Indore Tragedy: ಮಧ್ಯಪ್ರದೇಶದ ಇಂದೋರ್‌ನ ಭಾಗೀರಥಪುರದಲ್ಲಿ ಕಲುಷಿತ ನೀರು, ಸಂಸ್ಕರಿಸಿದ ಕುಡಿಯುವ ನೀರಿನ ಸರಬರಾಜಿಗೆ ಸೇರಿದ ಪರಿಣಾಮವಾಗಿ, ಅದನ್ನು ಸೇವಿಸಿದವರು ವಾಂತಿ-ಭೇದಿ ಸಮಸ್ಯೆಗೆ ತುತ್ತಾಗಿ ಸುಮಾರು 10 ಜನರು ಸಾವನ್ನಪ್ಪಿದ್ದು ಮತ್ತು ನೂರಾರು ಜನರು ಅಸ್ವಸ್ಥರಾಗಿದ್ದಾರೆ.
ಒಳಚರಂಡಿ ನೀರಿನಲ್ಲಿ ಕಂಡುಬರುವ ಇ. ಕೋಲಿ ಮತ್ತು ಕ್ಲೆಬ್ಸಿಯೆಲ್ಲಾ ಸೇರಿದಂತೆ ಮಲ ಕೋಲಿಫಾರ್ಮ್‌ಗಳನ್ನು ಪತ್ತೆಯಾಗಿದ್ದು, ಇವು ಮಾನವ ತ್ಯಾಜ್ಯದಿಂದ ಕಲುಷಿತಗೊಂಡಿವೆ ಎಂದು ನೀರಿನ ಮಾದರಿಗಳ ಪ್ರಾಥಮಿಕ ವರದಿಯಿಂದ ಧೃಡಪಟ್ಟಿದೆ.
ಇಂದೋರ್‌ನಲ್ಲಿ ಆಗಿದ್ದೇನು..?
ಭಾಗೀರಥಪುರದ ಪೊಲೀಸ್ ಹೊರಠಾಣೆ ಬಳಿಯ ಶೌಚಾಲಯ ಮತ್ತು ಒಳಚರಂಡಿ ಮಾರ್ಗದ ಕೆಳಗೆ ಅಥವಾ ಪಕ್ಕದಲ್ಲಿ ನರ್ಮದಾ ಕುಡಿಯುವ ನೀರಿನ ಪೈಪ್‌ಲೈನ್ ಸೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು. ಮಾನವ ತ್ಯಾಜ್ಯದಿಂದ ತುಂಬಿದ ಒಳಚರಂಡಿ ನೀರು ಈ ಗುಂಡಿಯ ಮೂಲಕ ಕುಡಿಯುವ ಪೂರೈಕೆಗೆ ನುಗ್ಗಿ, ಕುಡಿಯುವ ನೀರನ್ನು ಕಲುಷಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.
ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಸ್ಥಳೀಯ ಜನರು ಆಸ್ಪತ್ರೆಗಳಿಗೆ ದಾಖಲಾಗುವ ಮುನ್ನ, ದುರ್ವಾಸನೆ ಬೀರುವ, ಕಲುಷಿತ ನೀರಿನಿಂದಾಗಿ ದೂರು ನೀಡಿದ್ದರು. ಜನವರಿ ಆರಂಭದ ವೇಳೆಗೆ, 1,400 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ.
ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು
ಒಳಚರಂಡಿ ನೀರಿನಲ್ಲಿ ಕಂಡುಬರುವ ಜೀವಿಗಳಾದ ಇ. ಕೋಲಿ ಮತ್ತು ಕ್ಲೆಬ್ಸಿಯೆಲ್ಲಾ ಸೇರಿದಂತೆ ಮಲ ಕೋಲಿಫಾರ್ಮ್‌ಗಳನ್ನು ಪತ್ತೆಹಚ್ಚಿವೆ ಎಂದು ನೀರಿನ ಮಾದರಿಗಳ ಪ್ರಾಥಮಿಕ ವರದಿಗಳು ತಿಳಿಸಿದ್ದು, ಇವು ಮಾನವ ತ್ಯಾಜ್ಯದಿಂದ ಕಲುಷಿತಗೊಂಡಿವೆ ಎನ್ನಲಾಗಿದೆ.
ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಮಾನವನ ಕರುಳಿನಲ್ಲಿ ಹಾನಿ ಮಾಡದೆ ವಾಸಿಸುತ್ತವೆ, ಆದರೆ ಸಂಸ್ಕರಿಸಿದ ಕುಡಿಯುವ ನೀರಿನಲ್ಲಿ ಇದ್ದಾಗ ಅಪಾಯಕಾರಿ ಮಲ ಮಾಲಿನ್ಯವನ್ನು ಸೂಚಿಸುತ್ತವೆ ಎಂದು ತಿಳಿದುಬಂದಿದೆ. ಇ. ಕೋಲಿ ಮತ್ತು ಇದಕ್ಕೆ ಸಂಬಂಧಿಸಿದ ಕರುಳಿನ ಬ್ಯಾಕ್ಟೀರಿಯಾದ ರೋಗಕಾರಕ ತಳಿಗಳು ತೀವ್ರವಾದ ಜಠರದುರಿತಕ್ಕೆ ಕಾರಣವಾಗಬಹುದು, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಅಪಾರ ನೀರಿನಂಶದ ಅಥವಾ ರಕ್ತಸಿಕ್ತ ಅತಿಸಾರ, ವಾಂತಿ ಮತ್ತು ತ್ವರಿತ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇಂದೋರ್ ದುರಂತವು ಸಾಮಾನ್ಯ ಕರುಳಿನ ಸೂಕ್ಷ್ಮಜೀವಿಗಳಿಂದ ಹೇಗೆ ಶುರುವಾಯಿತು ಎನ್ನುವುದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ಈ ವೈಫಲ್ಯವು ನಿರಂತರ ಕೊಳಚೆನೀರು ಮುಖ್ಯ ಪುರಸಭೆಯ ಪೈಪ್‌ಲೈನ್‌ನೊಂದಿಗೆ ಮಿಶ್ರಣವಾಗಲು ಅವಕಾಶ ಮಾಡಿಕೊಟ್ಟಿತು, ಇದರಿಂದಾಗಿ ಸಾವಿರಾರು ಜನರು ಏಕಕಾಲದಲ್ಲಿ ಹೆಚ್ಚಿನ ಸಾಂಕ್ರಾಮಿಕ ಪ್ರಮಾಣಕ್ಕೆ ಒಳಗಾಗುತ್ತಾರೆ.
ಜನದಟ್ಟಣೆಯ ವಸತಿ, ತಡವಾದ ಪ್ರತಿಕ್ರಿಯೆ ಮತ್ತು ವೈದ್ಯಕೀಯ ಆರೈಕೆ ಅಡಚಣೆಯಿಂದಾಗಿ ಅನೇಕ ರೋಗಿಗಳು ತೀವ್ರ ನಿರ್ಜಲೀಕರಣದ ನಂತರವೇ ಆಸ್ಪತ್ರೆಗಳನ್ನು ತಲುಪಿದ್ದಾರೆ ಎನ್ನಲಾಗಿದ್ದು, ಇದೇ ಈ ದೊಡ್ಡಮಟ್ಟದ ದುರಂತಕ್ಕೆ ಕಾರಣವಾಗಿದೆ(ಏಜೆನ್ಸೀಸ್).