಾಡಿಗೆ ಲಿಪ್-ಸಿಂಕ್ ಮಾಡಿದ್ದಲ್ಲದೇ ತನ್ನ ವಿಚಿತ್ರ ನಟನೆ ಹಾಗೂ ಮುಖಭಾವದ ವಿಡಿಯೋವನ್ನು ಅಪ್‌ಲೋಡ್ ಮಾಡುವ ಮೂಲಕ ಟಿಕ್ಟಾಕ್ ಮಾತ್ರವಲ್ಲದೇ, ಜಾಲತಾಣದಲ್ಲಿ ಸಖತ್ ಜನಪ್ರಿಯತೆ ಗಳಿಸಿದ್ದನು. ಆ ಒಂದೇ ಒಂದು ವಿಡಿಯೋಗೆ ಗಳಿಸಿದ ಜನಪ್ರಿಯತೆ ಇಂದಿಗೂ ಹಾಗೇ ಇದೆ.
ಅಂದು ಸಖತ್ ವೈರಲ್ ವಿಡಿಯೋದಲ್ಲಿ ಆತನ ಆಕರ್ಷಕ ಕೇಶವಿನ್ಯಾಸ ಎಲ್ಲರ ಗಮನ ಸೆಳೆಯಿತು. ಅಷ್ಟೇ ಅಲ್ಲದೆ, ನಗುವಿನ ಮುಖಭಾವದೊಂದಿಗೆ ತೇರಿ ಪ್ಯಾರಿ ಪ್ಯಾರಿ ದೋ ಅಂಖಿಯಾ ಹಾಡಿಗೆ ಲಿಪ್ ಸಿಂಕ್ ಮಾಡುವ ಸಾಗರ್, ಹಾಡಿನ ಕೊನೆಯಲ್ಲಿ ವಿಚಿತ್ರವಾಗಿ ಅಳುವ ಮುಖಭಾವ ಪ್ರದರ್ಶಿಸುತ್ತಾರೆ. ನೋಡುಗರಿಗೆ ಒಂದು ರೀತಿಯಲ್ಲಿ ವಿಚಿತ್ರ ಎನಿಸಿದರು ಕೂಡ ಸಾಗರ್ ನಟನೆ ಮಾತ್ರ ಎಲ್ಲರ ಗಮನ ಸೆಳೆಯಿತು. ಈ ವಿಡಿಯೋ ಮಾಡುವಾಗ ಸಾಗರ್ ಇನ್ನೂ ಬಾಲಕ. ಆದರೆ, ಇಂದು ಯುವಕನಾಗಿರುವ ಸಾಗರ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.
ನವೀನ್ ಯಾದವ್ ಎಂಬುವವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಂದು ಮತ್ತು ಇಂದು ಎಂಬ ಶೀರ್ಷಿಕೆ ಅಡಿಯಲ್ಲಿ ಸಾಗರ್ ಗೋಸ್ವಾಮಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ಅಂದು ಫೇಮಸ್ ಆಗಿದ್ದ ಸಾಗರ್ ಇಂದು ಹೇಗಿದ್ದಾರೆ ನೋಡಿ ಎಂದು ಮುಖ ಪರಿಚಯ ಮಾಡಿದ್ದಾರೆ. ನವೀನ್ ಹಂಚಿಕೊಂಡಿರುವ ವಿಡಿಯೋ ಈವರೆಗೂ 69 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಾಗರ್ ಗೋಸ್ವಾಮಿಯ ಇಂದಿನ ಅವತಾರ ಕಂಡು ಹುಬ್ಬೇರಿಸಿದ್ದಾರೆ. ಎಷ್ಟೊಂದು ಬದಲಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಯಾರು ಈ ಸಾಗರ್?
ಸಾಗರ್ ಗೋಸ್ವಾಮಿ ಅವರು sagar_goswami89 ಹೆಸರಿನ ತಮ್ಮ ಇನ್ಸ್ಟಾಗ್ರಾಂನಲ್ಲಿ 9 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅವರ ಪ್ರೋಫೈಲ್ ಪ್ರಕಾರ ಅವರೊಬ್ಬ ನಟನಾಗಿದ್ದು, ಜಾರ್ಖಂಡ್ನ ಕೊಡೆರ್ಮಾ ಮೂಲದವರು. ಅವರ ಇನ್ಸ್ಟಾಗ್ರಾಂ ನೋಡಿದರೆ ಅವರೊಬ್ಬ ಫಿಟ್ನೆಸ್ ಪ್ರೇಮಿ ಅನ್ನೋದು ಗೊತ್ತಾಗುತ್ತದೆ.
ಆರ್ಸಿಬಿ ಅಭಿಮಾನಿ
ಅಂದಹಾಗೆ, ಸಾಗರ್ ಅವರು ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ಅಭಿಮಾನಿ ಕೂಡ ಹೌದು. ಆರ್ಸಿಬಿ ಪಂದ್ಯಗಳನ್ನು ವೀಕ್ಷಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಆ ಫೋಟೋಗಳಿಗೆ ವಿರಾಟ್ ಕೊಹ್ಲಿ ಎಂಬ ಹ್ಯಾಶ್ಟ್ಯಾಗ್ ಕೂಡ ಬಳಸಿದ್ದಾರೆ. ಅದನ್ನು ನೋಡಿದರೆ ಸಾಗರ್ ಆರ್ಸಿಬಿ ಅಭಿಮಾನಿ ಅನ್ನೋದ ಸ್ಪಷ್ಟವಾಗಿ ಗೋಚರವಾಗುತ್ತದೆ, (ಏಜೆನ್ಸೀಸ್).