- ಇಂದಿನಿಂದ ಪರ್ತ್‌ನಲ್ಲಿ ಆ್ಯಶಸ್ ಸರಣಿ ಆರಂಭ
- ಆ್ಯಶಸ್ ಸರಣಿ ಇತಿಹಾಸದಲ್ಲಿ ಇದೇ ಮೊದಲು
- ಒಂದೇ ದಿನ 19 ವಿಕೆಟ್ ಪತನ
ಆಸ್ಟ್ರೇಲಿಯಾ: ಇಂದಿನಿಂದ ಪರ್ತ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸೀಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಮೊದಲ ದಿನದಂದು ಬೌಲರ್‌ಗಳು ಭಾರೀ ಕಮಾಲ್ ಮಾಡಿದ್ದಾರೆ. ಮೊದಲ ದಿನದಾಟದಲ್ಲಿ ಒಂದಲ್ಲ, ನಾಲ್ಕಲ್ಲ, ಬರೋಬ್ಬರಿ 19 ವಿಕೆಟ್‌ಗಳು ಉರುಳಿತು. ಕಳೆದ 100 ವರ್ಷಗಳ ಆ್ಯಶಸ್ ಸರಣಿಯ ಇತಿಹಾಸದಲ್ಲಿ ಮೊದಲ ದಿನದಂದು 19 ವಿಕೆಟ್‌ಗಳು ಪತನಗೊಂಡಿರುವುದು ಇದೇ ಮೊದಲು ಎಂಬುದು ನಿಜಕ್ಕೂ ಗಮನಾರ್ಹ.
2001ರ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಮತ್ತು 2005ರ ಲಾರ್ಡ್ಸ್ ಟೆಸ್ಟ್‌ನಲ್ಲಿ, ಮೊದಲ ದಿನದಂದು 17 ವಿಕೆಟ್‌ಗಳು ಉರುಳಿತು. ಆ್ಯಶಸ್ ಟೆಸ್ಟ್‌ನ ಮೊದಲ ದಿನದಂದು ಪ್ರಥಮ ಬಾರಿಗೆ 18 ಅಥವಾ ಅದಕ್ಕಿಂತ ಅಧಿಕ ವಿಕೆಟ್‌ಗಳು ಉರುಳಿದ್ದು, 1909ರಲ್ಲಿ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನದಂದು ದಾಖಲೆಯ 20 ವಿಕೆಟ್‌ಗಳು ಪತನಗೊಂಡವು. ಆಸ್ಟ್ರೇಲಿಯಾ 147 ರನ್‌ಗೆ ಆಲೌಟ್ ಆಯಿತು ಮತ್ತು ಇಂಗ್ಲೆಂಡ್ 119 ರನ್‌ಗಷ್ಟೇ ಸೀಮಿತವಾಯಿತು.
ಇನ್ನು ಇತ್ತೀಚಿನ ಪಂದ್ಯಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 172 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ (52), ಓಲಿ ಪೋಪ್ (46), ಮತ್ತು ಜೇಮಿ ಸ್ಮಿತ್ (33) ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿ ಹೊರಹೊಮ್ಮಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ 7 ವಿಕೆಟ್ ಕಬಳಿಸಿದರು. ಬ್ರೆಂಡನ್ ಡಾಗೆಟ್ ಎರಡು ಮತ್ತು ಗ್ರೀನ್ ಒಂದು ವಿಕೆಟ್ ಪಡೆದರು.
ನಂತರದಲ್ಲಿ, ಮೊದಲು ಬ್ಯಾಟ್ ಮಾಡಿದ ಆಸೀಸ್ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ನಾಥನ್ ಲಿಯಾನ್ (3) ಮತ್ತು ಬ್ರೆಂಡನ್ ಡಾಗೆಟ್ (0) ಕ್ರೀಸ್‌ನಲ್ಲಿದ್ದರು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಸ್ಕೋರ್‌ಗಿಂತ ಆಸ್ಟ್ರೇಲಿಯಾ ಇನ್ನೂ 49 ರನ್‌ಗಳ ಹಿಂದಿತ್ತು. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಲ್ಲಿ ಅಲೆಕ್ಸ್ ಕ್ಯಾರಿ (26), ಕ್ಯಾಮರೂನ್ ಗ್ರೀನ್ (24), ಟ್ರಾವಿಸ್ ಮೀಡ್ (21), ಮತ್ತು ಸ್ಟೀವ್ ಸ್ಮಿತ್ (17) ಉತ್ತಮ ಆರಂಭ ಪಡೆದರು. ಆದರೆ, ಅವುಗಳನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸುವಲ್ಲಿ ಎಡವಿದರು.
ಉಸ್ಮಾನ್ ಖವಾಜ (2) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಂಗ್ಲೆಂಡ್ ಬೌಲರ್‌ಗಳಲ್ಲಿ ಕ್ಯಾಪ್ಟನ್ ಬೆನ್ ಸ್ಟೋಕ್ಸ್ 5 ವಿಕೆಟ್ ಪಡೆದು ಮಿಂಚಿದರು. ಇನ್ನು ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸೆ ತಲಾ ಎರಡು ವಿಕೆಟ್ ಪಡೆದು ಈ ವಿಶೇಷ ದಾಖಲೆಗೆ ಅಣಿಯಾದರು,(ಏಜೆನ್ಸೀಸ್).