- ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ
- ಒಂದು ಅಪರೂಪದ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾದವರು ಕ್ಯಾಪ್ಟನ್ ಅಜಮ್ ಆಲಿ
- ವೃತ್ತಿಜೀವನದ ಕೊನೆಯ ದಿನವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಕೆಲವೊಂದು ಮಾತ್ರ ಜನರ ಹೃದಯವನ್ನು ಮುಟ್ಟುತ್ತವೆ. ಅಂತಹದ್ದೇ ಒಂದು ಅಪರೂಪದ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾದವರು (Pilot Life) ಕ್ಯಾಪ್ಟನ್ ಅಜಮ್ ಆಲಿ. ಅವರು ತಮ್ಮ ವೃತ್ತಿಜೀವನದ ಕೊನೆಯ ದಿನವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಟನ್ ಅಜಮ್ ವಿಮಾನ ಟೇಕ್ ಆಫ್ ಆಗುವಾಗ ತಮ್ಮ ಪ್ರಕಟಣೆಯಲ್ಲಿ, "ಶುಭೋದಯ, ಮಹಿಳೆಯರೇ ಮತ್ತು ಮಹನೀಯರೇ. ಇವರು ವಿಮಾನ ಡೆಕ್‌ನಿಂದ ನಿಮ್ಮ ಕ್ಯಾಪ್ಟನ್. ನನ್ನ ಹೆಸರು ಕ್ಯಾಪ್ಟನ್ ಅಜಮ್ ಅಲಿ. ನನ್ನ ಜೀವನದಲ್ಲಿ ಮೂರು ಅತ್ಯಂತ ಮಹತ್ವದ ಕ್ಷಣಗಳಿವೆ ಎಂದು ವಿವರಿಸಲು ಪ್ರಾರಂಭಿಸಿದರು.
ಒಬ್ಬ ಪೈಲಟ್ ಎಂದಿಗೂ ಮರೆಯದ ಮೂರು ವಿಮಾನ ಹಾರಾಟಗಳು ಎಂದು ಹೇಳುವ ಮೂಲಕ ಅವರ ವೃತ್ತಿ ಜೀವನದ ಕೆಲವೊಂದು ಅಂಶಗಳನ್ನು ತೆರೆದಿಡಲು ಪ್ರಾರಂಭಿಸಿದರು. ಮೊದಲನೆಯದು ಏಕವ್ಯಕ್ತಿ ಹಾರಾಟ, ಸುಮಾರು 24 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯಲ್ಲಿ ನಾನು ಯುದ್ಧ ಪೈಲಟ್ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆನು ಎಂದರು.
ಎರಡನೇ ಮಹತ್ವದ ಕ್ಷಣ ಎಂದರೆ, ಇದು ನಿವೃತ್ತಿಗೆ ಮುಂಚಿನ ಅಂತಿಮ ಹಾರಾಟ. ಇದೊಂದು ಎರಡು ದಶಕಗಳ ದೂರದಲ್ಲಿರುವ ಒಂದು ಮೈಲಿಗಲ್ಲು ಎಂದು ಗಮನಿಸುತ್ತಾರೆ. ಮೂರನೇ ಕ್ಷಣವು ಅತ್ಯಂತ ಮುಖ್ಯವಾದ ಪ್ರಯಾಣವೆಂದರೆ, ನಿಮ್ಮ ಕುಟುಂಬದೊಂದಿಗೆ ಹಾರಲು ಅವಕಾಶ ಸಿಗುವುದು. ಇಂದು ನನಗೆ ವಿಶೇಷವಾದ ದಿನ ನನ್ನ ಹೆಂಡತಿ ಮತ್ತು ಮಕ್ಕಳು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು. ಇದಕ್ಕೆ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಚಪ್ಪಾಳೆ ಮತ್ತು ನಗುವಿನೊಂದಿಗೆ ಪ್ರತಿಕ್ರಿಯಿಸಿದರು.
ಈ ವಿಡಿಯೋವನ್ನು ಪೈಲಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಒಬ್ಬ ಪೈಲಟ್ ಎಂದಿಗೂ ಮರೆಯದ ಮೂರು ವಿಮಾನಗಳು. 1. ಮೊದಲ ಏಕವ್ಯಕ್ತಿ ಹಾರಾಟ, 2. ನಿವೃತ್ತಿ ಹೊಂದುವ ಮೊದಲು ಕೊನೆಯ ವಿಮಾನ, 3. ನಿಮ್ಮ ಪ್ರೀತಿಪಾತ್ರರೊಂದಿಗೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವುದು ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೈಲಟ್ ತನ್ನ ಕುಟುಂಬವನ್ನು ಪರಿಚಯಿಸಿದ ರೀತಿ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ತುಂಬಾ ಇಷ್ಟವಾಯಿತು ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಬಳಕೆದಾರರು , ಅದ್ಭುತ !!! ನೀವೆಲ್ಲರೂ ತುಂಬಾ ವಿಶೇಷ ಭಾವನೆ ಹೊಂದಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).