ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ದೆಹಲಿ ಸ್ಫೋಟದ(Delhi blast) ಆರೋಪಿ ಡಾ ಉಮರ್ ನಬಿ. 
ದೇಶ

ಇದು ಭಯೋತ್ಪಾದನೆ ಅಲ್ಲದೆ, ಬೇರೇನೂ ಅಲ್ಲ: ದೆಹಲಿ ಸ್ಫೋಟದ ಶಂಕಿತ ಉಗ್ರ ಡಾ.ಉಮರ್ ವೀಡಿಯೊ ಬಗ್ಗೆ ಓವೈಸಿ ಹೇಳಿದ್ದೇನು..?Delhi blast

ನವದೆಹಲಿ: ದೆಹಲಿ ಸ್ಫೋಟದ(Delhi blast) ಆರೋಪಿ ಡಾ. ಉಮರ್ ಮುಹಮ್ಮದ್ ವಿಡಿಯೋಗೆ ಪ್ರತಿಕ್ರಿಯಿಸಿರುವ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಆತ್ಮಹತ್ಯಾ ಬಾಂಬ್ ದಾಳಿಯನ್ನು ಸಮರ್ಥಿಸುತ್ತಿದ್ದಾನೆ ಮತ್ತು ಅಮಾಯಕರನ್ನು ಕೊಲ್ಲುವುದು ಭಯೋತ್ಪಾದನೆಯಾಗುತ್ತದೆ ಎಂದು ಬುಧವಾರ (ನ.19) ಕಿಡಿಕಾರಿದ್ದಾರೆ.
ಮಂಗಳವಾರ, ಡಾ. ಉಮರ್​ನ ಸ್ವಯಂ-ರೆಕಾರ್ಡ್ ಮಾಡಿದ ವೀಡಿಯೊ ಕಾಣಿಸಿಕೊಂಡಿದ್ದು, ಈ ವಿಡಿಯೋದಲ್ಲಿ ಉಮರ್​ ದೆಹಲಿ ಸ್ಪೋಟವು ದುರುದ್ದೇಶಪೂರಿತ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು, ಬಾಂಬ್​ ಸ್ಪೋಟವನ್ನು ಹುತಾತ್ಮ ಕಾರ್ಯಾಚರಣೆ ಎಂದು ಉಲ್ಲೇಖಿಸಿದ್ದಾನೆ.
ಈ ಬಗ್ಗೆ ಎಕ್ಸ್​ ಪೋಸ್ಟ್​​​ನಲ್ಲಿ ಪ್ರತಿಕ್ರಿಯಿಸಿರುವ ಓವೈಸಿ, ದೆಹಲಿ ಸ್ಫೋಟದ ಆರೋಪಿ ಉಮರ್ ನಬಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ಹುತಾತ್ಮತೆ ಎಂದು ಸಮರ್ಥಿಸಿಕೊಳ್ಳುವ ವೀಡಿಯೊ ಇದೆ ಮತ್ತು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅಲ್ಲದೆ, ಇಸ್ಲಾಂನಲ್ಲಿ ಆತ್ಮಹತ್ಯೆ ಹರಾಮ್, ಮತ್ತು ಅಮಾಯಕರನ್ನು ಕೊಲ್ಲುವುದು ಗಂಭೀರ ಪಾಪ ಎಂದು ಪ್ರತಿಪಾದಿಸಲಾಗಿದೆ. ಇಂತಹ ಕೃತ್ಯಗಳು ದೇಶದ ಕಾನೂನಿಗೆ ವಿರುದ್ಧವಾಗಿವೆ. ಇವುಗಳನ್ನು ಯಾವುದೇ ರೀತಿಯಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿಲ್ಲ. ಇದು ಭಯೋತ್ಪಾದನೆಯೇ ಹೊರತು ಬೇರೇನೂ ಅಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು ಮಾತನಾಡಿದ ಓವೈಸಿ, ದೆಹಲಿ ಬಾಂಬ್​ ದಾಳಿಯ ಬಗ್ಗೆ ಅವರು ಕೇಂದ್ರವನ್ನು ಪ್ರಶ್ನಿಸಿದ್ದು, ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆಹಚ್ಚುವಲ್ಲಿ ವಿಫಲವಾದ ಕಾರಣ ಕೇಂದ್ರವು ಹೊಣೆಗಾರಿಕೆಯನ್ನು ಹೊರಬೇಕು ಎಂದಿದ್ದಾರೆ. 
ಅಲ್ಲದೆ, ಆಪರೇಷನ್ ಸಿಂಧೂರ ಮತ್ತು ಮಹಾದೇವ್​ ಕಾರ್ಯಚರಣೆಯ ಸಮಯದಲ್ಲಿ ಅಮಿತ್​ ಷಾ, ಕಳೆದ ಆರು ತಿಂಗಳಲ್ಲಿ ಯಾವುದೇ ಕಾಶ್ಮೀರಿ ಯುವಕರು ಭಯೋತ್ಪಾದಕ ಗುಂಪುಗಳಿಗೆ ಸೇರಿಲ್ಲ ಎಂದು ಸಂಸತ್ತಿಗೆ ತಿಳಿಸಿದ್ದರು ಎಂಬುದನ್ನು  ನೆನಪಿಸಿದ್ದಾರೆ. ಈಗ ಈ ಗುಂಪು ಎಲ್ಲಿಂದ ಬಂತು? ಈ ಗುಂಪನ್ನು ಪತ್ತೆಹಚ್ಚುವಲ್ಲಿ ವಿಫಲಕ್ಕೆ ಯಾರು ಹೊಣೆ? ಎಂದು ಓವೈಸಿ ಪ್ರಶ್ನಿಸಿದ್ದಾರೆ.

ದೆಹಲಿ ಸ್ಫೋಟದ ನಂತರ ಉಮರ್ ನಬಿ ಹೇಳಿದ್ದೇನು..?

ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹರಿದಾಡುತ್ತಿರುವ ಈ ವೀಡಿಯೊದಲ್ಲಿ ಉಮರ್ ಆತ್ಮಹತ್ಯಾ ದಾಳಿಗಳ ಬಗ್ಗೆ ದೀರ್ಘವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.ವೀಡಿಯೊದಲ್ಲಿ ಬಹಳ ತಪ್ಪಾಗಿ ಅರ್ಥೈಸಿಕೊಳ್ಳಲಾದ ಪರಿಕಲ್ಪನೆಗಳಲ್ಲಿ ಒಂದು ಆತ್ಮಹತ್ಯಾ ಬಾಂಬ್ ದಾಳಿ ಎಂದು ಲೇಬಲ್ ಮಾಡಲಾದ ಪರಿಕಲ್ಪನೆಯಾಗಿದೆ. ಇದು ಹುತಾತ್ಮ ಕಾರ್ಯಾಚರಣೆಯಾಗಿದ್ದು, ಇಸ್ಲಾಂನಲ್ಲಿ ಇದನ್ನೂ ಹೇಳಲಾಗಿದೆ ಎಂದು ತಿಳಿಸಿದ್ದಾನೆ. 
ನವೆಂಬರ್ 10ರಂದು, ಉಮರ್ ಚಲಾಯಿಸುತ್ತಿದ್ದ ಹುಂಡೈ ಐ20 ಕಾರು ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸ್ಫೋಟಗೊಂಡು 13 ಜನ ಮೃತಪಟ್ಟಿದ್ದರು ಮತ್ತು 20 ಜನರು ಗಾಯಗೊಂಡಿದ್ದರು. ನಂತರ ನಡೆದ ತನಿಖೆಯಲ್ಲಿ ಫರಿದಾಬಾದ್‌ನಲ್ಲಿ ನಡೆದ ಬೃಹತ್ ಸ್ಫೋಟಕ ಪತ್ತೆಯಲ್ಲಿ ಉಮರ್‌ನ ಸಂಪರ್ಕ ಬಹಿರಂಗಪಡಿಸಲಾಗಿತು. ವೈದ್ಯರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಒಳಗೊಂಡ ಹೊಸದಾಗಿ ಹೊರಹೊಮ್ಮಿದ ಭಯೋತ್ಪಾದಕ ಮಾಡ್ಯೂಲ್‌ನ ಭಾಗವಾಗಿದ್ದನು ಎಂದು ಏಜೆನ್ಸಿಗಳು ಹೇಳಿವೆ,(ಏಜೆನ್ಸೀಸ್).