ಅಯೋಧ್ಯೆಯ ರಾಮಮಂದಿರದ ಭವ್ಯ ಗೋಪುರ ಮತ್ತು ಮುಂಭಾಗದ ನೋಟ 
ದೇಶ

ರಾಮಮಂದಿರ ಟ್ರಸ್ಟ್‌ನಲ್ಲಿ ಮಹತ್ವದ ಬದಲಾವಣೆ: ಮೂವರು ಪದಾಧಿಕಾರಿಗಳ ನೇಮಕ; ಶೀಘ್ರದಲ್ಲೇ ಹೊಸ ಮುಖ್ಯಸ್ಥರ ಆಯ್ಕೆ! Ram Mandir

ಅಯೋಧ್ಯಾ: ಹಿಂದೂಗಳ ಅಸ್ಮಿತೆ ಎಂದೇ ಬಣ್ಣಿಸಲಾಗುವ ಅಯೋಧ್ಯಾ ಶ್ರೀರಾಮ ಮಂದಿರ (Ram Mandir) ದ ದೇಣಿಗೆಗೆ ಸಂಬಂಧಿಸಿದಂತೆ ಆರ್ಥಿಕ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತಂತೆ ರಾಜ್ಯ ಪೊಲೀಸರ ವಿಶೇಷ ತಂಡ ವಿಚಾರಣೆ ನಡೆಸುತ್ತಿದ್ದು, ಈಗ ದೇನಸ್ಥಾನದ ಆಡಳಿತ ಮಂಡಳಿಗೆ ಮೂವರು ಪದಾಧಿಕಾರಿಗಳನ್ನು ನೇಮಿಸಲಾಗಿದೆ.
ದೆಹಲಿ ಮೂಲದ ಮಹೇಶ್ ಭಾಗಚಂಡ್ಕ, ಅಯೋಧ್ಯೆ ನಿವಾಸಿ ಮದನ್ ಮೋಹನ್ ಪಾಂಡೆ ಮತ್ತು ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಟ್ರಸ್ಟಿಯಾಗಿ ನೇಮಕವಾಗಿರುವ ಮಹೇಶ್ ಭಾಗಚಂಡ್ಕ ಇವರು ವಿಶ್ವ ಹಿಂದೂ ಪರಿಷತ್ತಿನ ನಾಯಕ ದಿ. ಅಶೋಕ್​ ಸಿಂಘಲ್​ ಅವರ ಹತ್ತಿರದ ಸಂಬಂಧಿ ಎಂದು ಹೇಳಲಾಗುತ್ತಿದೆ.

ಸದ್ಯದಲ್ಲೇ ಮುಖ್ಯಸ್ಥರ ಆಯ್ಕೆ!

ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ್ ದಾಸ್ ಅವರ ನಿವಾಸದಲ್ಲಿ ಈ ಕುರಿತು ಸಭೆ ನಡೆಯುತ್ತಿದ್ದು, ಟ್ರಸ್ಟ್‌ನ ಇತರೆ ಖಾಲಿ ಹುದ್ದೆಗಳಿಗೆ ಶೀಘ್ರದಲ್ಲಿ ನೇಮಕಾತಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಅಯೋಧ್ಯೆ ರಾಮ ಮಂದಿರದ ಹುಂಡಿ ಕಾಸಿಗೆ ಸಂಬಂಧಿಸಿದಂತೆ ಆರ್ಥಿಕ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದ ಹಿನ್ನಲೆ, ಟ್ರಸ್ಟ್​ನ ಮುಖ್ಯ ಕಾರ್ಯನಿರ್ವಾಹಕ ಸ್ಥಾನಕ್ಕೆ ಚಂಪತ್​ ರಾಯ್​ ಹಾಗೂ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅನಿಲ್​ ಮಿಶ್ರಾ ರಾಜೀನಾಮೆ ನೀಡಿದ್ದರು.
ಇಬರ ರಾಜೀನಾಮೆಯಿಂದ ಖಾಲಿಯಾಗಿರುವ ಹುದ್ದೆಗಳಿಗೆ ಆದಷ್ಟು ಬೇಗ ನೇಮಕಾತಿ ನಡೆಯಲಿದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಎಸ್​​ಐಟಿ ವಿಚಾರಣೆಯಲ್ಲಿ ಚಂಪತ್​ ರಾಯ್​ ಹಾಗೂ ಅನಿಲ್​ ಮಿಶ್ರಾ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಂತೀಮ ವರದಿ ಇನ್ನೂ ಹೊರಬಂದಿಲ್ಲ, (ಏಜನ್ಸೀಸ್​).