ನೀಟ್​ ಪರೀಕ್ಷೆ  
ದೇಶ

NEET-UG 2026 ಮರುಪರೀಕ್ಷೆ ಮುಕ್ತಾಯ: ಈ ವಿಷಯವೇ ತುಂಬಾ ಕಠಿಣವಾಗಿತ್ತು ಎಂದ ವಿದ್ಯಾರ್ಥಿಗಳು

ಪ್ರಮುಖ ಮುಖ್ಯಾಂಶಗಳು

  • ಇಂದು ದೇಶಾದ್ಯಂತ ನಡೆದ ನೀಟ್​-ಯುಜಿ ಪರೀಕ್ಷೆ
  • ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳಿಗೆ ಈ ವಿಷಯ ಟಫ್ ಆಯಿತಂತೆ
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ (NEET-UG) ಮರುಪರೀಕ್ಷೆಯು ಭಾನುವಾರ ದೇಶಾದ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಗಳಿಂದ ಹೊರಬಂದ ಬಳಿಕ ತಮಗೆ ಯಾವ ವಿಷಯ ಕಠಿಣ ಹಾಗೂ ಸುಲಭವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. 

ಸಿಸಿಟಿವಿ ಕಣ್ಗಾವಲು, ಹದ್ದಿನ ಕಣ್ಣಿನ ಭದ್ರತೆ

ಈ ಬಾರಿ ಯಾವುದೇ ಕಾರಣಕ್ಕೂ ಅಕ್ರಮಗಳಿಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಿದ ಎನ್​ಟಿಎ ಮತ್ತು ಸಂಬಂಧಪಟ್ಟ ಪರೀಕ್ಷಾ ಮಂಡಳಿಗಳು, ಅಗತ್ಯವನ್ನು ಮೀರಿ ಭದ್ರತಾ ವ್ಯವಸ್ಥೆ ಮಾಡಿತ್ತು. ದೇಶಾದ್ಯಂತ ಸುಮಾರು 5,440 ಕೇಂದ್ರಗಳಲ್ಲಿ 22 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದರು. ಇಡೀ ಪ್ರಕ್ರಿಯೆಯನ್ನು ಸುಮಾರು ಒಂದು ಲಕ್ಷ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿರುವುದು ಗಮನಾರ್ಹ.

ಹೇಗಿತ್ತು ಪ್ರಶ್ನೆ ಪತ್ರಿಕೆ

ಪರೀಕ್ಷೆ ಮುಗಿಸಿ ಹೊರಬಂದ ವಿದ್ಯಾರ್ಥಿಗಳು, ಪ್ರಶ್ನೆಪತ್ರಿಕೆಯು ಸುಲಭದಿಂದ ಸಾಧರಣ ಮಟ್ಟದಲ್ಲಿತ್ತು. ಫಿಸಿಕ್ಸ್ (ಭೌತಶಾಸ್ತ್ರ) ತುಂಬಾ ಟಫ್​ ಇತ್ತು. ಅದನ್ನು ಬಿಟ್ಟರೆ ಉಳಿದ ಎಲ್ಲ ವಿಷಯಗಳು ಸುಲಭವಾಗಿತ್ತು. ಅನೇಕ ವಿದ್ಯಾರ್ಥಿಗಳ ಪ್ರಕಾರ, ಫಿಸಿಕ್ಸ್ ಕಠಿಣವಾಗಿತ್ತು ಎಂಬುದು ತಿಳಿದುಬಂದಿದೆ. ಕಳೆದ ಪರೀಕ್ಷೆಗೆ ಹೋಲಿಸಿದರೆ, ಈ ಬಾರಿ ಭೌತಶಾಸ್ತ್ರದ ಪ್ರಶ್ನೆಗಳು ಬಹಳ ಟ್ರಿಕ್ಕಿಯಾಗಿದ್ದವು ಎಂದಿದ್ದಾರೆ,(ಏಜೆನ್ಸೀಸ್).