ಜಮ್ಮು-ಕಾಶ್ಮೀರದ ಸಿಆರ್‌ಪಿಎಫ್ ಕ್ಯಾಂಪ್​ ಮೇಲೆ ಉಗ್ರರ ಗುಂಡಿನ ದಾಳಿ; ಮೂವರು ಯೋಧರಿಗೆ ಗಾಯ | CRPF Camp 
ದೇಶ

ಜಮ್ಮು-ಕಾಶ್ಮೀರದ ಸಿಆರ್‌ಪಿಎಫ್ ಕ್ಯಾಂಪ್​ ಮೇಲೆ ಉಗ್ರರ ಗುಂಡಿನ ದಾಳಿ; ಮೂವರು ಯೋಧರಿಗೆ ಗಾಯ | Terrorist Attack

ಜಮ್ಮು-ಕಾಶ್ಮೀರ: ಮತ್ತೆ ಅಟ್ಟಹಾಸ ತೋರಿರುವ ಉಗ್ರರು, ಗಸ್ತು ತಿರುಗುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಿದ ಏಕಾಏಕಿ ಗುಂಡಿನ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಸಮೀಪ ನಡೆದ ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಪ್ರದೇಶದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಬುಧವಾರ ಮಧ್ಯಾಹ್ನ ಮಿರ್ ಬಜಾರ್ ಹತ್ತಿರದಲ್ಲೇ ಇರುವ ಸಿಆರ್‌ಪಿಎಫ್ ಕ್ಯಾಂಪ್​ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಮಧ್ಯಾಹ್ನ ಸುಮಾರು 2.15ರ ವೇಳೆಗೆ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ತಂಡದ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರು ಸಿಬ್ಬಂದಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ಅನಂತನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ದಾಳಿ ನಡೆಸಿದವರು ಯಾರು ಮತ್ತು ಅವರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಭದ್ರತಾ ಪಡೆಗಳು ಚುರುಕಾಗಿ ಕಾರ್ಯಾಚರಣೆ ಆರಂಭಿಸಿವೆ,(ಏಜೆನ್ಸೀಸ್).