Amit Shah | ಗೃಹ ಸಚಿವ ಅಮಿತ್ ಷಾ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ದೇಶದ ಆಂತರಿಕ ಭದ್ರತೆ ಅತ್ಯಂತ ಗಟ್ಟಿಯಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬರುವ 15-20 ವರ್ಷಗಳಲ್ಲಿ ಎದುರಾಗಬಹುದಾದ ಒಳನುಸುಳುವಿಕೆ, ಭಯೋತ್ಪಾದನೆ ಮತ್ತು ಡ್ರಗ್ಸ್ ಸಾಗಾಣಿಕೆಯಂತಹ ಬೆದರಿಕೆಗಳನ್ನು ಮೊದಲೇ ಗುರುತಿಸಿ ತಡೆಯಲು ಭದ್ರತಾ ಸಂಸ್ಥೆಗಳು ಈಗಿನಿಂದಲೇ ಸಿದ್ಧವಾಗಬೇಕು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯನ್ನು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಸಂಯೋಜಿಸಿ ಮಾತನಾಡಿದ ಗೃಹ ಸಚಿವರು, ಆಂತರಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸದೆ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸಲು ಸಾಧ್ಯವಿಲ್ಲ ಎಂದರು. ಮಾದಕ ದ್ರವ್ಯ ಸಾಗಾಣಿಕೆ, ನಕ್ಸಲಿಸಂ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಅಶಾಂತಿಯಂತಹ ಸವಾಲುಗಳು ಉಲ್ಬಣಗೊಳ್ಳುವ ಮೊದಲೇ ಹಿಂದಿನ ಸರ್ಕಾರಗಳು ಅವುಗಳನ್ನು ಊಹಿಸಿ ನಿಗ್ರಹಿಸಿದ್ದರೆ, ದೇಶವು ದಶಕಗಳ ಕಾಲ ಭದ್ರತೆ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತಿರಲಿಲ್ಲ ಎಂದು ಅವರು ವಾದಿಸಿದರು.
ಪೊಲೀಸ್ ಪಡೆಗಳಿಗೆ ಸಾಧನೆಯ ಶ್ರೇಯಸ್ಸು!...
ತಮ್ಮ ಪ್ರಕಾರ ದೇಶದ ಆಂತರಿಕ ಭದ್ರತೆಗೆ ಪ್ರಮುಖ ಮೂರು ಹಾಟ್‌ಸ್ಪಾಟ್‌ಗಳಾಗಿದ್ದ ಪ್ರದೇಶಗಳಿಂದ ಎದುರಾಗಿದ್ದ ಬೆದರಿಕೆಗಳನ್ನು ಭಾರತವು ಯಶಸ್ವಿಯಾಗಿ ಮೆಟ್ಟಿ ನಿಂತಿದೆ ಎಂದು ಷಾ ಹೇಳಿದರು. ಈ ಸಾಧನೆಯ ಶ್ರೇಯಸ್ಸನ್ನು ರಾಜ್ಯ ಪೊಲೀಸ್ ಪಡೆಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗೆ ನೀಡಿದ ಅವರು, ಇದು ನಿರಂತರ ಸಮನ್ವಯ ಮತ್ತು ನಿರ್ಣಾಯಕ ಕ್ರಮಗಳ ಫಲಿತಾಂಶವಾಗಿದೆ ಎಂದು ಬಣ್ಣಿಸಿದರು.
ದೀರ್ಘಕಾಲದ ಯೋಜನೆಯ ಅಗತ್ಯವನ್ನು ಒತ್ತಿ ಹೇಳಿದ ಗೃಹ ಸಚಿವರು, ಮುಂದಿನ 15 ರಿಂದ 20 ವರ್ಷಗಳಲ್ಲಿ ದೇಶದ ಭದ್ರತಾ ವಾತಾವರಣವನ್ನು ರೂಪಿಸಬಹುದಾದ ಪ್ರವೃತ್ತಿಗಳ ಮೇಲೆ ಗಮನ ಹರಿಸುವಂತೆ ಗೂಢಚಾರ ಮತ್ತು ಭದ್ರತಾ ಸಂಸ್ಥೆಗಳಿಗೆ ಆಗ್ರಹಿಸಿದರು. ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ಸಮಾವೇಶವು ಭವಿಷ್ಯದ ಸವಾಲುಗಳನ್ನು ಮುಂಚಿತವಾಗಿಯೇ ಗುರುತಿಸಬೇಕು ಮತ್ತು ಅವು ದೊಡ್ಡ ಬಿಕ್ಕಟ್ಟಾಗಿ ಬೆಳೆಯುವ ಮೊದಲೇ ಅವುಗಳನ್ನು ಚಿವುಟಿ ಹಾಕುವ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.
ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸುಧಾರಣೆಗಳ ಕುರಿತು ಮಾತನಾಡಿದ ಷಾ, ಮುಂಬರುವ ಒಂದು ವರ್ಷದೊಳಗೆ ಮೂರು ಹೊಸ ಕ್ರಿಮಿನಲ್ ಕಾಯ್ದೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು. ಅಪರಾಧ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಮಟ್ಟದವರೆಗೆ ಮೂರು ವರ್ಷಗಳ ಒಳಗಾಗಿ ಇತ್ಯರ್ಥಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಶಿಕ್ಷೆಯ ಪ್ರಮಾಣವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಈ ಸುಧಾರಣೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಗಡಿ ಭದ್ರತೆಯನ್ನು ಬಲಪಡಿಸುವ ಪ್ರಯತ್ನಗಳನ್ನು ಗೃಹ ಸಚಿವರು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರವು ಕಳೆದ ಎಂಟು ತಿಂಗಳುಗಳಲ್ಲಿ ಎಲ್ಲಾ ಭೂ ಗಡಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಅವರೊಂದಿಗೆ ನಾಲ್ಕು ಕಂಬಗಳ ಸಮಗ್ರ ಗಡಿ ಭದ್ರತಾ ಚೌಕಟ್ಟನ್ನು ಹಂಚಿಕೊಂಡಿದೆ ಎಂದರು. ಅಲ್ಪಾವಧಿಯಲ್ಲೇ ಭಾರತವನ್ನು ಅಕ್ರಮ ಒಳನುಸುಳುವಿಕೆಯಿಂದ ಮುಕ್ತಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಅಮಿತ್ ಷಾ ತಿಳಿಸಿದರು.
ಈ ದೇಶವು ಧರ್ಮಶಾಲೆಯಲ್ಲ ಮತ್ತು ಈ ದೇಶದ ನಾಗರಿಕರಿಗೆ ಮಾತ್ರ ಈ ದೇಶದಲ್ಲಿ ವಾಸಿಸುವ ಹಕ್ಕಿದೆ, ಅಕ್ರಮ ಒಳನುಸುಳುಕೋರರು ರಾಷ್ಟ್ರೀಯ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ಜನಸಂಖ್ಯಾ ಸಮತೋಲನಕ್ಕೆ ಅಪಾಯವನ್ನುಂಟುಮಾಡುತ್ತಾರೆ ಎಂದು ಅವರು ಷಾ ಎಚ್ಚರಿಸಿದರು.
ಭಯೋತ್ಪಾದನಾ ವಿರೋಧಿ ಯತ್ನಗಳ ಕುರಿತು ಮಾತನಾಡಿದ ಗೃಹ ಸಚಿವರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧದ ನಂತರ ಅದರ ವಿರುದ್ಧ ನಡೆಸಿದ ಕಾರ್ಯಾಚರಣೆಯನ್ನು ಉಲ್ಲೇಖಿಸಿ, ಇದನ್ನು ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಿಣಾಮಕಾರಿ ಸಮನ್ವಯಕ್ಕೆ ಗಮನಾರ್ಹ ಉದಾಹರಣೆ ಎಂದು ಬಣ್ಣಿಸಿದರು. ಭಯೋತ್ಪಾದಕ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಹಾರ್ (PRAHAR) ಕಾರ್ಯತಂತ್ರವು ಕೇವಲ ನೀತಿ ದಾಖಲೆಗಳಿಗೆ ಸೀಮಿತವಾಗದೆ ದೈನಂದಿನ ಭದ್ರತಾ ಕಾರ್ಯಾಚರಣೆಗಳ ಭಾಗವಾಗಬೇಕು ಎಂದು ಸಲಹೆ ನೀಡಿದರು.
ಮಾದಕ ದ್ರವ್ಯಗಳ ಸವಾಲನ್ನು ಎದುರಿಸಲು, ಎಲ್ಲಾ ರಾಜ್ಯಗಳು 2026 ರಿಂದ 2029 ರವರೆಗಿನ ಮಾದಕ ದ್ರವ್ಯ ನಿಯಂತ್ರಣ ದೃಷ್ಟಿಕೋನ ದಾಖಲೆಯನ್ನು (Narcotics Control Vision Document 2026-2029) ತಳಮಟ್ಟದಲ್ಲಿ ಜಾರಿಗೆ ತರಲು ಗೃಹ ಸಚಿವರು ಸೂಚಿಸಿದರು. ಡ್ರಗ್ಸ್ ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಭವಿಷ್ಯದ ಪೀಳಿಗೆಯನ್ನು ಮಾದಕ ದ್ರವ್ಯಗಳ ಹಾವಳಿಯಿಂದ ರಕ್ಷಿಸಲು ಪೊಲೀಸರು ಗುರುತಿಸಿ, ಧ್ವಂಸಗೊಳಿಸಿ ಮತ್ತು ನಿರ್ನಾಮ ಮಾಡಿ (Detect, Disrupt and Destroy) ಕಾರ್ಯತಂತ್ರವನ್ನು ಅನುಸರಿಸಬೇಕು ಎಂದು ಅವರು ಒತ್ತಾಯಿಸಿದರು.
ಪೊಲೀಸಿಂಗ್ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬೆಳೆಯುತ್ತಿರುವ ಪಾತ್ರವನ್ನು ಎತ್ತಿಹಿಡಿದ ಷಾ, ಸಿಸಿಟಿಎನ್ಎಸ್, ಈಸಿಜೆಎಸ್, ಎನ್ಎಟಿಜಿಆರ್ಡಿ ಮತ್ತು ಎನ್ಎಎಫ್ಐಎಸ್ ಅನ್ನು ಸಂಯೋಜಿಸುವ ಸಮಗ್ರ ಡೇಟಾಬೇಸ್‌ಗಳು ಶಕ್ತಿಯುತ ಗೂಢಚಾರ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿವೆ ಎಂದರು. ಕ್ರಿಯಾಶೀಲ ಗೂಢಚಾರ ಮಾಹಿತಿಯನ್ನು ರೂಪಿಸಲು ಮತ್ತು ಭವಿಷ್ಯದ ಬೆದರಿಕೆಗಳನ್ನು ಊಹಿಸಲು ಕೃತಕ ಬುದ್ಧಿಮತ್ತೆ (ಎಐ), ಡೇಟಾ ಸಂಯೋಜನೆ ಮತ್ತು ವರ್ತನ ವಿನ್ಯಾಸ ವಿಶ್ಲೇಷಣೆಯನ್ನು (behavioural pattern analysis) ಬಳಸಿಕೊಳ್ಳುವಂತೆ ಅವರು ಯುವ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಆರ್ಥಿಕ ಅಪರಾಧಿಗಳು ಮತ್ತು ತಲೆಮರೆಸಿಕೊಂಡವರನ್ನು ಭಾರತಕ್ಕೆ ವಾಪಸ್ ಕರೆತರಲು ಮೋದಿ ಸರ್ಕಾರವು ಕಾರ್ಯವಿಧಾನಗಳನ್ನು ಬಲಪಡಿಸಿದೆ. 2019 ಮತ್ತು 2026 ರ ನಡುವೆ ಸುಮಾರು 274 ತಲೆಮರೆಸಿಕೊಂಡ ಅಪರಾಧಿಗಳನ್ನು ಗಡೀಪಾರು ಮಾಡಲಾಗಿದೆ. ವಿದೇಶಗಳಲ್ಲಿ ಅಡಗಿರುವ ಅಪರಾಧಿಗಳನ್ನು ಭಾರತೀಯ ಕಾನೂನಿನ ವ್ಯಾಪ್ತಿಗೆ ತರುವುದನ್ನು ಖಚಿತಪಡಿಸಿಕೊಳ್ಳಲು ಅಮಿತ್ ಷಾ ಎಲ್ಲಾ ರಾಜ್ಯಗಳಿಗೆ ಆಗ್ರಹಿಸಿದರು(ಏಜೆನ್ಸೀಸ್).