Three sisters marry same man in UP
- ಮೂವರನ್ನು ಮದುವೆಯಾದ ಭೂಪ, ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ
- ಹಿಂದೂ ವಿವಾಹ ಕಾಯ್ದೆ, 1955ಯಡಿ ಬಹುಪತ್ನಿತ್ವ ನಿಷೇಧ, ಬಿಎನ್ಎಸ್ ಸೆಕ್ಷನ್ 82ರ ಅಡಿ ಅಪರಾಧ
- ನಾವೀಗ ಮೇಜರ್, ಒಟ್ಟಾಗಿ ಕುಳಿತು ಮಾತಾಡಿಕೊಂಡೆ ಒಬ್ಬನನ್ನು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಪೋಸ್ಟ್
ಅಮ್ರೋಹಾ(ಉತ್ತರ ಪ್ರದೇಶ): ಒಬ್ಬಳೇ ಹೆಂಡತಿಯ ಜೊತೆ ಜೀವನ ನಡೆಸೋಕೆ ಸಾಧ್ಯವಿಲ್ಲ ಎಂದು ಅಕ್ರಮ ಸಂಬಂಧಗಳು ಹುಟ್ಟಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಉತ್ತರ ಪ್ರದೇಶದ ಅಮರೋಹದಲ್ಲಿ ಯುವಕನೊಬ್ಬ ಮೂರು ಯುವತಿಯರನ್ನು ಮದುವೆ ಮಾಡಿಕೊಂಡು, ರೀಲ್ಸ್ ಮಾಡುತ್ತಾ ಹಾಯಾಗಿ ದಿನ ಕಳೆಯುತ್ತಿರುವ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿವೆ. ಈ ಮಧ್ಯೆ ನೆಟ್ಟಿಗರಲ್ಲಿ ಮೂಡುತ್ತಿರುವ ಪ್ರಶ್ನೆ ಎಂದರೆ, ಕಾನೂನಿನ ಪ್ರಕಾರ ಮದುವೆ ಎಷ್ಟು ಸರಿ ಎನ್ನುವುದು.
ಏನಿದು ಘಟನೆ?
ಸೋಶಿಯಲ್ ಮೀಡಿಯಾದಲ್ಲಿ ಕಾಂಟೆಂಟ್ ಕ್ರಿಯೇಟರ್ ಕ್ಯಾಮೆರಾಮೆನ್ ಆಗಿ ಕೆಲಸ ಮಾಡುತ್ತಿರುವ ವಿಕಾಸ್ ಅವರು, ತಮ್ಮ ಇಬ್ಬರು ಸೋದರಿಯರು ಹಾಗೂ ಮೂರನೆಯವರು ಅವರ ಚಿಕ್ಕಮ್ಮನ ಮಗಳು ಅಂದರೆ ಸೋದರ ಸಂಬಂಧಿಯನ್ನು ಮದುವೆ ಮಾಡಿಕೊಂಡಿದ್ದಾರೆ. ಯುವತಿಯರು ಶಿಕ್ಷಿತರು.
ಇನ್ಸ್ಟಾಗ್ರಾಮ್, ಎಕ್ಸ್, ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಅಮ್ರೋಹಾದ ಧೋರಿಯಾ ಗ್ರಾಮದ ಸರೋಜ್, ಸಾವಿತ್ರಿ ಮತ್ತು ಸಂತೋಷ್ ಮದುವೆಯಾಗಿ, ಸಾಂಪ್ರದಾಯಿಕ ಹಿಂದೂ ವಿವಾಹ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ವಿಕಾಸ್ ಮೂವರಿಗೂ ಹಣೆಗೆ ಸಿಂಧೂರವಿಡುವ ದೃಶ್ಯ ಇದೆ. ನಾವು ಒಪ್ಪಿಗೆಯಿಂದಲೇ ಮದುವೆ ಮಾಡಿಕೊಂಡಿದ್ದೇವೆ. ನಮ್ಮನ್ನು ನಿಂದಿಸೋದು ಬಿಡಿ ಎಂದಿದ್ದಾರೆ. ಇವ್ರ ಈ ಹೊಂದಾಣಿಕೆ ಕಂಡು ನೆಟ್ಟಿಗರು, ಕುಟುಂಬಸ್ಥರು ತಲೆ ದೂಗಿದರೂ ಸಹ ಕಾನೂನಿನ ಪ್ರಕಾರ ಈ ಮದುವೆ ತಪ್ಪು ಎನ್ನಲಾಗುತ್ತದೆ.
ಹಿಂದೂ ವಿವಾಹ ಕಾಯ್ದೆ, ಭಾರತೀಯ ಕಾನೂನು ಏನು ಹೇಳುತ್ತದೆ?
ಹಿಂದೂ ವಿವಾಹ ಕಾಯ್ದೆ ಪ್ರಕಾರ,
ಹೌದು, ಮೂವರನ್ನು ಒಬ್ಬನೇ ಯುವಕ ಮದುವೆ ಮಾಡಿಕೊಳ್ಳುವುದು ಹಿಂದೂ ವಿವಾಹ ಕಾಯ್ದೆ, 1955 ತಪ್ಪು. ಇದು ಬಹುಪತ್ನಿತ್ವವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಕಾಯ್ದೆಯ ಸೆಕ್ಷನ್ 5ರ ಪ್ರಕಾರ, ಮದುವೆಗೆ ಸಿದ್ಧರಾಗಿರುವ ಪುರುಷ ಅಥವಾ ಸ್ತ್ರೀಯ ಮೊದಲ ಸಂಗಾತಿ ಮರಣ ಹೊಂದಿರಬೇಕು. ಅಕಸ್ಮಾತ್ ಕಾಣೆಯಾಗಿದ್ದರೆ. ಅವರಿಗಾಗಿ ಏಳು ತಿಂಗಳು ಕಾದು ಆನಂತರ ಮದುವೆಗೆ ಒಪ್ಪಿಕೊಳ್ಳಬಹುದು. ಮೊದಲ ಪತ್ನಿ ಜೀವಂತವಿರುವಾಗಲೇ ಮತ್ತೊಂದು ಮದುವೆ ಮಾಡಿಕೊಳ್ಳುವುದು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ.
ಕೇಸ್ ದಾಖಲಾಗುವ ಸಾಧ್ಯತೆ
ಭಾರತೀಯ ನ್ಯಾಯ ಸಂಹಿತೆಯಡಿ ಸೆಕ್ಷನ್ 82ರ ಅಡಿ ಮೂರು ಯುತಿಯರನ್ನು ಏಕಕಾಲದಲ್ಲಿ ಮದುವೆ ಮಾಡಿಕೊಳ್ಳುವುದು ದ್ವಿಪತ್ನಿತ್ವ ಅಪರಾಧದಡಿ ಕ್ರಿಮಿನಲ್ ಕೇಸ್ ದಾಖಲಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ಯುವತಿಯರು ಏನಂದ್ರು?
ಪ್ರಾರಂಭದಲ್ಲಿ ಇದೊಂದು ರೀಲ್ಸ್ಗಾಗಿ ಮಾಡಿದ್ದ ಕಾಂಟೆಂಟ್ ಎಂದು ನಂಬಲಾಗಿತ್ತು. ಆದರೆ, ಸ್ವತಃ ಲೈವ್ಗೆ ಬಂದ ಯುವತಿಯರು ನಾವು ಒಟ್ಟಾಗಿ ಬೆಳೆದವರು. ಬೇರೆ ಬೇರೆ ಮನೆಗೆ ಹೋಗಿ ಬೇರ್ಪಟ್ಟು ಬದುಕಲು ಇಷ್ಟವಿಲ್ಲ. ಹೀಗಾಗಿ ನಾವು ಯೋಚಿಸಿ ಮದುವೆ ಮಾಡಿಕೊಂಡಿದ್ದೇವೆ. ಒಟ್ಟಾಗಿ ಇರುವುದು ನಮ್ಮ ಉದ್ದೇಶ. ನಮ್ಮನ್ನು ಟ್ರೋಲ್ ಮಾಡುವುದನ್ನು. ನಿಂದಿಸುವುದು ನಿಲ್ಲಿಸಿ ಎಂದು ನಾಲ್ವರು ಮನವಿ ಮಾಡಿಕೊಂಡು ಸ್ಪಷ್ಟನೆ ಕೊಟ್ಟಿದ್ದರು.
ರೀಲ್ಸ್ಗೆ ಸ್ವಲ್ಪ ಟ್ವಿಸ್ಟ್
ನಾಲ್ವರು ಮದದುವೆ ಮಾಡಿಕೊಂಡ ಹಸನ್‌ಪುರದ ಮಾ ಚಾಮುಂಡಾ ದೇವಸ್ಥಾನದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದೆ, ಆದರೆ ಈ ಬಗ್ಗೆ ಆಡಳಿತಮಂಡಳಿ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ. ದೇವಸ್ಥಾನದಲ್ಲಿ ಮೂವರು ಒಬ್ಬನನ್ನೇ ಮದುವೆಯಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ.ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗೂ ಸೌಂದರ್ಯೀಕರಣ ಕಾರ್ಯ ನಡೆಯುತ್ತಿತ್ತು ಎಂದೂ, ಅಲ್ಲಿ ಯಾವುದೇ ಪೂಜಾರಿಗಳು ಅಥವಾ ಸಿಬ್ಬಂದಿ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್).