ಹಲ್ಲಿಗೆ ಕುರ್ತಾ ಹೊಲಿದಿದ್ದೇನೆಂದ ಭಾರತೀಯ
Kurta for Lizards : ವೇಗವಾಗಿ ಮುಂದುವರಿಯುತ್ತಿರುವ ಈ ಜಗತ್ತನ್ನು ಪ್ರಸ್ತುತ ಕೃತಕ ಬುದ್ಧಿಮತ್ತೆ ಆಳುತ್ತಿದೆ. ವಾಸ್ತವವನ್ನೇ ಸುಳ್ಳು ಅಂತ ನಂಬಿಸುವಷ್ಟರಮಟ್ಟಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೆಳೆದಿದೆ. ಡಿಜಿಟಲ್ ಲೋಕವನ್ನು ಆಳುತ್ತಿರುವ ಎಐ, ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ. ಇಂದಿನ ಯುವಕರು ಯಾವ ಮಟ್ಟಿಗೆ AI ಕಂಟೆಂಟ್ ಬಳಸುತ್ತಿದ್ದಾರೆಂದು ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ. ನೀವು ಸಾಮಾಜಿಕ ಜಾಲತಾಣವನ್ನು ತೆರೆದರೆ ಸಾಕು ಬರೀ ಎಐ ವಿಡಿಯೋಗಳೇ ತುಂಬಿ ತುಳುಕುತ್ತವೆ. ವಿಡಿಯೋ ಮತ್ತು ಫೋಟೋಗಳು ಹೇಗಿರುತ್ತವೆ ಅಂದರೆ, ವಾಸ್ತವದ ತಲೆಯ ಮೇಲೆ ಹೊಡೆದಂತೆ ಇರುತ್ತದೆ. ನೋಡಿದವರು ಸುಲಭವಾಗಿ ನಂಬುವಂತೆ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿದೆ.
ಈಗ ಎಲ್ಲರ ಗಮನ ಸೆಳೆದಿರುವ ವಿಡಿಯೋದಲ್ಲಿ ಹಲ್ಲಿಯು ಬಟ್ಟೆ ಧರಿಸಿರುವುದನ್ನು ಕಾಣಬಹುದು. ನಮ್ಮ ಮನೆಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾವು ನೋಡುವ ಹಲ್ಲಿಯು ಇದೇ ರೀತಿ ಇರಬೇಕೆಂದು ಹೇಳಿ ವಿಡಿಯೋವನ್ನು ಹರಿಬಿಡಲಾಗಿದೆ. ಹಲ್ಲಿಗೆ ಬಟ್ಟೆ ಹೊಲಿಯುವ ವಿಶ್ವದ ಮೊದಲ ವ್ಯಕ್ತಿ ನಾನೇ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ವಿಶಿಷ್ಟ ಕಲ್ಪನೆಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ಆದಾಗ್ಯೂ, ಈ ವಿಡಿಯೋವನ್ನು AI ಬಳಸಿ ಮಾಡಲಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ.
ಅಂದಹಾಗೆ, ಗಂಧರ್ವ್ ಎಂಬ ಯುವಕ ತನ್ನ ಶಾಕ್ ಪಿಕ್ಸೆಲ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾನೆ. ನೋಡಿ ಸ್ನೇಹಿತರೇ, ಇದು ನಾನೇ ಮಾಡಿದ ಉಡುಗೆ. ಮನುಷ್ಯರಿಗೆ ಸಾವಿರಾರು ವಿನ್ಯಾಸಗಳು ಲಭ್ಯವಿರುವಾಗ ಹಲ್ಲಿಗಳಿಗೆ ಏಕೆ ಬೇಡ? ನೋಡಿ, ಇದು ಭಾರತದ ಮೊದಲ ಹಲ್ಲಿ ಉಡುಗೆ. ಇದರ ಬೆಲೆ ಕೇವಲ 20 ರೂಪಾಯಿ. ಇದು ನೋಡಲು ಸುಂದರವಾಗಿಲ್ಲವೇ? ಎಂದು ಗಂಧರ್ವ್ ವಿಡಿಯೋದಲ್ಲಿ ಕೇಳಿದ್ದಾರೆ. ಅಲ್ಲದೆ, ವಿಡಿಯೋದಲ್ಲಿ, ತಮ್ಮ ಕೈಯಿಂದ ಮಾಡಿರುವುದು ಎನ್ನಲಾದ ಹಲ್ಲಿಯ ಉಡುಪನ್ನು ತೋರಿಸುತ್ತಾರೆ. ನಂತರ, ಹಲ್ಲಿ ಆ ಉಡುಪನ್ನು ಧರಿಸಿ ಗೋಡೆಯ ಉದ್ದಕ್ಕೂ ಚಲಿಸುತ್ತಿರುವುದನ್ನು ಕಾಣಬಹುದು.
ವಿಡಿಯೋ ವೈರಲ್ ಆದ ನಂತರ, ಅನೇಕ ಜನರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಿಮ್ಮ ಹಲ್ಲಿ ಸರ್ ಈಗ ಏನು ಬಯಸುತ್ತಾರೆ? ಎಂದು ನೆಟ್ಟಿಗನೊಬ್ಬ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ನೀವು ಬಟ್ಟೆಗಳನ್ನು ನೇಪಾಳಕ್ಕೆ ಕಳುಹಿಸಬಹುದೇ? ಅದನ್ನು ನಾನು ನನ್ನ ಚಿಕ್ಕ ತಂಗಿಗೆ ಉಡುಗೊರೆಯಾಗಿ ನೀಡಲು ಬಯಸುತ್ತೇನೆ ಎಂದು ಇನ್ನೊಬ್ಬ ಕಾಮೆಂಟ್ ಮಾಡಿದ್ದಾನೆ.
ಹಲ್ಲಿಗೆ ಹೇಗೆ ಉಡುಗೆ ತೊಡಿಸುವುದು ಎಂಬುದರ ಕುರಿತು ಟ್ಯುಟೋರಿಯಲ್ ವಿಡಿಯೋವನ್ನು ಪೋಸ್ಟ್ ಮಾಡಬಹುದೇ? ಇದು ಎಐ ವಿಡಿಯೋ ಅನ್ನೋದು ನಮಗೆ ಚೆನ್ನಾಗಿ ಗೊತ್ತು. ಆದರೂ, ಈ ವಿಡಿಯೋ ಎಷ್ಟು ನೈಜವಾಗಿದೆ ಎಂದೆಲ್ಲ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು 2 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ, (ಏಜೆನ್ಸೀಸ್).