ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಭಾರತದ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ 
ದೇಶ

ಭಾರತೀಯ ರೈತರು, ಉದ್ಯಮಿಗಳಿಗೆ ಇದು ಕೇಂದ್ರದ ಡೆತ್ ವಾರಂಟ್! ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಎಎಪಿ ಆಕ್ರೋಶ | India-US Trade Deal

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ
  • ಈ ಒಪ್ಪಂದವು ಭಾರತದ ರೈತರಿಗೆ ಮತ್ತು ಉದ್ಯಮಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಡೆತ್ ವಾರಂಟ್
  • ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಆಮ್ ಆದ್ಮಿ ಪಕ್ಷ ವಿರೋಧ
ನವದೆಹಲಿ: ಶನಿವಾರ (ಫೆ.21) ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ (India-US Trade Deal) ದ ಕುರಿತು ಕೇಂದ್ರ ಸರ್ಕಾರದ ಮೇಲೆ, ಆಮ್ ಆದ್ಮಿ ಪಕ್ಷ (ಎಎಪಿ) ತೀವ್ರ ವಾಗ್ದಾಳಿ ನಡೆಸಿದ್ದು, ಇದು ಭಾರತೀಯ ರೈತರ ಮತ್ತು ಉದ್ಯಮಿಗಳಿಗೆ ನೀಡಿರುವ ಡೆತ್ ವಾರಂಟ್ ಎಂದು ಕರೆದಿದೆ.
ಈ ಒಪ್ಪಂದಿಂದ ಭಾರತಕ್ಕೆ ಯಾವುದೇ ಉಪಯೋಗವಿಲ್ಲ ಆದರೆ ಅಮೆರಿಕಕ್ಕೆ ಇದು ಲಾಭದಾಯವಾಗಿದೆ ಎಂದು ಎಎಪಿ ಆರೋಪಿಸಿದೆ. ಭಾರತದ ಜತೆಗಿನ ವ್ಯಾಪಾರ ಒಪ್ಪಂದದಿಂದ ನಾವು ಸುಂಕಗಳನ್ನು ಪಾವತಿಸುವುದಿಲ್ಲ, ಆದರೆ ಅವರು ಸುಂಕಗಳನ್ನು ಪಾವತಿಸುತ್ತಾರೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ ಉಲ್ಲೇಖಿಸಿದೆ.
ಶುಕ್ರವಾರ (ಫೆ.20) ಈ ಕುರಿತು ತೀರ್ಪಿನ್ನು ನೀಡಿದ ಅಮೆರಿಕದ ಸುಪ್ರೀಂ ಕೋರ್ಟ್, ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ಟ್ರಂಪ್ ವಿಧಿಸಿದ ವಿಶ್ವಾದ್ಯಂತ ಸುಂಕಗಳನ್ನು ಅಮಾನ್ಯಗೊಳಿಸಿದೆ. ಹಾಗೆಯೇ 1977 ರ ಶಾಸನವು ಅಧ್ಯಕ್ಷರಿಗೆ ಸುಂಕಗಳನ್ನು ವಿಧಿಸುವ ಅಧಿಕಾರವನ್ನು ನೀಡುವುದಿಲ್ಲ ಎಂದು ತೀರ್ಪುನ್ನು ನೀಡಿದೆ.
ತೀರ್ಪಿನ ಹೊರತಾಗಿಯೂ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಟ್ರಂಪ್ ಹೇಳಿದರು. ಆದ್ದರಿಂದ ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಇದು ಈಗ ನ್ಯಾಯಯುತ ಒಪ್ಪಂದವಾಗಿದೆ. ಮತ್ತು ನಾವು ಅವರಿಗೆ ಸುಂಕವನ್ನು ಪಾವತಿಸುತ್ತಿಲ್ಲ, ಆದರೆ ಅವರು ಸುಂಕವನ್ನು ಪಾವತಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಎಎಪಿ, ಮೋದಿ ಸರ್ಕಾರವು ವ್ಯಾಪಾರ ಒಪ್ಪಂದವನ್ನು ರಾಜತಾಂತ್ರಿಕ ವಿಜಯವೆಂದು ಬಿಂಬಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿತು. ಭಾರತ ಸುಂಕವನ್ನು ಪಾವತಿಸುತ್ತದೆ, ಆದರೆ ಅಮೆರಿಕ ಪಾವತಿಸುವುದಿಲ್ಲ ಎಂಬ ಟ್ರಂಪ್ ಅವರ ಹೇಳಿಕೆಯು ಸಮತೋಲಿತ ಒಪ್ಪಂದವನ್ನು ಸಾಧಿಸುವ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿದೆ ಎಂದು ಪಕ್ಷ ಹೇಳಿದೆ.
ಎಎಪಿ ವ್ಯಾಪಾರ ಒಪ್ಪಂದವು ಭಾರತೀಯ ವ್ಯಾಪಾರಿಗಳು ಮತ್ತು ರೈತರಿಗೆ ತೀವ್ರವಾಗಿ ಹಾನಿ ಮಾಡುತ್ತದೆ, ಈ ಒಪ್ಪಂದವು ಭಾರತದ ರೈತರಿಗೆ ಮತ್ತು ಉದ್ಯಮಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಡೆತ್ ವಾರಂಟ್ ಆಗಿದೆ ಎಂದು ಟೀಕಿಸಿದೆ,(ಏಜನ್ಸೀಸ್​).