ಯಾರು ದೇಶದ ಅಭಿವೃದ್ಧಿ ಬಯಸುತ್ತಾರೋ ಅವರು ದಿಮಾಗಿ ನಕ್ಸಲ್​ ಎಂದ ಅರವಿಂದ ಕೇಜ್ರಿವಾಲ್​ 
ದೇಶ

ಭಾರತದ ಉನ್ನತಿ ಬಯಸುವವರೇ 'ದಿಮಾಗಿ ನಕ್ಸಲ್​': ಪ್ರಧಾನಿ ಮೋದಿ ಭಾಷಣಕ್ಕೆ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್​ ಕೌಂಟರ್​! Arvind Kejriwal on Dimagi Naxal

ಪ್ರಮುಖ ಮುಖ್ಯಾಂಶಗಳು

  • ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದಿಮಾಗಿ ನಕ್ಸಲ್​​ ಎಂದ ಪ್ರಧಾನಿ ಮೋದಿ
  • ಯಾರು ದೇಶದ ಅಭಿವೃದ್ಧಿ ಬಯಸುತ್ತಾರೋ ಅವರು ದಿಮಾಗಿ ನಕ್ಸಲ್​ ಎಂದ ಅರವಿಂದ ಕೇಜ್ರಿವಾಲ್​
  • ಹೌದು, ನಾನು ದಿಮಾಗಿ ನಕ್ಸಲ್​ ಎಂದ ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​
ನವದೆಹಲಿ: ಆಗಸ್ಟ್​​ 15 ರಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಿಮಾಗಿ ನಕ್ಸಲ್​ ಎಂಬ ಪದವನ್ನು ಬಳಸಿದ್ದು, ಈಗ ಇದು ದೇಶಾದ್ಯಂತ ಸಾಕಷ್ಟು ಚರ್ಚೆಗೆ ವೇದಿಕೆಯಾಗಿದೆ.
ಪ್ರಧಾನಿ ಅವರ ಬಾಯಿಂದ ಈ ಪದ ಬಂದ ನಂತರ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಹೌದು, ತಾವು ದಿಮಾಗಿ ನಕ್ಸಲ್​ ಎಂದು ಟ್ವಿಟ್​ ಮಾಡಿದ್ದರು. ಈಗ ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್ (Arvind Kejriwal on Dimagi Naxal)​ ಕೂಡ ನಾವು ಸಹ ದಿಮಾಗಿ ನಕ್ಸಲ್​ ಎಂದು ಹೇಳಿದ್ದಾರೆ.

ಭಾರತದ ಉನ್ನತಿಯನ್ನು ಬಯಸುವವರು ದಿಮಾಗಿ ನಕ್ಸಲ್​!

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಅರವಿಂದ್​ ಕೇಜ್ರಿವಾಲ್​, ಆಡಳಿತ ಪಕ್ಷವನ್ನು ಪ್ರಶ್ನಿಸುವ, ಭಾರತದ ಉನ್ನತಿಯನ್ನು ಬಯಸುವವರು ದಿಮಾಗಿ ನಕ್ಸಲರಾಗಿದ್ದಾರೆ. ಒಂದರ್ಥದಲ್ಲಿ ದಿಮಾಗಿ ನಕ್ಸಲರೇ ನೈಜ ದೇಶಭಕ್ತರೆಂದು ಕೇಜ್ರಿವಾಲ್​ ಹೇಳಿದ್ದಾರೆ.

ಇವತ್ತಿನ ದಿನದಲ್ಲಿ ಭಗತ್​ ಸಿಂಗ್​ ಮತ್ತು ಬಿ.ಆರ್​. ಅಂಬೇಡ್ಕರ್​​ ಬದುಕಿದ್ದರೆ, ಅವರನ್ನು ನಮ್ಮ ಪ್ರಧಾನಿಗಳು ದಿಮಾಗಿ ನಕ್ಸಲ್​ ಎಂದು ಹೇಳುತ್ತಿದ್ದರು. ದಿಮಾಗಿ ನಕ್ಸಲ್​ ಯಾರೆಂದರೆ, ಯಾರು ದೇಶದ ಶಿಕ್ಷಣದಲ್ಲಿ ಬದಲಾವಣೆ ಬಯಸುವ, ಉತ್ತಮ ಆಸ್ಪತ್ರೆ ಮತ್ತು ರಸ್ತೆಯನ್ನು ಬಯಸುವ ಹಾಗೂ ವಿಕಸಿತ ಭಾರತದ ಕನಸನ್ನು ಕಾಣುವವರು ನಿಜವಾದ ದಿಮಾಗಿ ನಕ್ಸಲ್​ ಆಗಿದ್ದಾರೆಂದು ಮಾಜಿ ಸಿಎಂ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.


ಪ್ರಧಾನಿ ಭಾಷಣದಲ್ಲಿ ಹೇಳಿದ್ದೇನು?

ಆಗಸ್ಟ್​ 15 ರಂದು ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಭಾರತ ಕಾಡುಗಳಿಂದ ಶಸ್ತ್ರಸಜ್ಜಿತ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಅದರ ವೈಚಾರಿಕ ಬೆಂಬಲಿಗರು ಹಿಂಸಾಚಾರ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುವ ಮೂಲಕ ಇಂದಿಗೂ ಬೆದರಿಕೆಯಾಗಿ ಉಳಿದಿದ್ದಾರೆ ಎಂದು ಎಚ್ಚರಿಸಿದ್ದರು.
ವರ್ಷಗಳಿಂದ ಮಾವೋವಾದಿ ಮನಸ್ಥಿತಿ (ದಿಮಾಗಿ ನಕ್ಸಲ್​) ಯ ಜನರು ಅಧಿಕಾರದ ಕಾರಿಡಾರ್‌ಗಳಲ್ಲಿ ಸ್ಥಾನ ಪಡೆದುಕೊಂಡು, ಸರ್ಕಾರಿ ಸಮಿತಿಗಳಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕ ನೀತಿಗಳ ಮೇಲೆ ಪ್ರಭಾವ ಬೀರಿದ್ದರು ಎಂದು ಆರೋಪಿಸಿದ ಪ್ರಧಾನಿ, ಅಂತಹ ಜನರನ್ನು ಗುರುತಿಸಿ ಸಮಾಜದಿಂದ ಪ್ರತ್ಯೇಕಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು, (ಏಜನ್ಸೀಸ್​).